ಸರ್ಕಾರಿ ಶಾಲೆಯಲ್ಲಿ ಕಲಿತ ಮಹಿಳೆಯರಿಗೆ ಸಿಗುತ್ತೆ ಉಚಿತ ಸ್ಮಾರ್ಟ್‌ಫೋನ್

graochandan1@gmail.com
1 Min Read

ರಾಜಸ್ಥಾನ: ಇಂದು ಸ್ಮಾರ್ಟ್‌ಫೋನ್‌ ಜೀವನದ ಅತ್ಯಂತ ಪ್ರಮುಖ ಭಾಗವಾಗಿದೆ. ಈ ಬಾರಿ ಸರ್ಕಾರ ಉಚಿತ ಸ್ಮಾರ್ಟ್‌ಫೋನ್‌ಗಳನ್ನು ನೀಡಲಿದೆ.

ರಾಜಸ್ಥಾನದಲ್ಲಿ ಇಂತಹದ್ದೊಂದು ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದಕ್ಕಾಗಿಯೇ ಅಶೋಕ್ ಗೆಹ್ಲೋಟ್ ಸರ್ಕಾರ ಉಚಿತ ಸ್ಮಾರ್ಟ್‌ಫೋನ್ ನೀಡುವ ಯೋಜನೆಯನ್ನು ಪ್ರಾರಂಭಿಸಿದೆ ಆದರೆ ಈ ಯೋಜನೆಯಡಿಯಲ್ಲಿ ಉಚಿತ ಸ್ಮಾರ್ಟ್‌ಫೋನ್‌ ಮಹಿಳೆಯರಿಗೆ ನೀಡಲಾಗುವುದು. ಇತ್ತೀಚೆಗೆ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಇಂದಿರಾ ಗಾಂಧಿ ಉಚಿತ ಸ್ಮಾರ್ಟ್ಫೋನ್ ಯೋಜನೆ 2023 ಎಂಬ ಯೋಜನೆಯನ್ನು ಪ್ರಾರಂಭಿಸಿದರು.

ರಾಜಸ್ಥಾನದಲ್ಲಿ ವಾಸಿಸುವ ಮಹಿಳೆಯರಿಗೆ ಉಚಿತ ಧ್ವನಿ ಕರೆಗಳು ಮತ್ತು ಇಂಟರ್ನೆಟ್ ಸೌಲಭ್ಯಗಳೊಂದಿಗೆ ಮೊಬೈಲ್ ಫೋನ್‌ಗಳನ್ನು ಒದಗಿಸುವುದು ಈ ಯೋಜನೆಯ ಉದ್ದೇಶವಾಗಿದೆ.

ಈ ಸ್ಮಾರ್ಟ್‌ಫೋನ್ ಯಾರಿಗೆ ಉಚಿತವಾಗಿ ಸಿಗುತ್ತದೆ? ಆದರೆ ಪೂರೈಸಬೇಕಾದ ಕೆಲವು ಷರತ್ತುಗಳಿವೆ. ಎಲ್ಲಾ ಮಹಿಳೆಯರು ರಾಜಸ್ಥಾನದ ಸರ್ಕಾರಿ ಶಾಲೆಗಳಲ್ಲಿ IX ರಿಂದ XII ನೇ ತರಗತಿಯವರೆಗೆ ಓದಿರಬೇಕು.

- Advertisement -
Ad image

ಉನ್ನತ ಶಿಕ್ಷಣ ಪಡೆದ ಅಥವಾ ಕಾಲೇಜಿಗೆ ದಾಖಲಾದ ವಿದ್ಯಾರ್ಥಿ, ರಾಜ್ಯದೊಳಗೆ ಸರ್ಕಾರಿ ಪಿಂಚಣಿ ಪಡೆಯುವ ವಿಧವೆ ಅಥವಾ ಏಕಾಂಗಿಯಾಗಿ ವಾಸಿಸುವ ಯಾವುದೇ ಮಹಿಳೆಗೆ ಈ ಉಚಿತ ಸ್ಮಾರ್ಟ್‌ಫೋನ್‌ ಸಿಗಲಿದೆ.
ಇದಕ್ಕಾಗಿ ರಾಜಸ್ಥಾನದ ಸರ್ಕಾರದ ಅಧಿಕೃತ ಅಂತರ್ಜಾಲ ತಾಣದಲ್ಲಿ ನೋಂದಣಿ ಮಾಡಬೇಕಾಗುತ್ತದೆ.

Share this Article