ಗದಗ: ನಗರದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆವರಣದ ನರ್ಸಿಂಗ್ ಲಚ್ಚರ್ ಕೊಠಡಿಯಲ್ಲಿ ಮಕ್ಕಳದ ಸ್ತನಪಾನದ ಕುರಿತು ಗರ್ಭಿಣಿ ತಾಯಂದಿರಿಗೆ ಅರಿವು ಮೂಡಿಸಲಾಯಿತು.
ಬುಧವಾರ ಗದಗ ಜಿಲ್ಲಾ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಹಾಗೂ ಗದಗ ಜಿಲ್ಲಾ ಆಸ್ಪತ್ರೆಯ ಸಹಯೋಗದ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ನರ್ಸಿಂಗ್ ಸೂಪರ್ ಡೆಂಟ್
ಡಾ|| ಈರಣ್ಣ ಹಳೆಮನಿ ಮಾತನಾಡಿ ಪ್ರತಿಯೊಂದು ಹೆಣ್ಣು ಸ್ತನಪಾನದ ಬಗ್ಗೆ ತಿಳಿದುಕೊಳ್ಳುವುದು ಅತೀ ಮುಖ್ಯವಾಗಿದೆ ಇದು ಹೆಣ್ಣಿನ ಹಕ್ಕು ಕೂಡಾ ಸ್ತನ ಪಾನದ ಪ್ರಯೋಜನ ಮಾಹಿತಿ ಪಡೆದುಕೊಳ್ಳುವುದು ಮಗುವಿನ ಬೆಳವಣಿಗೆ ಸಹಕಾರಿಯಾಗುತ್ತದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ನರ್ಸಿಂಗ ಕಾಲೇಜಿನ ಪ್ರಾಚಾರ್ಯರು,ವಿದ್ಯಾರ್ಥಿಗಳು ಹಾಜರಿದ್ದರು.