ಗದಗ: ರೈಲ್ವೆ ಹಳಿಗೆ ತಲೆ ಕೊಟ್ಟು ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಗದಗ ತಾಲೂಕಿನ ಹೊಂಬಳ ಗ್ರಾಮದ ಬಳಿ ನಡೆದಿದೆ ರೈಲಿನ ರಭಸಕ್ಕೆ ವ್ಯಕ್ತಿಯ ದೇಹ ಎರಡು ತುಂಡುಗಳಾಗಿ ರೈಲು ಹಳಿಯ ಮೇಲೆ ಬಿದ್ದಿದೆ ರಮೇಶ ಯಲ್ಲಪ್ಪ ಕುರಿ (೩೨) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಎಂದು ಗುರುತಿಸಲಾಗಿದೆ.
ಕುಡಿತದ ಚಟದ ಹಿಂದೆ ಬಿದ್ದಿದ್ದ ವ್ಯಕ್ತಿ ಮಂಗಳವಾರ ರಾತ್ರಿಯೆಲ್ಲ ಕುಟುಂಬದವರ ಜೊತೆ ಜಗಳ ಮಾಡಿದ್ದ ಆಸ್ತಿ ಮಾರಿ ಕುಡಿಯಲು ದುಡ್ಡು ಕೊಡಿ ಅಂತ ಪೀಡಿಸುತ್ತಿದ್ದ ವ್ಯಕ್ತಿ ಜಗಳ ಮಾಡಿ ರಾತ್ರಿ 2-30 ರ ಸುಮಾರಿಗೆ ಮನೆಯಿಂದ ಹೊರ ಹೋಗಿದ್ದ ಎನ್ನಲಾಗಿದೆ.
ಮುಂಜಾನೆ ರೈಲ್ವೆ ಹಳಿಯಲ್ಲಿ ರುಂಡ ಒಂದಡೆ, ಮುಂಡ ಒಂದೆಡೆಯಾಗಿ ವ್ಯಕ್ತಿಯ ದೇಹ ಸಿಕ್ಕಿದೆ.
ಗದಗ ರೈಲ್ವೆ ಪೊಲೀಸರು ಸ್ಥಳಕ್ಕೆ ಭೇಟಿ, ಪರಿಶೀಲನೆ ನಡೆಸಿ
ವ್ಯಕ್ತಿಯ ಶವ ಕುಟಂಬಕ್ಕೆ ಹಸ್ತಾಂತರ ಮಾಡಿದ್ದಾರೆ.
ಈ ಕುರಿತು ಗದಗ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.