ಬೆಂಗಳೂರು : ರಾಜ್ಯದ ಸಾರಿಗೆ ಇಲಾಖೆಯು 15 ವಿವಿಧ ಸೇವೆಗಳನ್ನು ಸಾರ್ವಜನಿಕರಿಗೆ ಸಾರಥಿ ತಂತ್ರಾಂಶದಲ್ಲಿ ಆನ್‍ಲೈನ್ ಮುಖಾಂತರ ಒದಗಿಸಲು ಆದೇಶ ಹೊರಡಿಸಿದೆ.ಕಲಿಕಾ ಚಾಲನಾ ಅನುಜ್ಞಾ ಪತ್ರ ನೀಡುವಿಕೆ, ಕಲಿಕಾ ಚಾಲನಾ ಅನುಜ್ಞಾ ಪತ್ರದಲ್ಲಿ ವಿಳಾಸ, ಹೆಸರು ಬದಲಾವಣೆ, ನಕಲು ಕಲಿಕಾ ಚಾಲನಾ ಅನುಜ್ಞಾ ಪತ್ರವನ್ನು ಆನ್‍ಲೈನ್ ಮೂಲಕ ಸಾರ್ವಜನಿಕರಿಗೆ ನೀಡಲು ಸಾರಿಗೆ ಇಲಾಖೆ ಅಸೂಚಿಸಿ ಆದೇಶಿಸಿದೆ.
ಹಾಗೆಯೇ ಅಂತರ್‍ರಾಷ್ಟ್ರೀಯ ಚಾಲನಾ ಪರವಾನಗಿ, ಚಾಲನಾ ಅನುಜ್ಞಾ ಪತ್ರದ ವಹಿ, ಚಾಲನಾ ಅನುಜ್ಞಾ ಪತ್ರದ ನವೀಕರಣ, ನಕಲು ಚಾಲನಾ ಅನುಜ್ಞಾ ಪತ್ರ ನೀಡುವಿಕೆ, ಚಾಲನಾ ಅನುಜ್ಞಾ ಪತ್ರದಲ್ಲಿ ವಿಳಾಸ, ಹೆಸರು ಬದಲಾವಣೆ, ನಿರ್ವಾಹಕ ಚಾಲನಾ ಚಾಲನಾ ಅನುಜ್ಞಾ ಪತ್ರ ನೀಡುವಿಕೆ ಮತ್ತು ನವೀಕರಣ, ನಕಲು ನಿರ್ವಾಹಕ ಚಾಲನಾ ಚಾಲನಾ ಅನುಜ್ಞಾ ಪತ್ರ ನೀಡುವಿಕೆ ಹಾಗೂ ಈ ಪತ್ರದಲ್ಲಿ ವಿಳಾಸ, ಹೆಸರು ಬದಲಾವಣೆಯ ಸೇವೆಗಳನ್ನು ಸಂಪರ್ಕರಹಿತ ಸೇವೆಗಳನ್ನಾಗಿ ಅಸೂಚಿಸಲಾಗಿದೆ.
ಸಾರಿಗೆ ಇಲಾಖೆಯ ವ್ಯವಹಾರ ಸರಳೀಕರಣಗೊಳಿಸುವ ಹಲವು ಸುಧಾರಣಾ ಅಂಶಗಳನ್ನು ಅನುಷ್ಠಾನಗೊಳಿಸುವ ದಿಶೇಯಲ್ಲಿ ಸಾರಥಿ ತಂತ್ರಾಂಶದಲ್ಲಿ 15 ಸೇವೆಗಳನ್ನು ಆನ್‍ಲೈನ್ ಮೂಲಕ ಸಾರ್ವಜನಿಕರಿಗೆ ಒದಗಿಸಲಾಗುತ್ತದೆ. ಆದರೆ, ಚಾಲನಾ ಅನುಜ್ಞಾ ಪತ್ರ(ಡಿಎಲ್) ಸೇವೆಗೆ ಸಂಬಂಸಿದಂತೆ ಪರೀಕ್ಷೆಗೆ ಹಾಜರಾಗುವುದನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಲಾಗಿದೆ.