ಬಾಲಕಿಯರ ಸರಕಾರಿ ಬಾಲಮಂದಿರ ಲೋಕಾರ್ಪಣೆಗೊಳಿಸಿದ ಸಿಎಂ ಸಿದ್ದರಾಮಯ್ಯ

ಸಮಗ್ರ ಪ್ರಭ ಸುದ್ದಿ
1 Min Read

ಗದಗ : ನಗರದ ಸಂಭಾಪುರ ರಸ್ತೆಯಲ್ಲಿ ಅಂದಾಜು 199 ಲಕ್ಷ ರೂ.ಗಳ ಅನುದಾನದಲ್ಲಿ ನಿರ್ಮಾಣಗೊಂಡಂತಹ ಅತ್ಯಾಧುನಿಕ ಸೌಲಭ್ಯವುಳ್ಳ, ಸುಸಜ್ಜಿತ ಬಾಲಕಿಯರ ಸರಕಾರಿ ಬಾಲಮಂದಿರವನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಭಾನುವಾರದಂದು ಲೋಕಾರ್ಪಣೆಗೊಳಿಸಿದರು.

ಸಮಗ್ರ ಮಕ್ಕಳ ರಕ್ಷಣಾ ಯೋಜನೆಯನ್ನು 1-4-2022 ರ ಮಿಷನ್ ವಾತ್ಸಲ್ಯ ಎಂದು ಮರು ನಾಮಕರಣ ಮಾಡಿ ಯೋಜನೆಯನ್ನು ಜಾರಿಗೆ ತಂದಿದ್ದು ಗದಗ ಜಿಲ್ಲೆಯಲ್ಲಿ ಮಕ್ಕಳ ಪಾಲನೆ ಮತ್ತು ರಕ್ಷಣೆ ಅಗತ್ಯವಿರುವಂತಹ ಮಕ್ಕಳಾದ ಅನಾಥ, ನಿರ್ಗತಿಕ, ದೌರ್ಜನ್ಯ, ಹಿಂಸೆಗೆ ಒಳಪಟ್ಟ ಪ್ರಕೃತಿ ವಿಕೋಪಗಳಿಗೆ ಒಳಪಟ್ಟ ಮಕ್ಕಳು, ಕೌಟುಂಬಿಕ ಕಲಹದಿಂದ ಬೆರ್ಪಟ್ಟ ಮಕ್ಕಳು, ನಿರ್ಲಕ್ಷಕ್ಕೆ ಒಳಪಟ್ಟ ಮಕ್ಕಳು, ಖೈದಿ ಪಾಲಕರ ಮಕ್ಕಳು, ಭಿಕ್ಷಾಟನೆಯಿಂದ ರಕ್ಷಿಸಿದ ಮಕ್ಕಳು ಹಾಗೂ ಬಾಲ್ಯ ವಿವಾಹದಿಂದ ರಕ್ಷಿಸಿದ ಮಕ್ಕಳು ಹೀಗೆ ಇನ್ನಿತರೆ ಕಾರಣಾಂತರಗಳಿಂದ ಬಾಲಕಿಯರ ಸರಕಾರಿ ಬಾಲಮಂದಿರದಲ್ಲಿ ರಕ್ಷಣೆ ಮತ್ತು ಪೋಷಣೆಯನ್ನು ಪಡೆಯಬಹುದಾಗಿದೆ. ಈ ಬಾಲಕಿಯರ ಸರಕಾರಿ ಬಾಲಮಂದಿರವು 100 ಮಕ್ಕಳ ಸಾಮಥ್ರ್ಯವುಳ್ಳ ಕಟ್ಟಡವಾಗಿದ್ದು, ಈಗ ಗದಗನಲ್ಲಿ 43 ಮಕ್ಕಳು ರಕ್ಷಣೆ ಮತ್ತು ಪೋಷಣೆಯನ್ನು ಪಡೆಯುತ್ತಿದ್ದಾರೆ.

ಈ ಸಂದರ್ಭದಲ್ಲಿ ರಾಜ್ಯದ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಕೆ.ಪಾಟೀಲ, ಶಾಸಕರುಗಳಾದ ಜಿ.ಎಸ್.ಪಾಟೀಲ, ಮಾಜಿ ಸಚಿವ ಎಸ್.ಎಸ್.ಪಾಟೀಲ, ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್, ಜಿಲ್ಲಾ ಪೋಲಿಸ ವರಿಷ್ಠಾಧಿಕಾರಿ ಬಿ.ಎಸ್.ನೇಮಗೌಡ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಪಿ.ವಾಯ್.ಶೆಟ್ಟಪ್ಪನವರ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ರಾಧಾ ಮಣ್ಣೂರ ಸೇರಿದಂತೆ ಗಣ್ಯರು, ಸಾರ್ವಜನಿಕರು ಉಪಸ್ಥಿತರಿದ್ದರು.

Share this Article