ಗದಗ: ನಗರದ ಕೆ ವಿ ಹಂಚಿನಾಳ್ ಕಾಲೇಜ್ ಆಪ್ ನರ್ಸಿಂಗ್ ಮತ್ತು ಪ್ಯಾರಾಮೆಡಿಕಲ್ ಕಾಲೇಜಿನಲ್ಲಿ ವಿಶ್ವ ಎದೆಹಾಲು ಸಪ್ತಾಹ ದಿನದ ಅಂಗವಾಗಿ ಪ್ರಥಮ ವರ್ಷದ ಬಿಎಸ್ಸಿ ನರ್ಸಿಂಗ್ ವಿದ್ಯಾರ್ಥಿಗಳಿಗೆ ಸ್ತನಪಾನದ ಕುರಿತು ಅರಿವು ಮೂಡಿಸಲಾಯಿತು.
ಕಾರ್ಯಕ್ರಮದಲ್ಲಿ ಕಾಲೇಜಿನ ಮುಖ್ಯಸ್ಥರಾದ ಡಾ|| ವೀರೇಶ ಹಂಚಿನಾಳ ಮಾತಾಡಿ ಶುಶ್ರೂಕ ಹಾಗೂ ಅರೇ ವೈದ್ಯಕೀಯ ವಿದ್ಯಾರ್ಥಿಗಳಿಗೆ ತಾಯಿಯ ಸ್ತನ ಪಾನದ ಪ್ರಾಮುಖ್ಯತೆ ಸ್ತನಪಾನದ ಬಂಗಿಗಳು ಅದರಿಂದ ಮಗುವಿಗೆ ಅದರಿಂದಾಗುವ ಪ್ರಯೋಜನ ಪ್ರತಿಯೊಂದು ಹೆಣ್ಣು ಸ್ತನಪಾನದ ಬಗ್ಗೆ ತಿಳಿದುಕೊಳ್ಳುವುದು ಅತೀ ಮುಖ್ಯವಾಗಿದೆ ಇದು ಹೆಣ್ಣಿನ ಹಕ್ಕು ಕೂಡಾ ಸ್ತನ ಪಾನದ ಪ್ರಯೋಜನ ಮಾಹಿತಿ ಪಡೆದುಕೊಳ್ಳುವುದು ಮಗುವಿನ ಬೆಳವಣಿಗೆ ಸಹಕಾರಿಯಾಗುತ್ತದೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಶಿವರಾಜ್ ಅಣ್ಣಿಗೇರಿ, ಸಿಬ್ಬಂದಿಗಳಾದ ವೇದಶ್ರೀ ದಡೂತಿ ,ಲಕ್ಷ್ಮಿಕಾಂತ್ ಕಂಬದ, ಸುಧಾ ಸೊಪ್ಪಿನ, ನಯನ ಬೇಗಂ ಸಚಿನ ಸೇರಿದಂತೆ ಕಾಲೇಜಿನ ವಿದ್ಯಾರ್ಥಿಗಳು ಹಾಗು ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.