ರಾಜ್ಯದಲ್ಲಿ ಮಳೆಗೂ ತೊಂದರೆ ಇಲ್ಲ, ಅನ್ನಕ್ಕೂ ಸಮಸ್ಯೆ ಇಲ್ಲ : ಭಾರೀ ಮಳೆಯ ಭವಿಷ್ಯ ನುಡಿದ ಕೋಡಿಮಠ ಸ್ವಾಮೀಜಿ

graochandan1@gmail.com
1 Min Read

ಹಾಸನ : ರಾಜ್ಯದಲ್ಲಿ ಮಳೆಗೂ ತೊಂದರೆ ಇಲ್ಲ, ಅನ್ನಕ್ಕೂ ತೊಂದರೆ ಇಲ್ಲ. ವಿಪರೀತ ಮಳೆಯಾಗುವ ಸಾಧ್ಯತೆ ಇದೆ. ಶ್ರಾವಣದಲ್ಲೇ ಮಳೆಯ ಬಗ್ಗೆ ಎಲ್ಲರಿಗೂ ಗೊತ್ತಾಗುತ್ತದೆ. ಪ್ರಕೃತಿಯಿಂದಲೂ ಹಾನಿಯಾಗುತ್ತದೆ ಎಂದು ಕೋಡಿಮಠದ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.

ಹಾಸನ ಜಿಲ್ಲೆಯ ಕೋಡಿಮಠದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ, ರಾಜ್ಯದಲ್ಲಿ ಮಳೆ ಬರುತ್ತೆ ತೊಂದರೆ ಏನಿಲ್ಲ. ಈ ಹಿಂದೆ ಒಂದು ಸಾರಿ ಮಳೆ ಬಂದಂತೆ ಇನ್ನೊಂದು ಸಾರಿ ಮಳೆ‌ ಬರುತ್ತದೆ. ಕಾಲ‌ ಹೇಳ್ತಿನಿ, ಮಳೆಗೇನು ಸಮಸ್ಯೆ ಇಲ್ಲ, ಅಷ್ಟೇ ಮಳೆ‌ ಬರುತ್ತದೆ. ಅನ್ನಕ್ಕೆ ತೊಂದರೆ ಆಗುವುದಿಲ್ಲ. ಇನ್ನೂ ವಿಪರೀತ ಮಳೆಯಾಗುವ ಲಕ್ಷಣ ಇದೆ, ರಾಜ್ಯದಲ್ಲಿ ಬೇಕಾದಷ್ಟು ಮಳೆ ಬರುತ್ತದೆ ಎಂದರು.

ಇನ್ನೂ ಮಳೆ, ಗುಡುಗು, ಭೂಮಿ ಬಿರುಕು ಬಿಡಲಿದೆ. ದ್ವೇಷಗಳು ಹೆಚ್ಚುತ್ತವೆ, ಅಪಮೃತ್ಯು ಎಲ್ಲವೂ ರಾಜ್ಯದಲ್ಲಿ ನಡೆಯುತ್ತದೆ. ಪ್ರಕೃತಿಯಿಂದಲೂ ಹಾನಿ ಇದೆ, ಶ್ರಾವಣ ಮಾಸದಲ್ಲೇ ಮಳೆಯ ಬಗ್ಗೆ ಎಲ್ಲರಿಗೂ ಗೊತ್ತಾಗುತ್ತದೆ. ಶ್ರಾವಣದ‌ ಮಧ್ಯಭಾಗದ ಮೇಲೆ ಕಾರ್ತಿಕದವರೆಗೂ ಮಳೆ ಆಗುತ್ತದೆ. ಮಳೆಯಿಂದ ಮತ್ತೆ ಅಪಾಯ ಸಂಭವಿಸುವ ಲಕ್ಷಣಗಳಿವೆ ಎಂದು ಕೋಡಿಮಠದ ಸ್ವಾಮೀಜಿ ಭವಿಷ್ಯ ನುಡಿದರು.

ಕಾಂಗ್ರೆಸ್‌ ಸರ್ಕಾರಕ್ಕೆ ಏನು ತೊಂದರೆಯಿಲ್ಲ!ರಾಜ್ಯದಲ್ಲಿನ ಕಾಂಗ್ರೆಸ್‌ ಸರ್ಕಾರದ ಕುರಿತು ಸ್ಮಶಾನದಲ್ಲಿ ಪಿಶಾಚಿ ಕುಣಿದಂತೆ ಆಗ್ತಾ ಇದೆ, ಏನು ಆಗಲ್ಲ. ನೋಡುವವರಿಲ್ಲ, ಕೇಳುವವರಿಲ್ಲ. ಆನಂದ ಪಡುವವರಿಲ್ಲ. ರಾಜ್ಯ ಸರ್ಕಾರಕ್ಕೆ ಏನು ತೊಂದರೆಯಿಲ್ಲ. ಲೋಕಸಭಾ ಚುನಾವಣೆ ಬಳಿಕ ಸಿದ್ದರಾಮಯ್ಯ ಅವರು ಐದು ವರ್ಷ ಮುಖ್ಯಮಂತ್ರಿಯಾಗಿ ಮುಂದುವರೆಯುವ ಬಗ್ಗೆ ನಿರ್ಧಾರ ಆಗುತ್ತದೆ. ಲೋಕಸಭೆ ಚುನಾವಣೆಯಲ್ಲಿ ಏನಾಗುತ್ತದೆ. ದೇಶದಲ್ಲಿ ಯಾವ ಸರ್ಕಾರ ಬರುತ್ತದೆ ಎಂದು ಮುಂದೆ ಹೇಳ್ತೀನಿ ಎಂದು ಕೋಡಿಮಠದ ಸ್ವಾಮೀಜಿ ತಿಳಿಸಿದರು.

- Advertisement -
Ad image

Share this Article