ಗದಗ:ಜೂನ ತಿಂಗಳು ಕಳೆದರು ಜಿಲ್ಲೆಯಲ್ಲಿ ಸಕಾಲಕ್ಕೆ ಮಳೆ ಬಾರದ ಹಿನ್ನೆಲೆಯಲ್ಲಿ ಮಳೆಗಾಗಿ ಗ್ರಾಮದ ರಾಮಲಿಂಗೇಶ್ವರನಿಗೆ ಜಲಾಭಿಷೇಕ ಮಾಡಿ ಮಳೆಗಾಗಿ ದೇವರ ಮೊರೆಹೋದ ಗ್ರಾಮಸ್ಥರು.
ಜಿಲ್ಲೆ ನರಗುಂದ ತಾಲೂಕಿನ ಬೆನಕನಕೊಪ್ಪ ಗ್ರಾಮಸ್ಥರು
ಸೇರಿಕೊಂಡು ಗ್ರಾಮದ ರಾಮಲಿಂಗೇಶ್ವರನಿಗೆ, ದೀಡ ನಮಸ್ಕಾರ ಹಾಕಿ, ಜಲಾಭಿಷೇಕ ಮಾಡಿ ಗ್ರಾಮದ ಕೆರೆಯಿಂದ ರಾಮಲಿಂಗೇಶ್ವರನ ಉತ್ಸವ ನಡೆಸಿದ್ದರು.
ವಾದ್ಯ ಮೇಳಗಳೊಂದಿಗೆ ಯುವಕರು ಹೆಜ್ಜೆ ಮಜಲು ನೃತ್ಯ ಮಾಡುತ್ತ ಇತ್ತ ಮಹಿಳೆಯರು ಆರುತಿ,ಕುಂಬ ಮೇಳದಲ್ಲಿ ಭಾಗಿಯಾಗಿದ್ದರು. ಇನ್ನೂ ಗ್ರಾಮದ ಯವಕರು
ಒದ್ದೆ ಬಟ್ಟಿಯಲ್ಲಿ ಕೆರೆಯ ನೀರು ತಂದು ರಾಮಲಿಂಗೇಶ್ವರನಿಗೆ ಜಲಾಭಿಷೇಕ ಮಾಡಿ ಮಳೆಗಾಗಿ ಪ್ರಾರ್ಥನೆ ಮಾಡಿದರು.
ರಾಮಲಿಂಗೇಶ್ವರನ ಜಾತ್ರೆ ಮಾಡಿದರೆ ಮಳೆ ಆಗುತ್ತೇ ಎಂಬುದು ಗ್ರಾಮಸ್ಥರ ನಂಬಿಕೆಯಾಗಿದೆ.