ಗದಗ: ಗ್ರಾಮ ಪಂಚಾಯತಿಗಳ ಸಾರ್ವತ್ರಿಕ ಚುನಾವಣೆ-2020 ನೇ ದರನ್ವಯ ಗದಗ ಜಿಲ್ಲೆಯ 7 ತಾಲೂಕುಗಳ ಗ್ರಾಮ ಪಂಚಾಯತಿಗಳ ಚುನಾವಣಾ ಕ್ಷೇತ್ರಗಳಿಗೆ ಆಯ್ಕೆಯಾದ ಸದಸ್ಯರುಗಳ ಸಮ್ಮುಖದಲ್ಲಿ ಎರಡನೇ ಅವಧಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಹುದ್ದೆಗಳ ಮೀಸಲಾತಿಯನ್ನು ನಿಗದಿಪಡಿಸುವ ಕುರಿತಂತೆ ದಿನಾಂಕ ನಿಗದಿಪಡಿಸಲಾಗಿದೆ.
ಲಕ್ಷ್ಮೇಶ್ವರ ತಾಲೂಕಿನ ಗ್ರಾಮ ಪಂಚಾಯತಗಳ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಹುದ್ದೆಗಳ ಮೀಸಲಾತಿ ನಿಗದಿಪಡಿಸಲು ದಿ:20-06-2023 ಮುಂಜಾನೆ 9 ಗಂಟೆಗೆ ಹುಬ್ಬಳ್ಳಿ ರಸ್ತೆಯಲ್ಲಿನ ಶ್ರೀ.ಜಗದ್ಗುರು ವೀರಗಂಗಾಧರ ರಂಭಾಪುರ ಸಮುದಾಯ ಭವನ.
ಶಿರಹಟ್ಟಿ ತಾಲೂಕಿನಲ್ಲಿ ದಿನಾಂಕ:20-06-2023 ರಂದು ಮಧ್ಯಾಹ್ನ 12 ಗಂಟೆಗೆ ಶಿರಹಟ್ಟಿಯ ಶ್ರೀ. ಫಕೀರೇಶ್ವರ ಕಲ್ಯಾಣ ಮಂಟಪ.
ಮುಂಡರಗಿ ತಾಲೂಕಿನಲ್ಲಿ ದಿನಾಂಕ:20-06-2023 ರಂದು ಸಾಯಂಕಾಲ 4 ಗಂಟೆಗೆ ಮುಂಡರಗಿಯ ಶ್ರೀ. ಜಗದ್ಗುರು ಅನ್ನದಾನೇಶ್ವರ ಕಲ್ಯಾಣ ಮಂಟಪ.
ರೋಣ ತಾಲ್ಲೂಕಿನಲ್ಲಿ ದಿನಾಂಕ: 22-06-2023 ರಂದು ಮುಂಜಾನೆ 11 ಗಂಟೆಗೆ ರೋಣದಲ್ಲಿನ ವಿ.ಎಫ್.ಪಾಟೀಲ ಪ್ರೌಢ ಶಾಲೆ ಹಿಂಬಾಗದಲ್ಲಿರುವ ಗುರು ಭವನದಲ್ಲಿ,
ಗಜೇಂದ್ರಗಡ ತಾಲೂಕಿನಲ್ಲಿ ದಿನಾಂಕ:22-06-2023ರಂದು ಮಧ್ಯಾಹ್ನ 3 ಗಂಟೆಗೆ ಗಜೇಂದ್ರಗಡದ ಸರಕಾರಿ ಪಾಲಿಟೆಕ್ನಿಕ ಕಾಲೇಜನಲ್ಲಿ,
ಗದಗ ತಾಲೂಕಿನಲ್ಲಿ ದಿನಾಂಕ:23-06-2023 ರ ಮುಂಜಾನೆ 11 ಗಂಟೆಗೆ ಶ್ರೀ. ಜಗದ್ಗುರು ಕಲ್ಯಾಣ ಮಂಟಪದಲ್ಲಿ
ನರಗುಂದ ತಾಲೂಕಿನಲ್ಲಿ ದಿನಾಂಕ:23-06-2023 ರಂದು ಸಾಯಂಕಾಲ 4 ಗಂಟೆಗೆ ಪುರಸಭೆ ಸಮುದಾಯ ಭವನದಲ್ಲಿ ಎರಡನೇ ಅವಧಿಯ ಅಧ್ಯಕ್ಷರ ಹಾಗೂ ಉಪಾಧ್ಯಕ್ಷರ ಮೀಸಲಾತಿ ನಿಗದಿಪಡಿಸುವ ಸಭೆಯನ್ನು ಆಯೋಜಿಸಲಾಗಿದೆ.
ರಾಜ್ಯ ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ಎನ್.ಐ.ಸಿ. ತಂತ್ರಾಂಶ ಬಳಸಿ ಮೀಸಲಾತಿ ನಿಗದಿಪಡಿಸುವ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ಜರುಗಿಸಲಾಗುವುದು. ಈ ಕುರಿತು ಈಗಾಗಲೇ ಏಳು ತಾಲೂಕಿನ ಗ್ರಾಮ ಪಂಚಾಯತಿ ಚುನಾಯಿತರಾದ ಎಲ್ಲ ಸದಸ್ಯರುಗಳಿಗೆ ಸಭೆಯ ಕುರಿತು ತಿಳುವಳಿಕೆ ಪತ್ರವನ್ನು ಜಾರಿಮಾಡಲಾಗಿದ್ದು ತಿಳುವಳಿಕೆ ಪತ್ರ ತಲುಪದೇ ಇದ್ದ ಪಕ್ಷದಲ್ಲಿ ಈ ಪ್ರಕಟಣೆಯನ್ನು ತಿಳುವಳಿಕೆ ಪತ್ರವೆಂದು ಭಾವಿಸಿ ನಿಗದಿಪಡಿಸಿದ ದಿನಾಂಕ ಮತ್ತು ವೇಳೆಗೆ ಸರಿಯಾಗಿ ಹಾಜರಾಗಲು ತಿಳಿಸಲಾಗಿದೆ.
ಸಭೆಗೆ ಹಾಜರಾಗುವಾಗ ಆಯ್ಕೆಯಾದ ಪ್ರಮಾಣ ಪತ್ರದ ನಕಲು ಪ್ರತಿಯನ್ನು ಹಾಜರುಪಡಿಸಬೇಕಾಗಿದ್ದು ಮೀಸಲಾತಿ ನಿಗದಿ ಪ್ರಕಿಯೆ ಸಭೆಗೆ ಕೇವಲ ಚುನಾಯಿತ ಸದಸ್ಯರುಗಳಿಗೆ ಮಾತ್ರ ಪ್ರವೇಶವಿರುತ್ತದೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.