ಗದಗ: ಪಂಚಮಸಾಲಿ ಸಮುದಾಯದ ಮಕ್ಕಳ ಶಿಕ್ಷಣ ಮತ್ತು ಉದ್ಯೋಗಕ್ಕಾಗಿ 2A ಮೀಸಲಾತಿಗಾಗಿ ಕಳೆದ ೩ ವರ್ಷಗಳಿಂದ ರಾಜ್ಯದ ವಿವಿಧೆಡೆ ಹೋರಾಟ ಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಪಂಚಮಸಾಲಿ ಸಮುದಾಯದವರು ಹೋರಾಟ ನಡೆಸುತ್ತಿದ್ದಾರೆ
ಹೋರಾಟಕ್ಕೆ ಮಣಿದು ಕಳೆದ ಬಿಜೆಪಿ ಸರ್ಕಾರ 2D ಮೀಸಲಾತಿ ನೀಡಿತ್ತು ಈಗ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ 2ಎ ಮೀಸಲಾತಿ ನೀಡಲು ವಿಳಂಬ ನೀತಿಯನ್ನು ವಿರೋಧಿಸಿ ಸೋಮವಾರ ಗದಗ ತಾಲೂಕಿನ ಅಸುಂಡಿ ಕ್ರಾಸ್ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಷ್ಠಲಿಂಗ ಪೂಜೆ ಮಾಡೋ ಮೂಲಕ ಹೋರಾಟ ಮಾಡುತ್ತೇವೆ ಎಂದು ನಗರದ ಪ್ರವಾಸಿ ಮಂದಿರದಲ್ಲಿ ಬಸವಜಯ ಮೃತ್ಯುಂಜಯ ಸ್ವಾಮೀಜಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಸಿಎಂ ಸಿಧ್ದರಾಮಯ್ಯ ಅವರಿಗೆ ಮೀಸಲಾತಿ ಬಗ್ಗೆ ಕೇಳಿದ್ದಿವಿ ಅಂದು ಸಿಎಂ ಸಭೆ ಕರೆಯುತ್ತೇನೆ ಅಂತ ಹೇಳಿದ್ದರು ಆದರೆ ಈ ವರೆಗೂ ಸಭೆ ಕರೆಯಲಿಲ್ಲ ಮುಂಬರುವ ಲೋಕಸಭಾ ಚುನಾವಣೆ ಒಳಗೆ ರಾಜ್ಯ ಸರ್ಕಾರ 2A ಮೀಸಲಾತಿ ಕೇಂದ್ರದ OBC ಮೀಸಲಾತಿ ನೀಡಬೇಕು ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಕುಳಿತು ಇಷ್ಠಲಿಂಗ ಪೂಜೆ ಮಾಡೋ ಮೂಲಕ ರಾಜ್ಯದ ವಿವಿದೇಡೆ ಹೋರಾಟ ಪ್ರಾರಂಭ ಮಾಡಿದ್ದೇವೆ ಎಂದು ಹೇಳಿದರು.
ಸರ್ಕಾರ ಕೂಡಲೇ ಮೀಸಲಾತಿ ಕೊಡೋ ಯೋಚನೆ ಮಾಡಬೇಕು ಇಲ್ಲದಿದ್ದರೆ ಬೃಹತ್ ಪ್ರಮಾಣದ ಹೋರಾಟ ಮಾಡಲಾಗತ್ತೆ ಎಂದು ಎಚ್ಚರಿಕೆ ನೀಡಿದರು.
ಈ ಸಂಧರ್ಭದಲ್ಲಿ ಪಂಚಮಸಾಲಿ ಮುಖಂಡರಾದ ಅಯ್ಯಪ್ಪ ಅಂಗಡಿ ಸೇರಿದಂತೆ ಹಲವಾರು ಮುಖಂಡರು ಹಾಜರಿದ್ದರು.