ರಾಮನಗರ : ರಾಜಕೀಯದಿಂದ ನಿಖಿಲ್ ಕುಮಾರಸ್ವಾಮಿ ರಿಟೈರ್ಡ್. ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಔಟ್ ಸಿಗ್ನಲ್ ತೋರಿಸಿದ್ದು, ಸಿನಿಮಾ ನೋಡಿಕೋ ರಾಜಕೀಯ ಬೇಡ ಎಂದು ತಿಳಿಸಿದ್ದಾರೆ.
ರಾಮನಗರದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಮಾತನಾಡಿ ರಾಜಕೀಯದ ಸಹವಾಸಕ್ಕೆ ಹೋಗಲೇ ಬೇಡ, ಭಗವಂತ ಕೊಟ್ಟ ಕಲೆಯನ್ನು ಮುಂದುವರೆಸು. ಕಲಾವಿದನಾಗಿ ಜೀವನ ರೂಪಿಸಿಕೊಳ್ಳಲು ಸಮಸ್ಯೆ ಇಲ್ಲ, ದಯವಿಟ್ಟು ಈ ರಾಜಕೀಯದ ಜಂಗುಳಿ ಬಿಡು. ನಿಖಿಲ್ ಎಲೆಕ್ಷನ್ಗೆ ನಿಲ್ಲುವ ಪ್ರಶ್ನೆ ಇಲ್ಲವೇ ಇಲ್ಲ ಎಂದಿದ್ದಾರೆ. ಎರಡು ಎಲೆಕ್ಷನ್ಗಳಲ್ಲಿ ಜನರು ಸೋಲಿಸಿದ್ದಾರೆ, ಜನಾಭಿಪ್ರಾಯಕ್ಕೆ ನಾವು ಮನ್ನಣೆ ನೀಡಲೇಬೇಕು. ರಾಜಕೀಯದಲ್ಲಿ ಸೋಲು ಎಲ್ಲರಿಗೂ ಬಂದಿದೆ, ರಾಜಕೀಯವನ್ನು ನಿಖಿಲ್ ಬಯಸಿರಲೇ ಇಲ್ಲ. ಮುಖಂಡರು, ಶಾಸಕರ ಒತ್ತಡಕ್ಕೆ ಮಣಿದು ಮಂಡ್ಯಕ್ಕೆ ನಿಂತಿದ್ರು. ಮುಂದಿನ ಐದು ವರ್ಷ ಚುನಾವಣೆ ಬೇಡವೇ ಬೇಡ ಎಂದಿದ್ದೇನೆ ಎಂದು ತಿಳಿಸಿದರು.