ಬೆಂಗಳೂರು : ಚಂದ್ರಯಾನ-3 ಅಭೂತಪೂರ್ವ ಯಶಸ್ಸನ್ನು ಗುರುತಿಸಲು ಇನ್ಮುಂದೆ ಭಾರತವು ಆಗಸ್ಟ್ 23 ಅನ್ನು ‘ರಾಷ್ಟ್ರೀಯ ಬಾಹ್ಯಾಕಾಶ ದಿನ’ವಾಗಿ ಆಚರಿಸಲಿದೆ ಎಂದು ಪ್ರಧಾನಿ ಮೋದಿ ಘೋಷಿಸಿದ್ದಾರೆ.
ಬೆಂಗಳೂರಿನಲ್ಲಿ ಇಸ್ರೋ ವಿಜ್ಞಾನಿಗಳ ತಂಡವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಇಡೀ ಪೀಳಿಗೆಯನ್ನು ಜಾಗೃತಗೊಳಿಸಿ ಯುವ ಮನಸ್ಸುಗಳಲ್ಲಿ ಆಳವಾದ ಛಾಪು ಮೂಡಿಸಿದ ಕೀರ್ತಿಯನ್ನು ಇಸ್ರೋ ವಿಜ್ಞಾನಿಗಳಿಗೆ ನೀಡಿದ್ದಾರೆ.
ಭಾರತದ ಚಂದ್ರಯಾನದ ಯಶಸ್ವಿ ಮಿಷನ್ ಹಿಂದಿನ ವಿಜ್ಞಾನಿಗಳನ್ನು ಶ್ಲಾಘಿಸಿದ ಪ್ರಧಾನಿ ಮೋದಿ, ನೀವು ‘ಮೇಕ್ ಇನ್ ಇಂಡಿಯಾ’ ಅನ್ನು ಚಂದ್ರನಲ್ಲಿಗೆ ಕೊಂಡೊಯ್ದಿದ್ದೀರಿ’ ಎಂದು ಶ್ಲಾಘಿಸಿದರು.
ಚಂದ್ರಯಾನ-3 ಲ್ಯಾಂಡರ್‌ನ ಯಶಸ್ಸಿನ ಸ್ಮರಣಾರ್ಥ ವಿಕ್ರಮ್ ಲ್ಯಾಂಡರ್ ಲ್ಯಾಂಡರ್ ಕಾಲೂರಿದ ಸ್ಥಳವನ್ನು ‘ಶಿವಶಕ್ತಿ ಪಾಯಿಂಟ್’ ಎಂದು ಕರೆಯಲಾಗುವುದು ಎಂದು ಪ್ರಧಾನಿ ಮೋದಿ ಘೋಷಿಸಿದರು. ಬೆಂಗಳೂರಿನ ಇಸ್ರೋ ಟೆಲಿಮೆಟ್ರಿ ಟ್ರ್ಯಾಕಿಂಗ್ ಮತ್ತು ಕಮಾಂಡ್ ನೆಟ್‌ವರ್ಕ್ ಮಿಷನ್ ಕಂಟ್ರೋಲ್ ಕಾಂಪ್ಲೆಕ್ಸ್‌ನಲ್ಲಿ ವಿಜ್ಞಾನಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ಪ್ರಧಾನಿ ಅವರು ಸ್ಥಳದ ಹೆಸರನ್ನು ಘೋಷಿಸಿದರು.
ಇದಲ್ಲದೆ, ಅವರು ಚಂದ್ರಯಾನ-2 ರ ಕ್ರ್ಯಾಶ್ ಲ್ಯಾಂಡಿಂಗ್ ಸೈಟ್‌ನ ಹೆಸರನ್ನು ‘ತಿರಂಗಾ ಪಾಯಿಂಟ್’ ಎಂದು ಘೋಷಿಸಿದರು. ಚಂದ್ರಯಾನ-2 2019 ರಲ್ಲಿ ಚಂದ್ರನ ಮೇಲ್ಮೈಯಲ್ಲಿ ತನ್ನ ಹೆಜ್ಜೆಗುರುತನ್ನು ಬಿಟ್ಟಿದೆ ಎಂದು ಅವರು ಹೇಳಿದರು. ಭಾರತದ ಚಂದ್ರನ ಮಿಷನ್‌ನ ಯಶಸ್ಸಿನಲ್ಲಿ ಇಸ್ರೋದ ಮಹಿಳಾ ವಿಜ್ಞಾನಿಗಳಿಗೆ ಅವರು ಮನ್ನಣೆ ನೀಡಿದರು.