ಶಿರಹಟ್ಟಿ : ತಾಲೂಕಿನ ಮಜ್ಜೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ 2022-23 ನೇ ಸಾಲಿನ ತಾಲೂಕು ಮಟ್ಟದ ಕ್ರೀಡಾಕೂಟ ಇತ್ತೀಚೆಗೆ ನಡೆಯಿತು ಈ ಕ್ರೀಡಾಕೂಟದಲ್ಲಿ ಬಾಲಕರ ವಾಲಿ ಬಾಲ್ ಪಂದ್ಯಾವಳಿಯಲ್ಲಿ ಮಜ್ಜೂರು ಪ್ರೌಢಶಾಲೆ ಹಾಗೂ STPMB ಪ್ರೌಢ ಶಾಲೆಯ ಕ್ರೀಡಾಪಟುಗಳು ನಡುವೆ ನೇರ ಹಣಾಹಣಿ ಏರ್ಪಟಿತ್ತು. STPMB ಲಕ್ಷ್ಮೇಶ್ವರ ಪ್ರೌಢಶಾಲಾ ಕ್ರೀಡಾಪಟುಗಳು 24 ಪಡೆದ್ರು, ಮಜ್ಜೂರು ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳು 25 ಅಂಕ ಪಡೆಯುವ ಮೂಲಕ ಗೆಲವು ಸಾಧಿಸಿದ್ರು. ವಾಲಿ ಬಾಲ್ ನಲ್ಲಿ ಮಜ್ಜೂರು ಶಾಲೆ ಪ್ರಥಮ ಸ್ಥಾನ ಪಡೆಯುವ ಮೂಲಕ ಜಿಲ್ಲಾ ಮಟ್ಟಕ್ಕೆ ತಂಡ ಆಯ್ಕೆಯಾಗಿದೆ. ವಿದ್ಯಾರ್ಥಿಗಳು ಫುಲ್ ಖುಷಿಯಾಗಿ ಸಂಭ್ರಮಿಸಿದ್ದಾರೆ. ತಾಲೂಕ ಮಟ್ಟದ ಕ್ರೀಡಾಕೂಟದಲ್ಲಿ ಪ್ರಶಸ್ತಿ ಪಡೆದಿದ್ದಾರೆ. ಜಿಲ್ಲಾ ಮಟ್ಟದಲ್ಲಿಯು ಪ್ರಥಮ ಸ್ಥಾನ ಗೆದ್ದ ಗೆಲ್ಲುತ್ತೇವೆ ಎಂಬ ಹುಮ್ಮಸ್ಸು ವಿದ್ಯಾರ್ಥಿಗಳಿಗೆ ಬಂದಿದೆ.
ವಾಲಿಬಾಲ್ ಕ್ರೀಡೆಯ ಕ್ರೀಡಾಪಟುಗಳು ಆಫ್ರೀದ್ ಬೈರಕದಾರ ತಂಡದ ನಾಯಕನ ನೇತೃತ್ವದಲ್ಲಿ ಪುನೀತ್ ಜಾಲವಾಡಗಿ, ಇರ್ಫಾನ್ ಹೆಸೂರೂರ, ನವೀನ ಕಜ್ಜಿ, ಅಭಿಷೇಕ ಹೊಸಳ್ಳಿ , ಹನುಮಂತ ಹಗಡಲಿ ಆಟವಾಡುವ ಮೂಲಕ ಶಾಲೆಗೆ ಹೆಸರು ತರುವ ಕೆಲಸ ಮಾಡಿದ್ದರು.ಇನ್ನು ಸಂದರ್ಭದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷರು, ಸದಸ್ಯರು, ಶಿಕ್ಷಣ ಪ್ರೇಮಿಗಳು, ಹಾಗೂ ದೈಹಿತ ಶಿಕ್ಷಕರ ಕೊರತೆಯಲ್ಲಿ ಶಾಲೆಯ ಕ್ರೀಯಾಶೀಲ ಕನ್ನಡ ಭಾಷಾ ಶಿಕ್ಷಕರಾದ ಬಸಪ್ಪ ತೆಲಸಂಗ,ಮುಖ್ಯೋಪಾಧ್ಯಾಯರಾದ ರಾಧಾ ಕುಲಕರ್ಣಿ, ಕಿರಣ ಕುಮಾರ್ ಮಕರಬ್ಬಿ, ದಾಮೋದರ್ , ರೇಷ್ಮಾ ಸಹ ಶಿಕ್ಷಕಿ ಭಾಗಿಯಾಗಿದ್ದರು.