ವಿಧಾನಪರಿಷತ್ ಚುನಾವಣೆ: ಕಾಂಗ್ರೆಸನಿಂದ ಜಗದೀಶ್ ಶೆಟ್ಟರ್‌ಗೆ ಟಿಕೆಟ್ ಸೇರಿ ಮೂವರಿಗೆ ಟಿಕೆಟ್

graochandan1@gmail.com
1 Min Read

 

ಗದಗ: ಜೂನ್ 30 ಎಂದು‌ ನಡೆಯಲಿರುವ ವಿಧಾನಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಿದೆ. ಮಾಜಿ ಸಿಎಂ ಜಗದೀಶ್ ಶೆಟ್ಟರ್, ಸಚಿವ ಬೋಸರಾಜು ಹಾಗೂ ಕಲಬುರಗಿಯ ಹಿರಿಯ ಕಾಂಗ್ರೆಸ್ ನಾಯಕ ತಿಪ್ಪನ್ನಪ್ಪ ಕಮಕ್ನೂರು ಅವರಿಗೆ ಟಿಕೆಟ್ ನೀಡಲಾಗಿದೆ.

ಜೂನ್‌ 30ಕ್ಕೆ ಚುನಾವಣೆ: 

ಜೂನ್ 30ರಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯ ತನಕ ಮತದಾನ ನಡೆಯಲಿದೆ. ಅದೇ ದಿನ ಫಲಿತಾಂಶ ಪ್ರಕಟವಾಗಲಿದೆ. ನಾಮ ಪತ್ರ ಸಲ್ಲಿಕೆ ಮಾಡಲು ನಾಳೆ( ಜೂನ್ 20) ಕೊನೆಯ ದಿನವಾಗಿದೆ. ಜೂನ್ 21ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನಾಮಪತ್ರ ವಾಪಸಾತಿಗೆ ಜೂನ್ 23ರಂದು ಅಂತಿಮ ದಿನವಾಗಿದೆ.

- Advertisement -
Ad image

ಬಾಬುರಾವ್ ಚುಂಚನಸೂರು ಅವರು ವಿಧಾನಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿ ವಿಧಾನಸಭೆ ಗೆ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದರು ಅವರ ಅವಧಿ 2024ರ ಜೂನ್ 17 ರ ವರೆಗೆ ಇರಲಿದೆ. ಈ ಸ್ಥಾನಕ್ಕೆ ಸಚಿವ ಬೋಸರಾಜು ಅವರಿಗೆ ಟಿಕೆಟ್‌ ನೀಡಲಾಗಿದೆ. ಆರ್. ಶಂಕರ್ ವಿಧಾನಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿ ಪಕ್ಷೇತರವಾಗಿ ಸ್ಪರ್ಧೆ ಮಾಡಿದ್ದರು ಅವರ ಅವಧಿ 2026ರ ಜೂನ್ 30 ರವೆಗೂ ಇದೆ‌. ಈ ಸ್ಥಾನಕ್ಕೆ ತಿಪ್ಪನ್ನಪ್ಪ ಕಮಕ್ನೂರು ಅವರಿಗೆ ಟಿಕೆಟ್‌ ನೀಡಲಾಗಿದೆ.

Share this Article