ಸಾಲುಮರದ ತಿಮ್ಮಕ್ಕ ಟ್ರೀ ಪಾರ್ಕ ನಲ್ಲಿ ಗದಗ ಜಿಲ್ಲಾ ಮಟ್ಟದ ಎಂ.ಟಿ.ಬಿ. ಸೈಕ್ಲಿಂಗ್ ಆಯ್ಕೆ ಟ್ರಯಲ್ಸ್

ಸಮಗ್ರ ಪ್ರಭ ಸುದ್ದಿ
0 Min Read

ಗದಗ: ಕರ್ನಾಟಕ ಅಮೆಚೂರ ಸೈಕ್ಲಿಂಗ್ ಅಸೋಸಿಯೇಷನ್ ವತಿಯಿಂದ ಅಗಸ್ಟ್ 19 ಮತ್ತು 20 ರಂದು ರಾಜ್ಯ ಮಟ್ಟದ ಎಂ.ಟಿ.ಬಿ. ಸೈಕ್ಲಿಂಗ್ ಚಾಂಪಿಯನ್‌ ಶಿಪ್‌ನ್ನು ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದು, ಈ ಹಿನ್ನಲೆಯಲ್ಲಿ ಅಗಸ್ಟ್ 5 ರಂದು ಬೆಳಿಗ್ಗೆ 7-00 ಗಂಟೆಗೆ ಸಾಲುಮರದ ತಿಮ್ಮಕ್ಕ ಟ್ರೀ ಪಾರ್ಕ, ಬಿಂಕದಕಟ್ಟಿಯಲ್ಲಿ ಎಂ.ಟಿ.ಬಿ. ಸೈಕ್ಲಿಂಗ್ ಜಿಲ್ಲಾ ಮಟ್ಟದ ಆಯ್ಕೆ ಪ್ರಕ್ರಿಯೆಯನ್ನು ನಡೆಸಲಾಗುತ್ತಿದ್ದು, ಗದಗ ಜಿಲ್ಲೆಯ ಆಸಕ್ತ ಎಂ.ಟಿ.ಬಿ. ಸೈಕ್ಲಿಂಗ್ ಕ್ರೀಡಾಪಟುಗಳು ಸದರಿ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಲು ಗದಗ ಜಿಲ್ಲಾ ಸೈಕ್ಲಿಂಗ್ ಅಸೋಸಿಯೇಷನ್ ಅಧ್ಯಕ್ಷ ರವಿ ಮರಿಲಿಂಗಣ್ಣವರ ಅವರು ತಿಳಿಸಿದ್ದಾರೆ.

Share this Article