ಗದಗ: ನಗರದ ಶಬರಿ ಗಾರ್ಮೆಂಟ್ಸ ನಲ್ಲಿ ಪಂಚಾಗವುಳ್ಳ 2024 ನೇ ವರ್ಷದ ನೂತನ ದಿನದರ್ಶಿಕೆಯನ್ನು ರವಿವಾರ ರಾಯಚೋಟೆಶ್ವರ ದೇವಸ್ಥಾನ ಹತ್ತಿರ ಗಂಜಿ ಬಸವೇಶ್ವರ ವೃತ್ತದಲ್ಲಿರುವ ಗಾರ್ಮೆಂಟ್ಸನಲ್ಲಿ ಅಯ್ಯಪ್ಪ ಸ್ವಾಮಿ ಪೂಜೆ ಸಲ್ಲಿಸಿ ನೂತನ ದಿನದರ್ಶಿಕೆಬಿಡುಗಡೆ ಮಾಡಲಾಯಿತು.
ಈ ಸಂಧರ್ಭದಲ್ಲಿ ಮಾತನಾಡಿದ ಹಿರಿಯ ಗುರುಸ್ವಾಮಿಗಳಾದ ನಾಗರಾಜ ಬಾಗಲಕೋಟ ಮಾತನಾಡಿ ಶಬರಿ ಗಾರ್ಮೆಂಟ್ಸನಲ್ಲಿ ಸಾರ್ವಜನಿಕರಿಗೆ ಬೇಕಾದ ಉತ್ತಮ ಗುಣಮಟ್ಟ ಬಟ್ಟೆಗಳು ದೊರೆಯುತ್ತಿದ್ದು ವಿವಿಧ ಬಗೆಯ ಬಟ್ಟೆಗಳ ಸಿದ್ದ ಉಡುಪುಗಳ ಮಾರುಕಟ್ಟೆಯಲ್ಲಿ ಉತ್ತಮ ರೀತಿಯಲ್ಲಿ ಬೇಡಿಕೆ ಇದ್ದು ಬೇಡಿಕೆ ಗ್ರಾಹಕರ ಬೇಡಿಕೆ ಅನುಗುಣವಾಗಿ ಶಬರಿ ಗಾರ್ಮೆಂಟ್ಸ ಗ್ರಾಹಕರ ಅನುಕೂಲವಾದ ಬಟ್ಟೆ ಮಾರಾಟ ಹಾಗೂ ತಯಾರಿಕೆ ನಡೆಸಲಿ ಎಂದು ಶುಭ ಹಾರೈಸಿ ಆಶೀರ್ವಾದಿಸಿದರು.
ಕಾರ್ಯಕ್ರಮದಲ್ಲಿ ಗುರುಸ್ವಾಮಿಗಳಾದ ವೀರೂಪಾಕ್ಷ ಪೋಲಿಸ ಪಾಟೀಲ,
ಆನಂದ ಕಂಬಳಿ, ಸೇರಿದಂತೆ ಅಯ್ಯಪ್ಪ ಮಾಲಾದಾರಿಗಳು ಶಬರಿ ಗಾರ್ಮೆಂಟ್ಸ ಮಾಲೀಕರು,ಸಿಬ್ಬಂದಿವರ್ಗ ಸೇರಿದಂತೆ ಕುಟುಂಬ ಸದಸ್ಯರು ಪಾಲ್ಗೊಂಡಿದ್ದರು.