ಅಗ್ನಿ ಅನಾಹುತಕ್ಕೆ 63 ಮಂದಿ ಬಲಿ

graochandan1@gmail.com
1 Min Read

ಜೋಹಾನ್ಸ್‍ಬರ್ಗ್ : ದಕ್ಷಿಣಾ ಆಫ್ರಿಕಾದಲ್ಲಿ ನಡೆದ ಭೀಕರ ಅಗ್ನಿ ಅನಾಹುತಕ್ಕೆ ಕನಿಷ್ಠ 63 ಮಂದಿ ಆಹುತಿಯಾಗಿದ್ದಾರೆ. ಆಫ್ರಿಕಾ ರಾಜಧಾನಿ ಜೋಹಾನ್ಸ್‍ಬರ್ಗ್‍ನಲ್ಲಿರುವ ಐದು ಅಂತಸ್ತಿನ ಕಟ್ಟಡಕ್ಕೆ ಆಕಸ್ಮಿಕ ಬೆಂಕಿ ಬಿದ್ದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.

ಬೆಂಕಿ ಅವಘಡದಲ್ಲಿ ಕನಿಷ್ಠ 63 ಜನರು ಸಾವನ್ನಪ್ಪಿದ್ದಾರೆ ಮತ್ತು 40 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ದಕ್ಷಿಣ ಆಫ್ರಿಕಾದ ನಗರದ ತುರ್ತು ಸೇವೆಗಳ ವಿಭಾಗ ತಿಳಿಸಿವೆ.

ಇದೀಗ, ನಾವು ಸುಮಾರು 63 ಜನರನ್ನು ಕಳೆದುಕೊಂಡಿದ್ದೇವೆ ಮತ್ತು 43 ಜನರು ಗಾಯಗೊಂಡಿದ್ದು ಎಲ್ಲರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತುರ್ತು ನಿರ್ವಹಣಾ ಸೇವೆಗಳ ವಕ್ತಾರ ರಾಬರ್ಟ್ ಮುಲಾಡ್ಜಿ ಹೇಳಿದರು.

ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿರುವ ಕೆಲವರ ಸ್ಥಿತಿ ಚಿಂತಾಜನಕವಾಗಿದ್ದು, ಸಾವು-ನೋವಿನ ಸಂಖ್ಯೆ ಹೆಚ್ಚಳವಾಗುವ ನಿರೀಕ್ಷೆಯಿದೆ.

- Advertisement -
Ad image

Share this Article