ಮಾ.19 ರಿಂದ ಶಿರಸಿ ಮಾರಿಕಾಂಬಾ ದೇವಿ ಜಾತ್ರೆ

ಸಮಗ್ರ ಪ್ರಭ ಸುದ್ದಿ
1 Min Read

ಶಿರಸಿ: ದಕ್ಷಿಣ ಭಾರತದ ಅತಿ ದೊಡ್ಡ ಜಾತ್ರೆ ಶಿರಸಿ‌ ಮಾರಿಕಾಂಬಾ ದೇವಿ ಜಾತ್ರೆ ಮಾರ್ಚ್‌ 19 ರಿಂದ 27 ರ ತನಕ ನಡೆಯಲಿದೆ.

ನಗರದ ಮಾರಿಕಾಂಬಾ ದೇವಾಲಯದಲ್ಲಿ ಭಾನುವಾರ ನಡೆದ ಜಾತ್ರಾ ಮುಹೂರ್ತ ನಿಗದಿ ಕಾರ್ಯಕ್ರಮದಲ್ಲಿ ಮುಹೂರ್ತ ನಿಗದಿಗೊಳಿಸಿ ಶರಣ್ ಆಚಾರ್ಯ ಅವರು ಪ್ರಕಟಿಸಿದರು.
ಪ್ರತೀ ಬದಲಿ ವರ್ಷಕ್ಕೆ ನಡೆಯುವ ಜಾತ್ರೆ ಈ ಜಾತ್ರೆ ಪೂರ್ವ ಉತ್ತರಾಂಗದ ಮೊದಲನೆಯ ಕಾರ್ಯಕ್ರಮ ಜ.31 ರಿಂದ ಆರಂಭವಾಗಲಿದೆ.

ರಥಕ್ಕೆ‌ ಕಲಶ ಪ್ರತಿಷ್ಠೆ, ಕಲ್ಯಾಣ ಪ್ರತಿಷ್ಠೆ ಮಾ.19 ರಂದು, 20 ರಂದು ಬೆಳಿಗ್ಗೆ ದೇವಿಯ ರಥೋತ್ಸವ,‌ 21 ರಿಂದ ಜಾತ್ರಾ ಗದ್ದುಗೆಯಲ್ಲಿ ಸೇವಾ‌ ಸ್ವೀಕಾರ 27 ರಂದು ಜಾತ್ರಾ ವಿಧಿ ವಿಧಾನಗಳು ಮುಗಿಯಲಿದ್ದು, ಯುಗಾದಿಗೆ ದೇವಾಲಯದಲ್ಲಿ ಮಾರಿಕಾಂಬಾ ದೇವಿ ಪುನರ್ ಪ್ರತಿಷ್ಠೆ ಆಗಲಿದೆ.

 

Share this Article