ಕೋಟಿ ಕೋಟಿ ಮೊತ್ತದ ಅನುಮೋದನೆಗೆ ಕಾನೂನು ಬಾಹಿರ ಸಾಮಾನ್ಯ ಸಭೆ..? ಉಪಾಧ್ಯಕ್ಷೆ ಸುನಂದಾ ಬಾಕಳೆ ವಿರೋಧ..?

ಸಮಗ್ರ ಪ್ರಭ ಸುದ್ದಿ
2 Min Read

ಗದಗ:ಕಳೆದ ಕೆಲ ತಿಂಗಳಿಂದ ಕೋಟ್ಯಂತರ ರೂ. ಮೊತ್ತದ ನಕಲಿ ಠರಾವು ಮಾಡಿದ ಆರೋಪ ಮರೆ ಮಾಚುವ ಮುನ್ನವೇ ಬುಧವಾರ ತರಾತುರಿಯಾಗಿ ನಡೆದ ನಗರ ಸಭೆಯ ಸಾಮಾನ್ಯ ಸಭೆಯಲ್ಲಿ ಸುಮಾರ 76 ಕಾಮಗಾರಿಗಳ 16 ಕೋಟಿ ಮೊತ್ತದ ಟೆಂಡರಗೆ ಠರಾವು ಪಾಸು ಮಾಡಲು ಅನುಮೋದನೆ ನೀಡಲು ರಾತೋ ರಾತ್ರಿ ಸಾಮಾನ್ಯ ಸಭೆ ಎಂದು ಹಳೆಯ ದಿನಾಂಕ ಹೊಂದಿದ ಸಭೆಯ ನೋಟಿಸಿ ಸೃಷ್ಟಿಸಿದ್ದಾರೆ ಈ ಸಾಮಾನ್ಯ ಸಭೆ ಸಂಪೂರ್ಣವಾಗಿ ನಿಯಮ ಬಾಹಿರವಾಗಿದೆ ಈ ಸಭೆ ಮುಂದೂಡಿ ಎಂದು ಸ್ವತಃ ಬಿಜೆಪಿ ಆಡಳಿತ ಪಕ್ಷದ ಉಪಾಧ್ಯಕ್ಷೆ ಸುನಂದಾ ಬಾಕಳೆ ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದ್ದಾರೆ.


ಹೌದು ಗದಗ-ಬೆಟಗೇರಿ ನಗರಸಭೆಯಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ಸದಸ್ಯರ ಒಳ ಹೊಂದಾಣಿಕೆಯಿಂದ ಆಡಳಿತಾತ್ಮಕ ವಿಷಯದಲ್ಲಿ ಕಾನೂನು ಬಾಹಿರವಾಗಿ ಕೆಲಸ ಕಾರ್ಯಗಳು ಜರುಗುತ್ತಿದ್ದು ನಗರಸಭೆ ನಡಾವಳಿಗಳನ್ನು ಪೌರಾಯುಕ್ತರು ಮತ್ತು ಅಧ್ಯಕ್ಷರು ಉಲ್ಲಂಘಿಸಿದ್ದು ಮೇಲ್ನೋಟಕ್ಕೆ ಸಾಬೀತಾಯಿಗಿದೆ.

ಪೂರ್ವ ನಿಗದಿತವಲ್ಲದ ಸಾಮಾನ್ಯ ಸಭೆ ಕರೆಯದೇ, ಸಭೆಯಲ್ಲಿ ಕಾಮಗಾರಿಗಳ ಬಗ್ಗೆ ಚಚಿರ್ಸದೇ, ಸಭೆಯ ಒಪ್ಪಿಗೆ ಪಡೆಯದೇ ಮತ್ತು ಸ್ಥಾಯಿ ಸಮಿತಿಯಲ್ಲಿ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಚಚಿರ್ಸದೇ ಕೋಟ್ಯಂತರ ರೂ. ಮೊತ್ತದ ಅಭಿವೃದ್ಧಿ ಕಾಮಗಾರಿಗಳಿಗೆ ಟೆಂಡರ್​ ಕರೆದಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ವಿರೋಧಕ್ಕೆ ಕಾರಣವಾಗಿದೆ.

ಪೌರಾಯುಕ್ತರ ನಿವೃತ್ತಿಯ ಮುನ್ನಾ ದಿನ ತುರ್ತು ಸಾಮಾನ್ಯ ಸಭೆ..?

ಗುರುವಾರ ನಗರ ಸಭೆ ಪೌರಾಯುಕ್ತರಾದ ರಮೇಶ ಸುಣಗಾರ ಸೇವಾ ನಿವೃತ್ತಿ ಹೊಂದುತ್ತಿದ್ದು ಮಂಗಳವಾರ ರಾತ್ರಿ ಸಾಮಾನ್ಯ ಸಭೆಯ ನೋಟಿಸ್ ನೀಡಿ ಬುಧವಾರ ಸಂಜೆ ನಾಲ್ಕ ಘಟಂಗೆ ಏಕಾಏಕಿ ಸಾಮಾನ್ಯ ಸಭೆ ಕರೆದಿರುವ ನಗರಸಭೆ ಪೌರಾಯುಕ್ತರು ಮತ್ತು ಅಧ್ಯಕ್ಷರ ಕ್ರಮವನ್ನು ಸ್ವತಃ ಆಡಳಿತ ಪಕ್ಷದ ಬಿಜೆಪಿಯ ಉಪಾಧ್ಯಕ್ಷೆ ಸುನಂದಾ ಬಾಕಳೆ ವಿರೋಧಿಸಿದ್ದು ಬಿಜೆಪಿಗೆ ಮತ್ತಷ್ಟು ಮುಜುಗುರು ತಂದೊಡ್ಡಿದೆ ಇದರ ಜೊತೆಗೆ ಬುಧವಾರ ನಡೆದ ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಕೆಲ ಸದಸ್ಯರ ಸಭೆ ಕರೆದಿದ್ದನ್ನೂ ವಿರೋಧಿಸಿದ್ದಾರೆ.

