ಗ್ರಾಪಂ ಗಳಲ್ಲಿ ಅವ್ಯವಹಾರ ಖಂಡಿಸಿ ಜಯಕರ್ನಾಟಕ ಸಂಘಟನೆಯಿಂದ ಅನಿರ್ದಿಷ್ಟ ಧರಣಿ ಸತ್ಯಾಗ್ರಹ

ಸಮಗ್ರ ಪ್ರಭ ಸುದ್ದಿ
1 Min Read

ಹುಣಸಗಿ : ತಾಲೂಕಿನ ವಿವಿಧ ಗ್ರಾಮ ಪಂಚಾಯತ ಗಳಲ್ಲಿ 2021-22 ಹಾಗೂ 22-23 ನೇ ಸಾಲಿನಲ್ಲಿ ವಿಪರೀತ ಮಳೆ ಹಾಗೂ ಗಾಳಿಯಿಂದ ಹಾನಿಗೋಳಗಾದ ಬೆಳೆಗಳಿಗೆ ಹಾಗೂ ಮನೆಗಳ ಅರ್ಹರಿಗೆ ಪರಿಹಾರ ನೀಡದೆ ಅನರ್ಹರಿಗೆ ಪರಿಹಾರ ನೀಡುವ ಮೂಲಕ ವಂಚನೆ ಮಾಡಿದ್ದಾರೆ ಆದ್ದರಿಂದ ತಪ್ಪಿಸ್ತತರ ಮೇಲೆ ಕಾನೂನು ಕ್ರಮ ಜರಗಿಸಬೇಕೆಂದು ಜಯ ಕರ್ನಾಟಕ ತಾಲೂಕ ಅಧ್ಯಕ್ಷರಾದ. ಪ್ರಭುಗೌಡ. ಪೋತರೆಡ್ಡಿ. ಸರಕಾರಕ್ಕೆ ಒತ್ತಾಯಿಸಿದ್ದಾರೆ.

ಹುಣಸಗಿ ತಾಲೂಕು ಜಯ ಕರ್ನಾಟಕ ತಾಲೂಕು ಘಟಕ ಹಾಗೂ ರೈತ ಸಂಘದ ವತಿಯಿಂದ ತಾಲೂಕು ಪಂಚಾಯತಿ ಆವರಣದ ಮುಂಭಾಗದಲ್ಲಿ ಸತತವಾಗಿ ನಾಲ್ಕು ದಿನದಿಂದ ಧರಣಿ ನಡೆಯುತ್ತಿದೆ. ಹುಣಸಗಿ ತಾಲೂಕಿನ ಹಳ್ಳಿಗಳಾದ ಜೋಗಂಡಭಾವಿ, ಬರದೇವನಾಳ, ಗೆದ್ದಲಮರಿ, ನಾರಾಯಣಪುರ, ಮಾರನಾಳ, ಕೊಡೆಕಲ್ ಈ ಗ್ರಾಮಗಳ ವ್ಯಾಪ್ತಿಯ ಎಲ್ಲ ಗ್ರಾಮಗಳಲ್ಲಿ ಗ್ರಾಮ ಪಂಚಾಯತಿಗಳ ಅವ್ಯವಹಾರ ನಡೆದಿದ್ದು ಸೂಕ್ತ ಫಲಾನುಭವಿಗಳಿಗೆ ನೀಡದೆ ಅನರ್ಹರಿಗೆ ಪರಿಹಾರ ನೀಡುವ ಮೂಲಕ ಸರ್ಕಾರಕ್ಕೆ ವಂಚಿಸಿದ್ದಲ್ಲದೆ, ರೈತರಿಗೂ ಮೋಸ ಮಾಡಿದ್ದಾರೆ ಎಂದು ಆರೋಪಿಸಿದರು.
ನಾಲ್ಕು ದಿನಗಳಿಂದ ಧರಣಿ ನಡೆಸುತ್ತಿದ್ದರು ತಪ್ಪಿಸ್ತತರ ಅಧಿಕಾರಿಗಳ ಮೇಲೆ ಕ್ರಮ ಜರುಗಿಸದೆ ಇರುವುದು ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ. ಇದೇ ರೀತಿ ಅಧಿಕಾರಿಗಳು ವಿಳಂಬ ನೀತಿ ಅನುಸರಿಸದರೆ ಜಯ ಕರ್ನಾಟಕ ಸಂಘಟನೆ ವತಿಯಿಂದ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುತ್ತದೆ. ಮುಂದಿನ ಹಾಗೂ ಹೋಗುಗಳಿಗೆ ಸರಕಾರ ಹಾಗೂ ಅಧಿಕಾರಿಗಳೇ ನೇರ ಹೊಣೆ ಆಗಬೇಕಾಗುತ್ತದೆ ಎಂದು ರೈತ ಸಂಘದ ಮುಖಂಡ. ಅರವಿಂದ ಕುಲಕರ್ಣಿ ಸರಕಾರಕ್ಕೆ ಎಚ್ಚರಿಸಿದ್ದಾರೆ. ಈ ಧರಣಿಯಲ್ಲಿ ಹುಣಸಗಿ ತಾಲೂಕು ಅಧ್ಯಕ್ಷರಾದ ಪ್ರಭುಗೌಡ ಪೋತರೆಡ್ಡಿ,.ತಾಲೂಕ ಉಪಾಧ್ಯಕ್ಷರಾದ. ಅವಿನಾಶ್ ನಾಯಕ್.ಮುತ್ತುಗೌಡ. ಬಪ್ಪರಗಿ . ರೈತಮುಖಂಡ. ಚನ್ನಯ್ಯಸ್ವಾಮಿ. ಮುದನೂರ್. ಬಾಲಚಂದ್ರ ನಾಯಕ, ಲಾಲಸಿಂಗ್ ನಾಯಕ, ರಾಜು ಚವ್ಹಾಣ,ದಿನೇಶ್ ರಾಥೋಡ, ಲೋಕಪ್ಪ ನಾಯಕ, ಶಾಂತಪ್ಪ ಕೆಳಗಿನಮನಿ, ರಮೇಶ್ ರಾಥೋಡ, ಶಿವಾನಂದ ದೊರೆ, ನೇಮು ರಾಥೋಡ, ಮಲ್ಲನಗೌಡ ಪಾಟೀಲ, ಸಂತೋಷ್ ದೇಸಾಯಿ, ಸಿ.ಎನ್. ಅರಸಿಕೆರೆ, ಮೈಬುಬಸಾಬ್ ತಲಕೇರಿ,ಹಾಗೂ ಇನ್ನು ಹೆಚ್ಚು ಜನರು ಭಾಗವಹಿಸಿದ್ದರು.

Share this Article