HK ಪಾಟೀಲ ಅಭಿಮಾನಿ ಬಳಗದಿಂದ ಬಿಂಕದಕಟ್ಟಿ ಮೃಗಾಲಯದ ಹುಲಿ ದತ್ತು ಸ್ವೀಕಾರ

ಸಮಗ್ರ ಪ್ರಭ ಸುದ್ದಿ
1 Min Read

ಗದಗ:  ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಕೆ.ಪಾಟೀಲ ಅವರ 70 ನೇ ಜನ್ಮ ದಿನಾಚರಣೆಯ ಅಂಗವಾಗಿ ಅವರ ಅಭಿಮಾನಿಗಳಿಂದ ಬಿಂಕದಕಟ್ಟಿ‌ ಮೃಗಾಲಯದಲ್ಲಿನ ಹುಲಿಯನ್ನು ದತ್ತು ಸ್ವೀಕಾರ ಪಡೆಯಲಾಯಿತು.

ಕೆ.ಎಚ್.ಪಾಟೀಲ‌ ಜಿಲ್ಲಾ‌ ಕ್ರೀಡಾಂಗಣದಲ್ಲಿ ಮಂಗಳವಾರ ಜರುಗಿದ ಸ್ವಾತಂತ್ರೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ ಮಾಜಿ ಅಧ್ಯಕ್ಷ‌ ಸಿದ್ದಲಿಂಗೇಶ್ವರ ಪಾಟೀಲ, ಮುರಗೇಶ‌ ಬಡ್ನಿ, ಅಂದಾನಪ್ಪ ಬಿಂಗಿ, ಕಾರ್ತಿಕ ಗುಜಮಾಗಡಿ ಅವರುಗಳು ಮೃಗಾಲಯದ ಹುಲಿ ದತ್ತು ಪಡೆದರು.

ಉಪ‌ ಅರಣ್ಯ ಸಂರಕ್ಷಣಾಧಿಕಾರಿಗಳಾದ ದೀಪಿಕಾ ಬಾಜಪೇಯಿ ಅವರು ಹುಲಿ ದತ್ತು ಸ್ವೀಕಾರದ ಪ್ರಮಾಣ‌ ಪತ್ರ ವಿತರಿಸಿ‌, ಮೃಗಾಲಯದ ಪ್ರಾಣಿ ಪಕ್ಷಿಗಳ ದತ್ತು ಸ್ವೀಕಾರವು ಇತರರಿಗೆ ಪ್ರೇರಣೆಯಾಗಲಿ ಎಂದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ, ಜಿಲ್ಲಾಧಿಕಾರಿ ವೈಶಾಲಿ.ಎಂ.ಎಲ್ ಸೇರಿದಂತೆ ಇತರರು ಇದ್ದರು.

Share this Article