World Cup 2023; ಬಹುನಿರೀಕ್ಷಿತ ಭಾರತ- ಪಾಕಿಸ್ತಾನ ಪಂದ್ಯದ ದಿನಾಂಕ ಬದಲು

ಸಮಗ್ರ ಪ್ರಭ ಸುದ್ದಿ
1 Min Read

ಮುಂಬೈ: 2023ರ ಏಕದಿನ ವಿಶ್ವಕಪ್ ನ ಬಹುನಿರೀಕ್ಷಿತ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ಬದಲಾವಣೆ ಮಾಡಲಾಗಿದೆ. ಪಂದ್ಯವು ಯೋಜನೆಯಂತೆ ಅಹಮದಾಬಾದ್ ನಲ್ಲೇ ನಡೆಯಲಿದ್ದು, ಇದೀಗ ದಿನಾಂಕ ಬದಲಾಗಿದೆ.

ಈ ಮೊದಲು ಭಾರತ- ಪಾಕ್ ಹಣಾಹಣಿಯು ಅಕ್ಟೋಬರ್ 15ರಂದು ನಡೆಯಲಿದೆ ಎಂದು ಬಿಸಿಸಿಐ ಮತ್ತು ಐಸಿಸಿ ಬಿಡುಗಡೆ ಮಾಡಿದ ವೇಳಾಪಟ್ಟಿಯಲ್ಲಿ ತಿಳಿಸಲಾಗಿತ್ತು. ಇದೀಗ ಈ ಮಹತ್ವದ ಪಂದ್ಯ ನಿಗದಿತ ದಿನಾಂಕಕ್ಕಿಂತ ಒಂದು ದಿನ ಮೊದಲು ಅಂದರೆ ಅಕ್ಟೋಬರ್ 14ರಂದು ನಡೆಯಲಿದೆ ಎಂದು ವರದಿ ತಿಳಿಸಿದೆ.

ಅಕ್ಟೋಬರ್ 15ರಂದು ನವರಾತ್ರಿ ಆರಂಭವಾಗುವ ಕಾರಣದಿಂದ ಈ ಮಹತ್ವದ ಪಂದ್ಯಕ್ಕೆ ಭದ್ರತೆ ಒದಗಿಸುವುದು ಕಷ್ಟ ಎಂದು ಗುಜರಾತ್ ಪೊಲೀಸ್ ಇಲಾಖೆ ಹೇಳಿದ ಕಾರಣ ವೇಳಾಪಟ್ಟಿ ಬದಲಾವಣೆ ಮಾಡಲಾಗಿದೆ ಎಂದು ವರದಿಯಾಗಿದೆ.

ಕಳೆದ ವಾರ, ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ಏಕದಿನ ವಿಶ್ವಕಪ್‌ ನ ವೇಳಾಪಟ್ಟಿಯಲ್ಲಿ ಬದಲಾವಣೆಯಾಗುವ ಸಾಧ್ಯತೆಯಿದೆ ಎಂದರು. 4-5 ದಿನಗಳ ಅಂತರವನ್ನು ಕಡಿಮೆ ಮಾಡಲು ಪಂದ್ಯಗಳ ದಿನಾಂಕಗಳು ಮತ್ತು ಸಮಯವನ್ನು ಬದಲಾಯಿಸಲಾಗುವುದು ಎಂದು ಅವರು ಹೇಳಿದ್ದಾರೆ. ಈ ಬಗ್ಗೆ ಮೂರು ದೇಶಗಳಿಗೆ ಪತ್ರ ಬರೆದು ಮನವಿ ಮಾಡಲಾಗಿದೆ ಎಂದ ಅವರು ಯಾವ ಮೂರು ದೇಶಗಳು ಎಂದು ಪ್ರಕಟಿಸಲಿಲ್ಲ.

Share this Article