ಗದಗ:ನಗರದ ಬೆಟಗೇರಿ ಭಾಗದಲ್ಲಿರುವ ನರಸಾಪೂರ ಕೈಗಾರಿಕಾ ಪ್ರದೇಶದ ಗೋದಾಮ ಒಂದರಲ್ಲಿ ದಾಳಿ ಮಾಡಿ ಅಕ್ರಮವಾಗಿ ದಾಸ್ತಾನು ಮಾಡಿದ ಪಡಿತರ ಅಕ್ಕಿಯನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.ಸುಮಾರು 2 ಲಕ್ಷ 64 ಸಾವಿರ ಮೌಲ್ಯದ 77 ಕ್ವಿಂಟಾಲ್ 66 ಕೆಜಿ ಅಕ್ಕಿ ವಶಕ್ಕೆ ಪಡೆದಿದ್ದಾರೆ.
ಬೆಟಗೇರಿ ಠಾಣೆಯ ಪೊಲೀಸ ಸಿಬ್ಬಂದಿ ಹಾಗೂ ಆಹಾರ ಇಲಾಖೆ ಅಧಿಕಾರಿಗಳ ಜಂಟಿ ಕಾರ್ಯಾಚರಣೆಯಲ್ಲಿ ಖಚಿತ ಮಾಹಿತಿ ಮೇರೆಗೆ ಅಕ್ರಮವಾಗಿ ಸಂಗ್ರಹ ಮಾಡಿದ್ದ ಪಡಿತರ ಅಕ್ಕಿ ವಶಕ್ಕೆ ಪಡೆದು ತನಿಖೆ ಆರಂಭಿಸಿದ್ದಾರೆ.ಬೆಟಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.