ಬೆಳಗಾವಿ : ಬರಗಾಲ ಹಿನ್ನೆಲೆಯಲ್ಲ ರಾಜ್ಯದಿಂದ ಯಾವುದೇ ಕಾರಣಕ್ಕೂ ಮೇವು ಹೊರ ರಾಜ್ಯಕ್ಕೆ ಹೋಗಬಾರದು ಎಂದು ನಿಬಂಧನೆ ಹೇರಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಹೇಳಿದ್ದಾರೆ.
ವಿಧಾನಪರಿಷತ್ತಿನ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಎನ್.ರವಿಕುಮಾರ್ ಅವರು ಪ್ರಸ್ತಾಪಿಸಿದ ಪ್ರಶ್ನೆಗೆ ಉತ್ತರಿಸಿದ ಅವರು, ಮೇವಿನ ಕೊರತೆ ಉಂಟಾಗದಂತೆ ರೈತರಿಗೆ ಮೇವಿನ ಬೀಜ ವಿತರಿಸಲು 20 ಕೋಟಿ ರೂ.ಗಳನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ ಎಂದರು.
ಬರ ಪರಿಹಾರ ಕಾರ್ಯಗಳಿಗಾಗಿ ಪ್ರಕೃತಿ ವಿಕೋಪ ಪರಿಹಾರ ನಿಯಡಿ ಪ್ರತಿ ಬರಪೀಡಿತ ತಾಲ್ಲೂಕಿಗೆ 324 ಕೋಟಿ ರೂ.ಗಳನ್ನು ರಾಜದ ಎಲ್ಲಾ ಜಿಲ್ಲೆಗಳಿಗೆ ಬಿಡುಗಡೆಗೊಳಿಸಲಾಗಿದೆ ಎಂದು ವಿವರಿಸಿದರು.