ಗದಗ: ಬಜೆಟ್ ಅಧಿವೇಶನ, ಜಂಟಿ ಅಧಿವೇಶನ ನಡೆದರು ವಿರೋಧ ಪಕ್ಷದ ನಾಯಕನನ್ನು ಈ ವರೆಗೂ ಆಯ್ಕೆ ಮಾಡಿಲ್ಲಾ ಇದು ಕರ್ನಾಟಕ ರಾಜ್ಯದಲ್ಲಿಯೇ ಒಂದು ಇತಿಹಾಸವಾಗಿದೆ ಎಂದು ಬಿಜೆಪಿಗೆ ಸಚಿವ ಮುನಿಯಪ್ಪ ವ್ಯಂಗ್ಯವಾಗಿ ಮಾತನಾಡಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಮೂರು ತಿಂಗಳಾದರು ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಲು ಸಾಧ್ಯವಾಗಲ್ಲ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಲು ಆಗದಿದ್ದರೆ ಆ ಪಕ್ಷ ಎಷ್ಟು ಪ್ರಬಲವಾಗಿದೆ..? ವಿರೋಧ ಪಕ್ಷದ ನಾಯಕ ಇಲ್ಲದಿರೋದು ಒಂದು ಇತಿಹಾಸವಾಗಿದೆ ಬಿಜೆಪಿ ಪಕ್ಷದಲ್ಲಿ ಒಗ್ಗಟ್ಟು ಇಲ್ಲ, ಸಹಮತ ಇಲ್ಲಾ, ಹೊಂದಾಣಿಕೆ ಇಲ್ಲಾ, ನಾಯಕತ್ವ ಇಲ್ಲ ಎನ್ನೋದು ಇದರಿಂದ ಸ್ಪಷ್ಟವಾಗಿ ಗೊತ್ತಾಗುತಿದ್ದೆ ಎಂದು ಸಚಿವ ಕೆ ಎಚ್ ಮುನಿಯಪ್ಪ ಹೇಳಿದರು.
ಮುಂದುವರೆದು ಮಾತನಾಡಿದ ಅವರು ಕಾಂಗ್ರೆಸ್ ಈ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡಲು ನಾಯಕತ್ವ ವಹಿಸಿದ ಪಕ್ಷ
ಕಾಂಗ್ರೆಸ್ ಪಕ್ಷಕ್ಕೆ ದೊಡ್ಡದೊಂದು ಇತಿಹಾಸ ಇದೆ, ಸಿದ್ದಾಂತ ಇದೆ ದೇಶದ ಅಭಿವೃದ್ಧಿಗಾಗಿ ಪಂಚ ವಾರ್ಷಿಕ ಯೋಜನೆಗಳನ್ನು ಜಾರಿ ಮಾಡಿದೆ ಇಂತಹ ಇತಿಹಾಸ ವುಳ್ಳ ಪಕ್ಷ ನಮ್ಮದಾಗಿದೆ ಎಂದು ಹೇಳಿದರು.
ಇನ್ನೂ ಕಾಂಗ್ರೆಸ್ ಸೇರ್ಪಡೆ ವಿಷಯಕ್ಕೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತಗಳನ್ನು ಒಪ್ಪಿ ಯಾರು ಬರ್ತಾರೆ ಅವರಿಗೆ ಕಾಂಗ್ರೆಸ್ ಬಾಗಿಲು ತೆರೆದಿದೆ
ಕಾಂಗ್ರೆಸ್ ಪಕ್ಷ ತಾನಾಗಿಯೇ ಬನ್ನಿ ಬನ್ನಿ ಎಂದು ಕರೆಯುವ ಪ್ರಶ್ನೇ ಇಲ್ಲಾ ಎಂದು ಹೇಳಿದರು.
ಬಿಜೆಪಿಯಿಂದ ಒಬ್ಬರು ಹೋದರೆ, 40 ಜನರನ್ನು ತರುವ ಬಿ ಎಲ್ ಸಂತೋಷ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆನೀಡಿದ ಅವರು ಬಿ ಎಲ್ ಸಂತೋಷ ಅವರಿಗೆ ಜನ ಉತ್ತರವನ್ನು ಕೊಟ್ಟಿದ್ದಾರೆ ನಿಮ್ಮ ಯೋಗ್ಯತೆ ಏನೂ ಅಂತಾ ಜನರು ಉತ್ತರ ಕೊಟ್ಟಿದ್ದಾರೆ ಯಾರು ಬಿಜೆಪಿಗೆ ಹೋಗೋದಿಲ್ಲ ಎಂದ ಸಚಿವ ಎಚ್ ಸಿ ಮಹದೇವಪ್ಪ ಸ್ಪಷ್ಟಪಡಿಸಿದರು.