ಶರ್ಟ ಗುಂಡಿ ಬಿಚ್ಚಿ ಜಿಮ್ಸನಲ್ಲಿ ವೈದ್ಯ ಗೌತಮ್ ನ ಹುಚ್ಚಾಟದ ವಿಡಿಯೋ ವೈರಲ್

graochandan1@gmail.com
2 Min Read

ಗದಗ: ರೋಗಿಗಳಿಗೆ ಚಿಕಿತ್ಸೆ ನೀಡಬೇಕಿದ್ದ ವೈದ್ಯನೇ ಇಲ್ಲಿ ರೋಗಿಯ ಸಂಬಂಧಿಕರ ಮುಂದೆ ತನ್ನ ಶರ್ಟ್ ಬಿಚ್ಚಿ, ಅನುಚಿತ ವರ್ತನೆ ಮಾಡುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ವೈದ್ಯನ ಈ ಹುಚ್ಚಾಟಕ್ಕೆ ರೋಗಿಗಳು ಕಂಗಾಲಾಗಿರುವ ಘಟನೆ ಗದಗ ಜಿಲ್ಲಾ ಆಸ್ಪತ್ರೆಯಲ್ಲಿ ನಡೆದಿದೆ.

ಮಲ್ಲಸಮುದ್ರದಲ್ಲಿ ಇರುವ ಜಿಲ್ಲಾ ಆಸ್ಪತ್ರೆಯ
ಹೆರಿಗೆ ವಾರ್ಡ್ ನಲ್ಲಿ‌ ಕೆಲಸ ಮಾಡುವ ಗೌತಮ್ ಎಂಬ ವೈದ್ಯ, ರೋಗಿ ಸಂಬಂಧಿಕರ ಜೊತೆ ಅನುಚಿತವಾಗಿ ವರ್ತಿಸಿದ್ದಾರೆ.

ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದ ಹುಸೇನಬಿ ಹೊಳಲ ಎಂಬವರ ಹೆರಿಗೆಯಾಗಿದೆ. ನವಜಾತ ಶಿಶು ಕಾಮಾಲೆ ರೋಗದಿಂದ ಬಳಲುತ್ತಿದೆ ಅದಕ್ಕೆ ಸರಿಯಾಗಿ ಚಿಕಿತ್ಸೆ ನೀಡದಿರುವ ಕಾರಣಕ್ಕೆ ಪತಿ ಮುಸ್ತಾಕಅಲಿ ವೈದ್ಯ ಗೌತಮ್ ರನ್ನು ಪ್ರಶ್ನೆ ಮಾಡಿದ್ದಾರೆ.

 

- Advertisement -
Ad image

ಮಾತಿಗೆ ಮಾತು ಬೆಳೆದು ಕುಪಿತಗೊಂಡ ವೈದ್ಯ ಗೌತಮ್
ಇಲ್ಲಿ ನಾನು ಆಡಿದ್ದೆ ಆಟ,ನಾನೇ ಡಾಕ್ಟರ ನಾನು ಹೇಗೆ ಇರಬೇಕು ಹಾಗೆ ಇರ್ತೀನಿ ಅದನ್ನು ಹೇಳಕ್ಕೆ ನೀನ್ಯಾರು, ಸ್ಟೆತಸ್ಕೋಪ್ ಹಾಕಿಕೊಂಡ್ರೆ ವೈದ್ಯ, ಕೈನಲ್ಲಿ ಲಾಂಗ್, ಮಚ್ವು ಹಿಡಿದ್ರೆ ರೌಡಿ. ಇಲ್ಲಿ ಡಿಸಿ, ಎಸ್ಪಿ,‌ ಮೀಡಿಯಾ ಯಾರೇ ಬಂದ್ರೂ ಏನು ಮಾಡಿಕೊಳ್ಳೊಕೆ ಆಗಲ್ಲ ಅಂತ ಸಿನಿಮಾ ಡೈಲಾಗ್ ರೀತಿಯಲ್ಲಿ ಅವಾಜ್ ಹಾಕಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಶರ್ಟ್ ಕಳೆದು ಹೇಗೆ ಬೇಕು ಹಾಗೆ ವರ್ತಿಸುತ್ತಾನೆ. ಏನ್ ಮಾಡ್ಕೋತಿಯ ಮಾಡ್ಕೋ, ಪ್ರೆಸ್ ಮೀಟ್ ಮಾಡುತ್ತೀಯಾ ಫೇಸ್ ಬುಕ್ಕಲ್ಲಿ ಲೈವ್ ಬಿಡ್ತಿಯಾ ಬಿಟ್ಕೊ, ಬಾ ನನ್ನ ಊರಿಗೆ ಗದಗ ಜಿಲ್ಲೆ ರೋಣ ತಾಲೂಕಿನ ಕುರಹಟ್ಟಿಗೆ ಬಾ ಅಲ್ಲಿ ನೋಡ್ಕೋತೀನಿ. ಇಲ್ಲಿ ನಾನೇ ಬಾಸ್ ಇದು ನನ್ನ ಆಸ್ಪತ್ರೆ ಎಂದು ಹೇಳಿ ತನ್ನ ಶರ್ಟ್ ಬಿಚ್ಚಿ ದರ್ಪ ತೋರಿದ್ದಾನೆ. ವಿಡಿಯೋ ಮಾಡಿದ್ರೆ ಹೊಡೆತ ತಿಂತಿಯಾ ಹುಷಾರ್ ಅಂತ ರೌಡಿ ರೀತಿ ವರ್ತಿಸಿದ್ದಾರೆ ವೈದ್ಯ ಗೌತಮ್. ಎಷ್ಟು ದಿನ ಅಂತ ಇಲ್ಲೇ ತಿನ್ಕೊಂಡು ಬಿದ್ದಿರ್ತೀರಾ, ಮನೆಗೆ ಹೋಗ್ರಿ, ಇವರ ಆಧಾರ ಕಾರ್ಡ್, ರೇಷನ್ ಕಾರ್ಡ್ ರದ್ದು ಮಾಡಿ, ಮುಂದೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಗದಂತೆ ಮಾಡಿ ಅಂತ ಅಲ್ಲಿಯ ಸಿಬ್ಬಂದಿಗಳಿಗೆ ಹೇಳಿದ್ದಾರೆ.

ವೈದ್ಯಾಧಿಕಾರಿಗಳು ಹಾಗೂ ಜಿಲ್ಲಾಡಳಿತ ಈತನ ಮೇಲೆ ಕ್ರಮ ಕೈಗೊಳ್ಳಬೇಕು. ಜಿಲ್ಲಾ ಆಸ್ಪತ್ರೆಗೆ ಬರುವ ಬಡ ರೋಗಿಗಳಿಗೆ ಇವನಿಂದ ಆಗುವ ಅನ್ಯಾಯ ಸರಿಪಡಿಸಬೇಕು ಅಂತಾ ರೋಗಿಗಳು ಒತ್ತಾಯಿಸಿದ್ದಾರೆ.

 

 

Share this Article