ಬೆಂಗಳೂರು: ವಿಮಾನ ನಿಲ್ದಾಣಗಳನ್ನು ನಾವು ಈ ಹಿಂದೆ ಏರ್ ಪೋರ್ಟ್ ಅಥಾರಿಟಿಗೆ ನೀಡುತ್ತಿದ್ದೇವೆ. ವಿಮಾನ ನಿಲ್ದಾಣ ಭೂಮಿ ಕೂಡ ಅಥಾರಿಟಿ ಹೆಸರಿಗೆ ಟ್ರಾನ್ಸಫರ್ ಆಗುತ್ತಿತ್ತು. ಇಷ್ಟೆಲ್ಲ ಆದರೂ ಕೂಡ ವಿಮಾನ ನಿಲ್ದಾಣಗಳ ಮೇಲೆ ನಮ್ಮ ಹಿಡಿತ ಇರುತ್ತಿರಲಿಲ್ಲ. ಇದೀಗ ಶಿವಮೊಗ್ಗ ವಿಮಾನ ನಿಲ್ದಾಣವನ್ನು ರಾಜ್ಯದಿಂದಲೇ ನಿರ್ವಹಣೆ ಮಾಡುತ್ತಿದೆ. ನಾವೇ ಏರ್ ಲೈನ್ಸ್ ಮಾಡುವ ಬಗ್ಗೆಯೂ ಚಿಂತನೆ ನಡೆಸಿದ್ದೇವೆ. ಮುಂದೆ ಎಲ್ಲ ವಿಮಾನ ನಿಲ್ದಾಣಗಳನ್ನು ನಾವೇ ನಿರ್ವಹಣೆ ಮಾಡುವ ಬಗ್ಗೆ ನಿರ್ಧರಿಸಿದ್ದೇವೆ. ವಿಜಯಪುರ, ಕಾರವಾರ, ಬೀದರ್ ಸೇರಿ ಮುಂದೆ ಎಲ್ಲ ವಿಮಾನ ನಿಲ್ದಾಣಗಳನ್ನು ನಾವೇ ನಿರ್ವಹಣೆ ಮಾಡುತ್ತೇವೆ ಎಂದು ಸಚಿವ ಎಂ ಬಿ ಪಾಟೀಲ ಹೇಳಿದರು.