ಮುಂಡರಗಿ : ನರೇಗಾ ಹಾಗೂ 15 ಹಣಕಾಸಿನ ಕಾಮಗಾರಿಯ ಸಾಮಗ್ರಿಗಳ ಬಿಲ್ ಪಾವತಿ ವಿಳಂಬ ಹಿನ್ನೆಲೆಯಲ್ಲಿ ಮುಂಡರಗಿ ತಾಲೂಕು ಪಂಚಾಯತ ಕಾರ್ಯಾಲಯಕ್ಕೆ ಬೀಗಾ ಹಾಕಿ ಗ್ರಾಪಂ ಸದಸ್ಯರ ಪ್ರತಿಭಟನೆ ನಡೆಸಿದರು.
ಗದಗ ಜಿಲ್ಲೆ ಮುಂಡರಗಿ ತಾಲೂಕು ಪಂಚಾಯತ ಆವರಣದಲ್ಲಿ ತಾಲೂಕಿನ 19 ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ನಡೆದ ನರೇಗಾ ಕಾಮಗಾರಿ ಮತ್ತು 15 ನೇ ಹಣಕಾಸು ಕಾಮಗಾರಿಯ ಸಾಮಗ್ರಿಗಳ ಒಟ್ಟು 2022-23 ನೇ ಸಾಲಿನ ಒಟ್ಟು 8.50 ಕೋಟಿ ರೂ ಬಿಲ್ ಬಾಕಿ ಉಳಿದಿದ್ದು ಬಿಲ್ ಪಾವತಿಸಲು ಗ್ರಾಮ ಪಂಚಾಯತ ಸದಸ್ಯರು ತಾಲೂಕು ಪಂಚಾಯತ ಕಾರ್ಯಾಲಯಕ್ಕೆ ಬೀಗ ಜಡೀದು ಬಾಕಿ ಬಿಲ್ಲ ನೀಡುವಂತೆ ಆಗ್ರಹಿಸಿದ್ದಾರೆ.
ತಾಲೂಕಿನ ವಿವಿಧ ಗ್ರಾಮದಲ್ಲಿ ಸಿಸಿ ರಸ್ತೆ,ಮೊರಂ ರಸ್ತೆ, ಶಾಲಾ ಮೈದಾನ, ಶಾಲಾ ಕಂಪೌಡ ದುರಸ್ತಿ, ಸ್ಮಶಾನ ಅಭಿವೃದ್ಧಿ,
ಜಮೀನು ರಸ್ತೆ ನಿರ್ಮಾಣ, ವೈಯಕ್ತಿಕ ಕಾಮಗಾರಿಗಳು ಜೊತೆಗೆ ಬದು ನಿರ್ಮಾಣ, ಇಂಗು ಬಚಲು ಹೀಗೆ ವಿವಿಧ ಕಾಮಗಾರಿ ಬಿಲ್ಲ ಸರ್ಕಾರ ಪಾವತಿ ಮಾಡಿಲ್ಲ ಎಂದು ಆರೋಪಿಸಿದರು.
ಸರ್ಕಾರದ ನಡೆ ಖಂಡಸಿ ಗ್ರಾಮ ಪಂಚಾಯತ್ ಸದಸ್ಯರು ಪ್ರತಿಭಟಿಸಿ ಸರ್ಕಾರ ಕೂಡಲೇ ಕಾಮಗಾರಿಗಳ ಸಾಮಗ್ರಿ ಬಿಲ್ ಪೂರೈಸುವಂತೆ ಒತ್ತಾಯಿಸಿದರು.