ಕಾಂಗ್ರೆಸ್ ಸೇರ್ಪಡೆಗೆ ಹಲವರು ನನ್ನ ಸಂಪರ್ಕದಲ್ಲಿ ಇದ್ದಾರೆ :ಮಾಜಿ ಸಿಎಂ ಜಗದೀಶ ಶೆಟ್ಟರ ಹೊಸ್ ಬಾಂಬ್

ಸಮಗ್ರ ಪ್ರಭ ಸುದ್ದಿ
1 Min Read

ಗದಗ: ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಕೊರತೆ, ಬಿಜೆಪಿ ಲೀಡರ್ ಲೆಸ್ ಪಾರ್ಟಿಯಾಗಿದೆ ರಾಜ್ಯ ಬಿಜೆಪಿ ಕೆಲವರ ಮುಷ್ಟಿಯಲ್ಲಿದೆ ಅದೇ ಕಾರಣಕ್ಕೆ ಸರ್ಕಾರ ಆಡಳಿತಕ್ಕೆ ಬಂದು 100 ದಿನ ಕಳೆದರು ಕೂಡ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಿಲ್ಲ ಎಂದು ಮಾಜಿ ಸಿಎಂ ಕಾಂಗ್ರೆಸ್ ಪಕ್ಷದ ವಿಧಾನ ಪರಿಷತ್ ಸದಸ್ಯ ಜಗದೀಶ ಶೆಟ್ಟರ ಹೇಳಿದರು. ಅವರು ರವಿವಾರ ಗದಗನ ತೋಂಟದಾರ್ಯ ಕಲ್ಯಾಣಮಂಟಪದಲ್ಲಿ ಆಯೋಜಿಸಿದ್ದ ಬಣಜಿಗ ಸಮಾಜದ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದರು.

ಮುಂದುವರೆದು ಮಾತನಾಡಿದ ಅವರು ರಾಮದುರ್ಗದಲ್ಲಿ ಹಣ ಇದ್ದ ವ್ಯಕ್ತಿಗೆ ಬಿಜೆಪಿ ಡಿಕೆಟ್ ಕೊಟ್ಟರು ಬಿಜೆಪಿಯಲ್ಲಿ ಮಿಸ್ ಮ್ಯಾನೇಜ್ಮೆಂಟ್ ಇದೆ ಬೈಂದೂರು ಸುಕುಮಾರ್ ಶೆಟ್ಟಿ ಅವರಿಗೆ ಟಿಕೆಟ್ ತಪ್ಪಿಸಿದ್ದರು ಕ್ರಿಮಿನಲ್ ಹಿನ್ನೆಲೆಯ ವ್ಯಕ್ತಿಗೆ ಟಿಕೆಟ್ ಕೊಟ್ಟರು, ಶೆಟ್ಟಿ ಈಗಲು ಆಕ್ರೋಶದಲ್ಲಿದ್ದಾರೆ.

ಕಾಂಗ್ರೆಸ ಪಕ್ಷಕ್ಕೆ ಬರಬೇಕು ಅಂತಾ ಬಹಳಷ್ಟು ಜನ ಅಪೇಕ್ಷೆ ವ್ಯಕ್ತ ಪಡಿಸಿದ್ದಾರೆ ಹೆಸರು ಹೇಳಲ್ಲ ಬಹಳಷ್ಟು ಜನ ಸಂಪರ್ಕದಲ್ಲಿದ್ದಾರೆ ನಿರ್ಧಾರ ಆದ್ಮೇಲೆ ಹೆಸರು ಹೇಳುತ್ತೇನೆ ಎಂದು ಹೊಸ ಬಾಂಬ್ ಸಿಡಿಸಿದರು.

ನಾವು ಸೇಡು ತೀರಿಸಿಕೊಳ್ಳುತ್ತಿಲ್ಲ ಅವರಾಗೇ ಬರುತ್ತಿದ್ದಾರೆ ಸೆಳೆಯುವ ಪ್ರಶ್ನೆ ಇಲ್ಲ ಎಲ್ಲವನ್ನೂ ಕಾದು ನೋಡಿ ಎಂದು ಹೇಳಿದರು.

Share this Article