ಗದಗ: ದ್ವಿಚಕ್ರ ವಾಹನದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಗೋವಾ ರಾಜ್ಯದ ಮದ್ಯದ ಬಾಟಲಗಳನ್ನು ಅಬಕಾರಿ ಪೊಲೀಸ್ ದಾಳಿ ನಡೆಸಿ ದ್ವಿಚಕ್ರ ಸಮೇತವಾಗಿ ವಶಕ್ಕೆ ಪಡೆದಿದ್ದಾರೆ.
ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಕುಂದ್ರಳ್ಳಿ ಕ್ರಾಸ್ ಬಳಿ ಘಟನೆ ನಡೆದಿದ್ದು
ದ್ವಿಚಕ್ರ ವಾಹನದಲ್ಲಿ ಮದ್ಯ ಸಾಗಿಸೋವಾಗ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಒಟ್ಟು 6.69 ಲೀ ಮದ್ಯ ಜೊತೆಗೆ ಸಾಗಾಟಕ್ಕೆ ಬಳಸಿದ್ದ ದ್ವಿಚಕ್ರ ವಾಹನವನ್ನು
ವಶಕ್ಕೆ ಪಡೆದಿದ್ದಾರೆ.
ದಾಳಿ ವೇಳೆ ಮದ್ಯ ಸಾಗಿಸುತ್ತಿದ್ದ ವ್ಯಕ್ತಿ ಪರಾರಿಯಾಗಿದ್ದಾನೆ.
ದಾಳಿಯಲ್ಲಿ ಶಿರಹಟ್ಟಿ ವಲಯ ಅಬಕಾರಿ ನಿರೀಕ್ಷಕ ಸಂತೋಷ್ ರಡ್ಡೆರ್, ಸಿಬ್ಬಂದಿಗಳಾದ ಗಿರೀಶ್ ಮುದರೆಡ್ಡಿ, ನಿಂಗಪ್ಪ, ನದಾಫ್, ಸಂತೋಷ್ ಭಾಗಿಯಾಗಿದ್ದರು.