ಸರ್ಕಾರಿ ಶಾಲಾ ವಿಧ್ಯಾರ್ಥಿಗಳಿಂದ ರಾಷ್ಟ್ರಧ್ವಜ ಹಾಗೂ ಬ್ಯಾಡ್ಜ್ ತಯಾರು

ಸಮಗ್ರ ಪ್ರಭ ಸುದ್ದಿ
1 Min Read

ರೋಣ :  ಶಾಲಾ ವಿಧ್ಯಾರ್ಥಿಗಳು ಸೇರಿಕೊಂಡು ವಿನೂತನ ಕಾರ್ಯಕ್ರಮ ಮಾಡಲು ಪ್ರಯತ್ನ ಪಡುವ ಮೂಲಕ ಅಗಷ್ಟ 15 ರಂದು ವಿಭಿನ್ನವಾಗಿ ಸ್ವಾತಂತ್ರ್ಯೋತ್ಸವ ಆಚರಿಸಲು ಮುಂದಾಗಿದ್ದಾರೆ.

ಹೊಳೆ ಮಣ್ಣೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಳೆ ಮಣ್ಣೂರು ಹಾಗೂ ಗಾಡಗೋಳಿ ಗ್ರಾಮಗಳ ಪ್ರಾಥಮಿಕ ಹಾಗೂ ಪ್ರೌಢ ಶಾಲೆ ವಿದ್ಯಾರ್ಥಿ ವಿದ್ಯಾರ್ಥಿ ನಿಯರಿಂದ ರಾಷ್ಟ್ರಧ್ವಜ ಸಂವಿಧಾನ ಪೀಠಿಕೆ ಹಾಗೂ ಬ್ಯಾಡ್ಜ್ ಗಳನ್ನು ತಯಾರಿಸಿದ್ದು ಗ್ರಾಮದ ಎಲ್ಲಾ ಸಾರ್ವಜನಿಕರು ಶಾಲಾ ಮಕ್ಕಳು ಸ್ವತಃ ತಮ್ಮ ಕೈಯಿಂದ ಕಲಾತ್ಮಕವಾಗಿ ತಯಾರಿಸಿರುವ ರಾಷ್ಟ್ರ ಧ್ವಜ ಬ್ಯಾಡ್ಜ್ ಹಾಗೂ ಸಂವಿಧಾನ ಪೀಠಿಕೆಗಳ ಪ್ರಾತ್ಯಕ್ಷಿಕೆಯನ್ನು ಕಣ್ತುಂಬಿಕೊಂಡು ಪ್ರೋತ್ಸಾಹಿಸುವಂತೆ ಕೋರುವ ಮೂಲಕ ಈ ಬಾರಿ ವಿಭಿನ್ನವಾಗಿ ಸ್ವಾತಂತ್ರ್ಯ ದಿನಾಚರಣೆ ಆಚರಣೆ ಮಾಡಲು ಮುಂದಾಗಿದ್ದಾರೆ.

ಗ್ರಾಮದ ಮಕ್ಕಳಿಗೆ ಗ್ರಂಥಾಲಯ ಮೇಲ್ವಿಚಾರಕರು ಸಲಹೆ ಮತ್ತು ಸೂಚನೆ ನೀಡಿದ್ದು, ಗ್ರಾಮ ಪಂಚಾಯತಿ ಅನುದಾನ ದಲ್ಲಿ ಅವರಿಗೆ ಬೇಕಾದ ಸಾಮಾಗ್ರಿಗಳನ್ನು ಪೂರೈಸಿದ್ದಾರೆ, ಇನ್ನು ಆ ಪ್ರದರ್ಶನವನ್ನು ರೋಣ ತಾಲೂಕಿನ ಕಾರ್ಯ ನಿರ್ವಾಹಕ ಅಧಿಕಾರಿಗಳಾದ ರವಿ ಎ.ಎನ್ ಹಾಗೂ ತಾಲೂಕಿನ ಕ್ಷೇತ್ರ ಶಿಕ್ಷಣ ಅಧಿಕಾರಿಗಳು ದಿನಾಂಕ 14 /08/ 2023 ರಂದು ಸೋಮವಾರ ಮಧ್ಯಾಹ್ನ 03:00 ಗಂಟೆಗೆ ಗ್ರಾಮ ಪಂಚಾಯಿತಿ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರದಲ್ಲಿ ಉದ್ಘಾಟಿಸಲಿದ್ದಾರೆ.

ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು ಉಪಾಧ್ಯಕ್ಷರು ಹಾಗೂ ಸದಸ್ಯರು ಉಪಸ್ಥಿತರಿರುವರು.

Share this Article