ವಿದ್ಯಾರ್ಥಿನಿಯರು ಸೇರಿದಂತೆ 70+ ದಾನಿಗಳು ಸ್ವಯಂ ಪ್ರೇರಿತರಾಗಿ IMA ಸಹಯೋಗದ ರಕ್ತ ಧಾನ ಶಿಬಿರದಲ್ಲಿ ಭಾಗಿ

ಸಮಗ್ರ ಪ್ರಭ ಸುದ್ದಿ
1 Min Read

 

ಗದಗ: ವಿಶ್ವ ರಕ್ತದಾನಿಗಳ ದಿನ. ಪ್ರತಿ ವರ್ಷ ಜೂನ್ 14 ರಂದು ವಿಶ್ವದಾದ್ಯಂತ ‘ವಿಶ್ವ ರಕ್ತದಾನಿಗಳ ದಿನ’ವನ್ನು ಆಚರಣೆ ಮಾಡಲಾಗುತ್ತದೆ. ಭೂಮಿ ಮೇಲಿರುವ ಪ್ರತಿಯೊಬ್ಬ ಮನುಷ್ಯನ ದೇಹದಲ್ಲಿ ಇರುವುದು ಒಂದೇ ರಕ್ತ. ಮನುಷ್ಯ ಆರೋಗ್ಯ ಇರಲು ಶುದ್ದ ರಕ್ತದ ಅವಶ್ಯಕತೆ ತುಂಬಾ ಇರುತ್ತದೆ. ಜಗತ್ತಿನೆಲ್ಲಡೆ ಪ್ರತಿ ಕ್ಷಣ ಲೆಕ್ಕವಿಲ್ಲದಷ್ಟು ಜನರಿಗೆ ರಕ್ತದ ಅವಶ್ಯವಿರುತ್ತದೆ. ಅನೇಕರು ಸರಿಯಾದ ಸಮಯಕ್ಕೆ ರಕ್ತ ಸಿಗದೆ ಸಾವನ್ನಪ್ಪುವುದು ಉಂಟು. ಅದಕ್ಕಾಗಿಯೇ ರಕ್ತವನ್ನು ಜೀವದ್ರವ್ಯ ಎನ್ನಲಾಗುತ್ತದೆ.

ದಾನಗಳಲ್ಲಿ ರಕ್ತದಾನವನ್ನು ಸಹ ಬಹಳ ಶ್ರೇಷ್ಠ ದಾನವೆಂದು ಕರೆಯಲಾಗುತ್ತಾದೆ. ಈ ಹಿನ್ನಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಪ್ರತಿ ವರ್ಷ ಜೂನ್‌ 14 ರಂದು ವಿಶ್ವ ರಕ್ತದಾನಿಗಳ ದಿನವನ್ನಾಗಿ ಆಚರಿಸಲಾಗುತ್ತದೆ. ಪ್ರತಿ ವರ್ಷ ಹೊಸ ಹೊಸ ಥೀಮ್‌ನೊಂದಿಗೆ ವಿಶ್ವ ರಕ್ತದಾನಿಗಳ ದಿನವನ್ನು ಆಚರಣೆ ಮಾಡಲಾಗುತ್ತದೆ.

ನಗರದ ಐಎಂಎ ಬ್ಲಡ್ ಬ್ಯಾಂಕನಲ್ಲಿ ಬುಧವಾರ 70+ ವಿದ್ಯಾರ್ಥಿಗಳು,ವಿದ್ಯಾರ್ಥಿನಿಯರು, ಸ್ವಯಂ ಸೇವಕರು ಸ್ವಯಂ ಪ್ರೇರಿತರಾಗಿ ರಕ್ತಧಾನ ಮಾಡಿದರು.
ಇದೆ ಸಂದರ್ಭದಲ್ಲಿ 50 ಕಿಂತ ಹೆಚ್ಚು ಬಾರಿ ರಕ್ತ ಧಾನಿ ಮಾಡಿದವರಿಗೆ ಐಎಂಎ ಬ್ಲಡ್ ಬ್ಯಾಂಕ ಆಡಳಿತ ಮಂಡಳಿ ಸನ್ಮಾನಿಸಿದರು.


ಈ ಸಂಧರ್ಭದಲ್ಲಿ ಐ ಎಂ ಎ ಬ್ಲಡ್ ಬ್ಯಾಂಕ್ ನ ಅಧ್ಯಕ್ಷ ಡಾ|| ಪವನ್ ಕುಮಾರ್ ಪಾಟೀಲ್ ,ಕಾರ್ಯದರ್ಶಿ ಡಾ||ವೀರೇಶ್ ಕೆ ಹಂಚಿನಾಳ,ಗದಗ ವೈದ್ಯಕೀಯ ಸಂಘದ ಅಧ್ಯಕ್ಷ ,ಡಾ|| ವಿ ಎಸ್ ಹೊಸಮಠ, ಕಾರ್ಯದರ್ಶಿ ಡಾ|| ಸಲೀಂ ಜಮಾದಾರ್ ಸೇರಿದಂತೆ ಡಾ|| ಪ್ಯಾರಾಲಿ ನೂರಾನಿ,ಡಾ|| ಶ್ರೀಧರ್ ಕುರುಡಗಿ , ವೈದ್ಯಾಧಿಕಾರಿಗಳಾದ ರಾಜಶೇಖರ್ ಪವಡ ಶೆಟ್ಟರ್ ,ಡಾ||ಬಿ ಸೋಲೋಮನ್ ,ಡಾ|| ತುಕಾರಾಂ ಸೂರಿ ,ಲಯನ್ಸ್ ಕ್ಲಬ್ ನ ಅಧ್ಯಕ್ಷರು ಪದಾಧಿಕಾರಿಗಳು ಎ ಎಸ್ ಎಸ್ ಕಾಲೇಜಿನ ಶಿಕ್ಷಕರು ,ಅಬ್ದುಲ್ ಕಲಾಂ ಕಾಲೇಜಿನ ಶಿಕ್ಷಕರು ,ಹಿಟ್ಟಿನ್ ನೆಟ್ ಅಂಡ್ ಬೋಲ್ಡ್ ಕಂಪನಿಯ ಸಂಯೋಜಕರು ,ಯುವ ಬ್ರಿಗೇಡ್ ನ ಕಾರ್ಯಕರ್ತರು ,ಕೆಎಲ್ಇ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Share this Article