ಸಭಾಧ್ಯಕ್ಷರು ಇಲ್ಲದ ಕಾರಣ ಸಭೆ ಮುಂದೂಡಿದ ದಲಿತ ಮುಖಂಡರು

ಸಮಗ್ರ ಪ್ರಭ ಸುದ್ದಿ
1 Min Read

ರೋಣ: ನಗರದ ತಹಶೀಲ್ದಾರ ಕಚೇರಿಯಲ್ಲಿ ಇಂದು ನಡೆದ ಸಭೆಯಲ್ಲಿ  ಸೆಪ್ಟೆಂಬರ್ 15 ರಂದು ಜರಗುವ ಭಾರತದ ಸಂವಿಧಾನ ಪೀಠಿಕೆಯ ಆಚರಣೆ ಮಾಡುವ ಸಲುವಾಗಿ ತಾಲೂಕ ಮಟ್ಟದ ದಲಿತ ಮುಖಂಡರ ಸಭೆಯನ್ನು ತಾ ಪಂ ಇಓ ರವಿ ಎ ಎನ್ ಅವರ ಅದ್ಯಕ್ಷತಯಲಿ ಜರುಗಿತು.

ಅಗಸ್ಟ್ 15 ರ ರೀತಿಯಲ್ಲಿ ಸಂವಿಧಾನ ಪೀಠಿಕೆಯ ಆಚರಣೆ ಮಾಡಬೇಕು ಎಂದು ದಲಿತ ಮುಖಂಡರ ಬೇಡಿಕೆಯಾಗಿತ್ತು.

ಸಂವಿಧಾನದ ಪೀಠಿಕೆ ಆಚರಣೆಯು ರೋಣ ನಗರದ ದ್ರೋಣಾಚಾರ್ಯ ಕ್ರೀಡಾಂಗಣದಲ್ಲಿ ಆಚರಣೆ ಮಾಡಲು ದಲಿತ ಮುಖಂಡರಾದ ಪ್ರಕಾಶ ಹೊಸಳ್ಳಿ ಮತ್ತು ಹನಮಂತ ಪೂಜಾರ ಸಂವಿಧಾನ ಪೀಠಿಕೆಯ ಆಚರಣೆ ಕುರಿತು ಸಲಹೆ ನೀಡಿದರು.

ತಾಲೂಕ ಮಟ್ಟದ ಸಭೆಗೆ ಸರ್ಕಾರಿ ದಿನಾಚರಣೆಯ ಸಭಾಧ್ಯಕ್ಷರು ಆಗಿರುವ ತಾಲೂಕ ದಂಡಾಧಿಕಾರಿಳು ಸಂವಿಧಾನ ಪೀಠಿಕೆಯ ಆಚರಣೆ ಸಭೆಗೆ ಗೈರು ಇರುವುದು ಭಾರತದ ಸಂವಿಧಾನಕ್ಕೆ ಅಗೌರವ ತೋರುವ ನೀತಿ ಅನುಸರಿಸುತ್ತಿರುವುದು ದೊಡ್ಡ ದುರಂತವಾಗಿದೆ.ದಲಿತರ ಸಭೆ ಅಂದರೆ ತಹಶೀಲ್ದಾರ ಗೌರವ ಇಲ್ಲದಂತೆ ಮಾಡುತ್ತಿದ್ದಾರೆ.

ತಾಲೂಕ ದಂಡಾಧಿಕಾರಿಯೇ ಅಸ್ಪೃಶ್ಯತೆ ಆಚರಣೆ ಮಾಡುತ್ತಿದ್ದಾರೆ ಅಂದರೆ ಬಡವರ ಗತಿ ಏನು ನಾವು ನಮ್ಮ ಸಮಸ್ಯೆ ಯಾರಿಗೆ ಹೇಳಬೇಕು‌ ನಾವು ಯಾವುದೇ ಸಮಸ್ಯೆ ಕೇಳಲು ಹೋದರೆ ಆಫೀಸಿಗೆ ಯಾಕ ಬರತಿರೀ ಇಲ್ಲಿ ಏನು ಕೆಲಸ ಅಂತ ತಹಶೀಲ್ದಾರ್ ಕೇಳುತ್ತಾರೆ ನಾವು ಏನು ಸರ್ಕಾರಿ ಕಚೇರಿಗೆ ಬಂದಿವಿ ಇದು ಏನು ಅವರ ಮನೆಗೆ ಬಂದಿರುತ್ತೇವಾ? ಎಂದು ದಲಿತ ಮುಖಂಡ ಮೌನೇಶ ಹಾದಿಮನಿ ತಾಲೂಕ ದಂಡಾಧಿಕಾರಿ ವಿರೋಧ ಆಕ್ರೋಶ ವ್ಯಕ್ತಪಡಿಸಿದರು.

ಅಂಬೇಡ್ಕರ ಅಂದರೆ ಸಂವಿಧಾನ ಅಂದರೆ ಅರ್ಥ ಇಲ್ಲದ ತಹಶೀಲ್ದಾರ ದಲಿತ ವಿರೋಧಿ ನೀತಿ ಆಚರಣೆ ಮಾಡುವ ದಂಡಾಧಿಕಾರಿ ಸಂವಿಧಾನದ ಕುರಿತು ಅವರಿಗೆ ಯಾವುದೇ ರೀತಿಯಾಗಿ ಗೌರವ ಇಲ್ಲ ಎಂದು ವೀರಪ್ಪ ತೆಗ್ಗಿನಮನಿ ತಾಲೂಕ ದಂಡಾಧಿಕಾರಿಯ ವಿರುದ್ಧ ಕಿಡಿಕಾರಿದರು.

ಈ ಸಂಧರ್ಭದಲ್ಲಿ ಶರಣಪ್ಪ ದೊಡ್ಡಮನಿ, ಬಸವಂತಪ್ಪ ತಳವಾರ, ಬಸವರಾಜ ಕಾಳೆ,ಬಸವರಾಜ ಜಗ್ಗಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Share this Article