ಗದಗ: ವ್ಯಕ್ತಿಯೋರ್ವನನ್ನಪ ಭೀಕರ ಕೊಲೆಮಾಡಿ ರುಂಡವನ್ನು ಕತ್ತರಿಸಿ, ರುಂಡವನ್ನೆ ಕದ್ದೊಯ್ದ ಘಟನೆ ತಾಲೂಕಿನ ತಿಮ್ಮಾಪುರ ಗ್ರಾಮದಲ್ಲಿ ಜಮೀನುವೊಂದರಲ್ಲಿ ನಡೆದಿದೆ.
ತಿಮ್ಮಾಪೂರ ಗ್ರಾಮದ ಬಾಲಪ್ಪ ಕೊಪ್ಪದ ಎಂಬುವರ ಜಮೀನಲ್ಲಿ ಮೆಣಸಿನಕಾಯಿ,ಉಳ್ಳಾಗಡಿ ಜಮೀನು ಕಾವಲು ಮಾಡುತ್ತಿದ್ದ ರೈತ ಕಾರ್ಮಿಕನ ತಲೆಯನ್ನು ಕತ್ತರಿಸಿ ದೇಹ ಬಿಟ್ಟು ಹೋಗಿದ್ದಾರೆ. ದುಷ್ಕರ್ಮಿಗಳು.
ಮೆಣಸಿನಕಾಯಿ ಕಾಯಲು, ಗುಡಿಸಲಲ್ಲಿ ಮಲಗಿದ್ದ ರೈತ ಕಾರ್ಮಿಕನ ಹತ್ಯೆಯಾಗಿದ್ದು ಕೊಪ್ಪಳ ಜಿಲ್ಲೆಯ ಮಾಳೆಕೊಪ್ಪ ಗ್ರಾಮದ ನಿವಾಸಿ ಸಣ್ಣ ಹನುಮಪ್ಪ(೫೮) ಎಂದು ಗುರುತಿಸಲಾಗಿದೆ.
ಮೆಣಸಿನಕಾಯಿ ಕಳ್ಳರ ಹಾವಳಿ ಹಿನ್ನಲೆ ಜಮೀನು ಕಾವಲು ಕಾಯುತ್ತಿದ್ದವನ ಭೀಕರ ಹತ್ಯೆ ಕಂಡು ಬೆಚ್ಚಬಿದ್ದ ಗದಗ ಜಿಲ್ಲೆಯ ರೈತರು ಗದಗ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ ಸ್ಥಳಕ್ಕೆ ಗದಗ ಗ್ರಾಮೀಣ ಪೋಲಸರು ಭೇಟಿ ನೀಡಿ ತನಿಖೆ ಮುಂದುವರೆಸಿದ್ದಾರೆ.