ಮಾನಸಿಕ ಆರೋಗ್ಯ ಕುರಿತು ಜನಜಾಗೃತಿ ಅವಶ್ಯ: ಡಾ|| ಜಿತೇಂದ್ರ ಮುಗಳಿ

ಸಮಗ್ರ ಪ್ರಭ ಸುದ್ದಿ
1 Min Read

ಗದಗ: ಸಮುದಾಯದಲ್ಲಿ ಮಾನಸಿಕ ಆರೋಗ್ಯ ಜಾಗೃತಿ ಕಾರ್ಯಕ್ರಮಗಳು ಸಾರ್ವಜನಿಕರ ಆರೋಗ್ಯದ ಹಿತದೃಷ್ಠಿಯಿಂದ ಅತ್ಯಂತ ಅವಶ್ಯ ಎಂದು ಜಿಮ್ಸ ಮಾನಸಿಕ ವೈದ್ಯಾದಿಕಾರಿಯಾದ ಡಾ|| ಜಿತೇಂದ್ರ ಮುಗಳಿ ಹೇಳಿದರು.

ಅವರು ನಗರದ ಕೆ ವಿ ಹಂಚಿನಾಳ ನರ್ಸಿಂಗ್ ಹಾಗೂ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ಮಂಗಳವಾರ ವಿಶ್ವ ಮಾನಸಿಕ ಆರೋಗ್ಯ ದಿನದ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಆಗಮಿಸಿ ಮಾನಸಿಕ ಆರೋಗ್ಯದ ಕಳಂಕಗಳ ಹಾಗೂ ಇದರಿಂದ ಸಾರ್ವಜನಿಕರಲ್ಲಿ ಇರುವ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಬೇಕು ಇದಕ್ಕೆ ಜನ ಜಾಗೃತಿ ಅತ್ಯಾವಶ್ಯಕ ಎಂದು ಹೇಳಿದರು.

ಪ್ರಸ್ತುತ, ಜನ ಒಂದಲ್ಲ ಒಂದು ರೀತಿಯ ಸಮಸ್ಯೆಗಳನ್ನು ಹೊಂದಿರುತ್ತಾರೆ. ಇಂತಹ ಸಮಸ್ಯೆಗಳ ಮಧ್ಯೆ ಜನರು ಮಾನಸಿಕ ನೆಮ್ಮದಿಯನ್ನು ಕಾಪಾಡಿಕೊಂಡು ಹೋಗುವುದು ಸರಳವಲ್ಲ. ಹಾಗಾಗಿ, ಮಾನಸಿಕ ಕಾಯಿಲೆಗಳ ಕುರಿತು ಮತ್ತು ಇದಕ್ಕೆ ಇರುವ ಚಿಕಿತ್ಸೆಯನ್ನ ಅರ್ಥಮಾಡಿಕೊಂಡಲ್ಲಿ ಮಾನಸಿಕ ಕಾಯಿಲೆಗಳ ಬಗ್ಗೆ ಇರುವ ತಪ್ಪು ಕಲ್ಪನೆಗಳು ಜನರಲ್ಲಿ ಕಡಿಮೆಯಾಗುತ್ತವೆ ಎಂದು ಹೇಳಿದರು.

ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಮುಖ್ಯಸ್ಥರಾದ ಡಾ|| ವೀರೇಶ ಹಂಚಿನಾಳ ಪ್ರಾಸ್ತಾವಿಕವಾಗಿ ಮಾತನಾಡಿ ಮಾನಸಿಕ ರೋಗಗಳು ಮತ್ತು ಅದರ ಮೌಡ್ಯಾಚಾರ ಕುರಿತು ಮಾತನಾಡಿದರು.

ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಶಿವರಾಜ ಅಣ್ಣೀಗೇರಿ,ಸಚಿನ ಭೂಸದ,ವಿದೇಶಿ ದಡತಿ,ಸುಧಾ ತೊಪ್ಪಿನ್,ನೈನ ಬೇಗಂ,ಲಕ್ಷ್ಮಿಕಾಂತ ಕಂದಬ ಸೇರಿದಂತೆ ಮತ್ತಿತರ ಸಿಬ್ಬಂದಿಗಳು ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Share this Article