ಹುಬ್ಬಳ್ಳಿ ಕಿಮ್ಸ್‌ ಆಸ್ಪತ್ರೆಯಲ್ಲಿ ಮರಣವಾಗಿದೆ ಎಂಬ ಮಗುವು ಸ್ಮಶಾನದಲ್ಲಿ ಬಾಯಿಗೆ ನೀರು ಬಿಡುತಿದ್ದಂತೆ ಎಚ್ಚರ!

ಸಮಗ್ರ ಪ್ರಭ ಸುದ್ದಿ
1 Min Read

ನವಲಗುಂದ: ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆಯಲ್ಲಿ ಮೃತಪಟ್ಟಿದೆ ಎಂದು ದೃಢೀಕರಿಸಿ ನೀಡಲಾಗಿದ್ದ ಮಗುವು ಸ್ಮಶಾನದಲ್ಲಿ ಹೂಳುವ ಸಂದರ್ಭದಲ್ಲಿ ಬಾಯಿಗೆ ನೀರು ಬಿಡುತ್ತಿರುವಾಗ ಏಕಾಏಕಿ ಎಚ್ಚರವಾಗದ ಘಟನೆ ನಡೆದಿದ್ದು ಕಳೆದ ಕೆಲ  ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ತಾಲೂಕಿನ ಬಸಾಪೂರ ಗ್ರಾಮದ ಒಂದು ಒರೆ ವರ್ಷದ ಆಕಾಶ ಬಸವರಾಜ ಪೂಜಾರ ಎಂಬ ಮಗು ಕಿಮ್ಸ್‌ ಆಸ್ಪತ್ರೆಯಲ್ಲಿ ನಿಧನವಾದ ಸುದ್ದಿ ಪಾಲಕರಿಗೆ ಅರಗಿಸಿಕೊಳ್ಳಲಾಗದ ಸಂದರ್ಭದಲ್ಲಿ ಇನ್ನೇನು ಮಗು ಮಣ್ಣು ಸೇರುವ ವೇಳೆ ಉಸಿರು ಬಿಟ್ಟು ಎಲ್ಲರನ್ನೂ ಛಕಿತಗೊಳಿಸಿದ ಘಟನೆ ಗ್ರಾಮದ ಸ್ಮಶಾನದಲ್ಲಿ ನಡೆದಿದೆ.

ಅನಾರೋಗ್ಯದಿಂದ ಬಳಲುತ್ತಿದ್ದ ಮಗುವನ್ನು ವೈದ್ಯರ ಸಲಹೆಯಂತೆ ಪೋಷಕರು ಗದಗ ಶಹರದ ಜರ್ಮನ್‌ ಆಸ್ಪತ್ರೆಗೆ ದಾಖಲಿಸಿದ್ದರು. ನಿರೀಕ್ಷಿತ ಫಲಿತಾಂಶ ದೊರಕದ ಹಿನ್ನೆಲೆಯಲ್ಲಿ ಧಾರವಾಡದ ಎಸ್‌ಡಿಎಂ ಆಸ್ಪತ್ರೆಗೆ ದಾಖಲಿಸಿದ್ದರು. ಅಧಿಕ ವೆಚ್ಚ ಖರ್ಚಾಗುವುದರಿಂದ ಹುಬ್ಬಳ್ಳಿಯ ಕಿಮ್ಸ್‌ಗೆ ದಾಖಲಿಸುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ಕಿಮ್ಸ್‌ಗೆ ದಾಖಲು ಮಾಡಿದ್ದರು.

ಕಳೆದ 4 ದಿನಗಳವರೆಗೆ ಚಿಕಿತ್ಸೆ ನೀಡಿ ಆರೈಕೆ ಮಾಡಿದ ಕಿಮ್ಸ್‌ ವೈದ್ಯರು ಗುರುವಾರ ಸಂಜೆ ” ನಿಮ್ಮ ಮಗುವಿನ ಹೃದಯ ಬಡಿತ ಕಡಿಮೆ ಪ್ರಮಾಣದಲ್ಲಿದ್ದು, ಮಗು ಆಕ್ಸಿಜನ್‌ ಮೂಲಕ ಬದುಕಿದೆ. ಅದನ್ನು ತೆಗೆದರೆ ಜೀವ ಉಳಿಯುವುದಿಲ್ಲ” ಎಂದು ಹೇಳಿ ನಂತರ ಗುರುವಾರ ಸಂಜೆ ” ಮಗು ಸತ್ತು ಹೋಗಿದೆ” ಎಂದು ಹೇಳಿ ಸಹಿ ಪಡೆದು ದೇಹ ಹಸ್ತಾಂತರ ಮಾಡಿದರು ಎಂದು ಪೋಷಕರು ಹೇಳುತ್ತಾರೆ.

ಮಗುವನ್ನು ಸ್ಮಶಾನದಲ್ಲಿ ಹೂಳುವ ಸಂದರ್ಭದಲ್ಲಿ ಸಂಪ್ರದಾಯದಂತೆ ಬಾಯಿಗೆ ನೀರು ಬಿಡುತ್ತಿರುವಾಗ ಮಗು ಕೈಕಾಲು ಆಡಿಸಿತು. ಆಗ ಜೀವಂತವಾಗಿದೆ ಎಂದು ತಿಳಿದು ನವಲಗುಂದ ಆಸ್ಪತ್ರೆಗೆ ಕರೆ ತಂದಾಗ ಮಗುವಿನ ಹೃದಯ ಸ್ತಂಬನ ಸರಿಯಾಗಿದ್ದು, ಮಗು ಜೀವಂತವಾಗಿದೆ ಎಂದು ನವಲಗುಂದ ಸರಕಾರಿ ವೈದ್ಯರು ತಿಳಿಸಿದರಲ್ಲದೇ ಧಾರವಾಡ ಸಿವಿಲ್‌ ಆಸ್ಪತ್ರೆಗೆ ಕಳುಹಿಸಿದರು ಎಂದು ಮಗುವಿನ ತಂದೆ ಬಸಪ್ಪ ಪೂಜಾರ ತಿಳಿಸಿದರು.

ಇನ್ನು ಮಗುವಿನ ಆರೋಗ್ಯದ ಬಗ್ಗೆ ಕಿಮ್ಸ್‌ ವೈದ್ಯರ ನಿರ್ಲಕ್ಷ್ಯವೊ ಅಥವಾ ಮಗುವಿನ ಅದೃಷ್ಟವೊ ಎಂಬಂತಾಗಿದೆ ಎಂದು ಮಗುವಿನ ತಂದೆ ಬಸಪ್ಪ ಪೂಜಾರ ಹೇಳಿದ್ದಾರೆ.

Share this Article