ನರೇಗಲ್: ಮೇಲಾಧಿಕಾರಿಗಳ ಜೊತೆಯಲ್ಲಿ ಸರಿಯಾದ ವರ್ತನೆ ತೋರಿಲ್ಲ ಮತ್ತು ಈಚೆಗೆ ನಡೆದ ಪ್ರೇಮ ಪ್ರಕರಣವೊಂದರಲ್ಲಿ ಸರಿಯಾಗಿ ತನಿಖೆ ನಡೆಸದೇ ನಿರ್ಲಕ್ಷ್ಯ ತೋರಿದ್ದಾರೆ ಎಂಬ ಕಾರಣಕ್ಕೆ ನರೇಗಲ್ ಪೊಲೀಸ್ ಠಾಣೆಯ ಪಿಎಸ್‌ಐ ನಿಖಿಲ್ ಎಂ.ಕೆ. ಅವರನ್ನು ಅಮಾನತುಗೊಳಿಸಿ ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್.ನೇಮಗೌಡ ಆ.25ಕ್ಕೆ ಆದೇಶ ಹೊರಡಿಸಿದ್ದಾರೆ.
ಆದೇಶ ಪಾಲನೆಯಲ್ಲಿ ನಿರ್ಲಕ್ಷ್ಯ ತೋರಿದ್ದಾರೆ ಹಾಗೂ ಹಿರಿಯ ಅಧಿಕಾರಿಗಳ ಫೋನ್ ಕರೆ ಸ್ವೀಕರಿಸದೇ, ಅವರಿಗೆ ಸರಿಯಾದ ಮಾಹಿತಿ ನೀಡದೆ ದುರ್ನಡತೆ ತೋರಿದ್ದಾರೆ ಎಂದು ಅಮಾನತು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.