ಗದಗ: ಜಮೀನು ಕಾಯುತಿದ್ದ ವ್ಯಕ್ತಿಯ ರುಂಡ ಕತ್ತರಿಸಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಭಂದಿಸಿದಂತೆ ತನಿಖೆ ಮುಂದುವರೆದಿದ್ದು ಕೊಲೆ ನಡೆದ ಪಕ್ಕದ ಜಮೀನಿನಲ್ಲಿ ಕೊಲೆಯಾದ ವ್ಯಕ್ತಿಯ ರುಂಡ ಪತ್ತೆಯಾಗಿದೆ.
ಶನಿವಾರ ಗದಗ ತಾಲೂಕಿನ ಹರ್ಲಾಪುರ ಗ್ರಾಮದ ಜಮೀನೊಂದರಲ್ಲಿ ಮೆಣಸಿನಕಾಯಿ ಕಾವಲು ಮಾಡುತ್ತಿದ್ದ ರೈತನ ಭೀಕರ ಕೊಲೆ ನಡೆದಿತ್ತು ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಮಾಳೆಕೊಪ್ಪ ಗ್ರಾಮದ ನಿವಾಸಿ, ಸಣ್ಣಹನಂತಪ್ಪ ವಜ್ರದ್(60) ಕೊಲೆಯಾಗಿದ್ದ ವ್ಯಕ್ತಿಯ ರುಂಡವನ್ನು ಪತ್ತೆಮಾಡಿದ್ದಾರೆ.
ಗದಗ ಜಿಲ್ಲಾ ಪೋಲಿಸ ವರಿಷ್ಠಾಧಿಕಾರಿ ಬಿ ಎಸ್ ನೇಮನಗೌಡ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಡಿವೈಎಸ್ಪಿ ನೇತೃತ್ವದಲ್ಲಿ 4 ತಂಡಗಳನ್ನು ರಚಿಸಿ ಕೊಲೆಗೆ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.