ಜಿಲ್ಲಾಧಿಕಾರಿಗೆ ದೂರು :

ಈ ಸಭೆ ಮುಂದೂಡಲು ಜಿಲ್ಲಾಧಿಕಾರಿಗೆ ಸುನಂದಾ ಬಾಕಳೆ ದೂರು ನೀಡಿದ್ದು ಆ ದೂರಿನಲ್ಲಿ ಸಾಮಾನ್ಯ ಸಭೆ ಕಾನೂನು ಬದ್ಧವಲ್ಲ ಎಂದು ಆರೋಪಿಸಿದ್ದಾರೆ. “ಆ.30 ರಂದು ಸಾಮಾನ್ಯ ಸಭೆ ಜರುಗಿಸಲು ಆ.29 ರಂದೇ ನಿರ್ಧರಿಸಿ ರಾತ್ರಿ 10 ಗಂಟೆಗೆ ನೋಟೀಸ್​ ಹಂಚಲಾಗಿದೆ. ಮುನ್ಸಿಪಲ್​ ಕಾಯಿದೆ 1964 ಕಲಂ 48ರ ಉಲ್ಲಂಘನ ಆಗಿದೆ. ಹಾಗಾಗಿ ಸಾಮಾನ್ಯ ಸಭೆ ಮುಂದೂಡಬೇಕೆಂದು ಪತ್ರದ ಮೂಲಕ ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ.

ಅಕ್ರಮದ ವಾಸನೆಯ ಹುನ್ನಾರ:

ಆ.31 ರಂದು ನಗರಸಭೆ ಪೌರಾಯುಕ್ತ ರಮೇಶ ಸುಣಗಾರ ಸೇವಾ ನಿವೃತ್ತಿ ಹೊಂದಲಿದ್ದು ನಂತರದಲ್ಲಿ ಹೊಸ ಪೌರಾಯುಕ್ತರ ಅಧಿಕಾರ ಹಸ್ತಾಂತರಕ್ಕೆ ಕಾಲಾವಕಾಶ ಬೇಕು ಎಂಬ ಕಾರಣದಿಂದ ಆಡಳಿದ ಪಕ್ಷದ ಮತ್ತು ವಿರೋಧ ಪಕ್ಷದ ಪ್ರಭಾವಿ ಸದಸ್ಯರು ಹೊಂದಿಕೊಂಡು ಸುಮಾರು  16 ಕೋಟಿ ಮೊತ್ತದ 76 ಕಾಮಗಾರಿಳಿಗೆ ತರಾತುರಿ ಠರಾವು ಪಾಸು ಮಾಡಿ ಟೆಂಡರ ನೀಡಿವ ಉದ್ದೇಶ ಹೊಂದಿದ್ದರು ಎಂದು ಗದಗ-ಬೆಟಗೇರಿ ನಗರ ಸಭೆಯಲ್ಲಿ ಮಾತನಾಡುತ್ತಿರುವುದು ಗುಟ್ಟಾಗಿ ಉಳಿದಿಲ್ಲ ಈ ಸಭೆಯೂ ಪೂರ್ವ ನಿಯೋಜಿತವಾಗಿದ್ದು ಸಾರ್ವಜನಿಕರ ತೆರೆಗೆ ದುಡ್ಡುನು ದುರುದ್ದೇಶದಿಂದ ಅಕ್ರಮಕ್ಕೆ ಮುಂದಾಗಿದ್ದಾರೆ ಎಂದು ಮೇಲ್ನೋಟಕ್ಕೆ ಸಾಭೀತಾಗಿದೆ.

ಈ ವಿಷಯದ ಕುರಿತು ಜಿಲ್ಲಾಧಿಕಾರಿ ಎಂ ಎನ್ ವೈಶಾಲಿ ಸಭೆ ನಡೆಸುವ  ಕುರಿತು ಪೌರಾಯುಕ್ತರಿಗೆ ಅಭಿಪ್ರಾಯ ಕೇಳಿದ್ದಾರೆ ನಂತರ ಬುಧವಾರ ಹೈ ಡ್ರಾಮಾ ನಡೆದು ಸಭೆ ನಡೆಸಿದರು ಈ ಸಭೆಯಲ್ಲಿ ಅನುಮೋದನೆ ಗೊಂಡ ಠರಾವು ಮುಂದೆ ರದ್ದಾಗುತ್ತದೆ ಎಂದು ಸ್ವತಃ ಪೌರಾಯುಕ್ತರು ಮಾಹಿತಿ ನೀಡಿದರು.

Share this Article