ಗದಗ:ಜಮೀನಲ್ಲಿ ಅಕ್ರಮವಾಗಿ ಗಾಂಜಾ ಬೆಳೆದ ಆರೋಪಿಗೆ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಮೂರು ವರ್ಷಗಳ ಕಠಿಣ ಶಿಕ್ಷೆ ಹಾಗೂ ಇಪ್ಪತೈದು ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ತಾಲೂಕಿನ ಬೆಳಹೊಡ ಗ್ರಾಮದಿಂದ ಮದಗಾನೂರಿಗೆ ಹೋಗುವ ರಸ್ತೆಯ ಪಕ್ಕದಲ್ಲಿ ಆರೋಪಿ ಅಯ್ಯನಗೌಡ ರಾಮನಗೌಡ ಗೌಡಪ್ಪನವರಗೆ ಸೇರಿದ ರಿಸ ನಂ.111/1+2ಅ/2 ಜಮೀನಿನಲ್ಲಿ ಮೆಣಸಿನಕಾಯಿ ಗಿಡಗಳ ನಡುವೆ 10 ಹಸಿ ಗಾಂಜಾ ಗಿಡಗಳ ನಡುವೆ ಅಕ್ರಮವಾಗಿ ತನ್ನ ಸ್ವಮತ ಲಾಭಕೊಸ್ಕರ ಬೆಳೆದದ್ದು ದಿನಾಂಕ 22-10-2021 ಗದಗ ಅಬಕಾರಿ ನಿರೀಕ್ಷಕರು ಹಾಗೂ ಸಿಬ್ಬಂದಿ ಜಮೀನಿನ ಮೇಲೆ ದಾಳಿಮಾಡಿದಾಗ 12 ಕೆಸಿ ಗಾಂಜಾ ಸಿಕ್ಕಿದ್ದು ಆರೋಪಿ ವಿರುದ್ಧ ಗದಗ ಅಬಕಾರಿ ನಿರೀಕ್ಷಕ ನಾರಾಯಣಸಾ ಪವಾರ ತಮ್ಮ ಸಿಬ್ಬಂದಿಯೊಂದಿಗೆ ದಾಳಿ ನಡೆಸಿ, ಆರೋಪಿಯನ್ನು ಮಾಲು ಸಮೇತ ಬಂಧಿಸಿದ್ದರು.
ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಸಾಕ್ಷಿ ವಿಚಾರಣೆ ನಡೆಸಿದ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರಾಜೇಶ್ವರ ಎಸ್ ಶೆಟ್ಟಿ ಅವರು ಸೆಪ್ಟೆಂಬರ್ 16 ರಂದು ಶಿಕ್ಷೆಯನ್ನು ವಿಧಿಸಿ ತೀರ್ಪು ನೀಡಿದ್ದಾರೆ. ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ ಮಲ್ಲಿಕಾರ್ಜುನಗೌಡ ದೊಡ್ಡಗೌಡ್ರ ವಾದ ಮಂಡಿಸಿದ್ದರು.