ಭಾರತ ಕ್ರಿಕೆಟ್ ತಂಡ ಏಷ್ಯಾ ಕಪ್-2023ರ ಸೂಪರ್-4 ಸುತ್ತಿಗೆ ಪ್ರವೇಶಿಸಿದೆ. ಕಳೆದ ದಿನ ನಡೆದ ಎ ಗುಂಪಿನ ಪಂದ್ಯದಲ್ಲಿ ನೇಪಾಳವನ್ನು 10 ವಿಕೆಟ್’ಗಳಿಂದ ಡಿಎಲ್‌ಎಸ್ ಅಡಿಯಲ್ಲಿ ಸೋಲಿಸಿತು. ಆದರೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ರೋಹಿತ್ ಗೆಲುವಿನ ಹೊರತಾಗಿಯೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 59 ಎಸೆತಗಳಲ್ಲಿ 6 ಬೌಂಡರಿ ಮತ್ತು 5 ಸಿಕ್ಸರ್’ಗಳ ನೆರವಿನಿಂದ 74 ರನ್’ಗಳ ಅಜೇಯ ಇನ್ನಿಂಗ್ಸ್‌ಗಳನ್ನು ರೋಹಿತ್ ಆಡಿದ್ದರು ಎಂಬುದು ಇಲ್ಲಿ ಗಮನಾರ್ಹ ಅಂಶ.
ರೋಹಿತ್ ಅಸಮಾಧಾನ:
ಗೆಲುವಿನ ನಂತರ ನಾಯಕ ರೋಹಿತ್ ಅವರಿಗೆ ಇನ್ನಿಂಗ್ಸ್‌ನಿಂದ ಸಂತೋಷವಾಗಿದೆಯೇ ಎಂದು ಪ್ರಶ್ನೆ ಕೇಳಿದಾಗ, “ನಿಜವಾಗಿಯೂ ಇಲ್ಲ. ಆರಂಭದಲ್ಲಿ ಸ್ವಲ್ಪ ಆತಂಕವಿತ್ತು ಆದರೆ ತಂಡವನ್ನು ಸೂಪರ್-4 ಗೆ ಕೊಂಡೊಯ್ಯುವುದು ನನ್ನ ಪ್ರಯತ್ನವಾಗಿತ್ತು. ಏಷ್ಯಾಕಪ್ ಕೇವಲ ಎರಡು ಪಂದ್ಯಗಳಾಗಿರುವುದರಿಂದ ನಮಗೆ ಉತ್ತಮ ಚಿತ್ರಣವನ್ನು ನೀಡುವುದಿಲ್ಲ. ಅದೃಷ್ಟಕ್ಕೆ ನಮಗೆ ಮೊದಲ ಪಂದ್ಯದಲ್ಲಿ ಬ್ಯಾಟಿಂಗ್ ಮತ್ತು ಈ ಪಂದ್ಯದಲ್ಲಿ ಬೌಲಿಂಗ್ ಮಾಡುವ ಅವಕಾಶ ಸಿಕ್ಕಿತು” ಎಂದಿದ್ದಾರೆ.
“ಇನ್ನೂ ಸಾಕಷ್ಟು ಕೆಲಸ ಬಾಕಿ ಇದೆ. ಅನೇಕ ಆಟಗಾರರು ಗಾಯದಿಂದ ಚೇತರಿಸಿಕೊಂಡು ಹಿಂತಿರುಗುತ್ತಿದ್ದಾರೆ ಮತ್ತು ಅವರು ಲಯಕ್ಕೆ ಮರಳಲು ಸಮಯ ಬೇಕಾಗುತ್ತದೆ. ಕಳೆದ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಮತ್ತು ಇಶಾನ್ ಕಿಶನ್ ಉತ್ತಮ ಪ್ರದರ್ಶನ ನೀಡಿ ನಮ್ಮನ್ನು ಆ ಸ್ಕೋರ್’ಗೆ ತಲುಪಿಸಿದರು. ಇಂದು ಬೌಲಿಂಗ್ ಉತ್ತಮವಾಗಿತ್ತು ಆದರೆ ಫೀಲ್ಡಿಂಗ್ ಕೆಟ್ಟದಾಗಿತ್ತು, ನಾವು ಅದನ್ನು ಸುಧಾರಿಸಬೇಕಾಗಿದೆ” ಎಂದು ಹೇಳಿದರು.