ಗಜೇಂದ್ರಗಡ: ಮಹಿಳೆಯರಿಗಾಗಿ ಶಕ್ತಿ ಯೋಜನೆ ಜಾರಿಯಾಗಿದ್ದು ಬಹಳ ಸಂತೋಷ ತಂದಿದೆ ಮಹಿಳೆಯರ ಸಬಲೀಕರಣಕ್ಕಾಗಿ ಈ ಯೋಜನೆ ಜಾರಿ ತಂದಿದೆ ಎಂದು ಕಾಂಗ್ರೆಸ್ ಮುಖಂಡ ಸಿದ್ದಪ್ಪ ಬಂಡಿ ಹೇಳಿದರು.
ನಗರದ ಬಸ ನಿಲ್ದಾಣದಲ್ಲಿ ರಾಜ್ಯ ಸರ್ಕಾರದ ೫ ಗ್ಯಾರಂಟಿಗಳಲ್ಲಿ ಒಂದಾದ ಶಕ್ತಿ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು..
ಸಾರ್ವಜನಿಕ ವಲಯದಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಬೇಕು. ಅಂದಾಗ ಮಾತ್ರ ಮಹಿಳೆಯರು ಹೆಚ್ಚು ಸದೃಢರಾಗಲು ಸಾಧ್ಯ. ಎಲ್ಲಾ ಜಾತಿಯ ಜನಾಂಗೀಯ ಮಹಿಳೆಯರಿಗೆ ಈ ಯೋಜನೆ ಸಿಗಬೇಕು ಹಾಗೂ ಈ ಯೋಜನೆಯಲ್ಲಿ ಯಾವುದೇ ಮಧ್ಯವರ್ತಿಗಳು ಇರುವುದಿಲ್ಲ.
ಸ್ಮಾರ್ಟ್ ಕಾರ್ಡ್ ನೀಡಲಾಗುತ್ತದೆ ಅಲ್ಲಿವರೆಗೆ ಗುರುತಿನ ಚೀಟಿ ತೋರಿಸಿ ಬಸ್ ನಲ್ಲಿ ಪ್ರಯಾಣಿಸಬಹುದು ಎಂದು ಹೇಳಿದರು
ಬಳಿಕ ಕಾಂಗ್ರೆಸ್ ಮುಖಂಡ ಅಶೋಕ ಭಾಗಮಾರ ಮಾತನಾಡಿ ಸಾಮಾಜಿಕವಾಗಿ ಆರ್ಥಿಕವಾಗಿ ಮಹಿಳೆಯರು ಅಸಮರ್ಥರಾಗಿದ್ದರು ಈ ಯೋಜನೆಯಲ್ಲಿ
ಮಹಿಳೆಯರು ಹೆಚ್ಚು ಬಾಗಿಯಾಗಿರುವುದರಿಂದ ಈ ದೇಶ ಸದೃಢವಾಗಲು ಸಾಧ್ಯವಾಗುತ್ತದೆ.೫ ಗ್ಯಾರಂಟಿಗಳಲ್ಲಿ ಮಹಿಳೆಯರಿಗಾಗಿ ೪ ಗ್ಯಾರಂಟಿಗಳಿವೆ.ಗ್ಯಾರಂಟಿಗಳ ಬಗ್ಗೆ ವಿಪಕ್ಷಗಳ ಟೀಕೆಗಳಿಗೆ ನಾವು ತಲೆ ಕಡೆಸಿಕೊಳ್ಳುದಿಲ್ಲ. ಬದಲಾಗಿ ಅವುಗಳನ್ನು ಅನುಷ್ಠಾನಕ್ಕೆ ತರಲು ಶ್ರಮಿಸುತ್ತೇವೆ ಎಂದರು.
ಬಳಿಕ ಪುರಸಭೆ ಸದಸ್ಯ ರಾಜೂ ಸಾಂಗ್ಲೀಕರ್, ಎಚ್.ಎಸ್.ಸೊಂಪೂರ ಮಾತನಾಡಿ ಈ ಹಿಂದಿನ ಸರ್ಕಾರದ ಪ್ರನಾಳಿಕೆಯಲ್ಲಿನ ೧೬೫. ಅಂಶಗಳಲ್ಲಿ ೧೫೭ ಭರವಸೆಗಳನ್ನು ಈಡೇರಿಸಿದ್ದೇವೆ.ನುಡಿದಂತೆ ನಡೆದ ಸರ್ಕಾರ ಯಾವುದಾದರೂ ಇದ್ದರೆ ಅದು ಕಾಂಗ್ರೆಸ್ ಸರ್ಕಾರ
ಸಿದ್ದರಾಮಯ್ಯ ಸರ್ಕಾರ. ಈಗ ೫ ಗ್ಯಾರಂಟಿಗಳಲ್ಲಿ ಶಕ್ತಿ ಯೋಜನೆ ಜಾರಿ ಗೊಳಿಸದ್ದೇವೆ.ಮುಂದಿನ ದಿನಗಳಲ್ಲಿ ಎಷ್ಟೇ ಕಷ್ಟ ಬಂದರು ಸಹ ಉಳಿದ ೪ ಗ್ಯಾರಂಟಿಗಳನ್ನು ರಾಜ್ಯ ಸರ್ಕಾರ ಜಾರಿ ಮಾಡಿಯೇ ತಿರುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಚಂಬಣ್ಣ ಚವಡಿ, ಎಚ್.ಎಸ್.ಸೊಂಪೂರ, ಶರಣಪ್ಪ ರೇವಡಿ, ಶೇಖಪ್ಪ ಇಟಗಿ,ಪಿ.ಸುಬ್ರಮಣ್ಯ ರೆಡ್ಡಿ, ಪ್ರಶಾಂತ ರಾಠೋಡ, ಮಾರುತೆಪ್ಪ ಕಲ್ಲೊಡ್ಡರ, ನಾಗಯ್ಯ ಗೊಂಗಡಶೆಟ್ಟಿಮಠ, ಉಮೇಶ ರಾಠೋಡ, ಬಸವರಾಜ ಚನ್ನಿ, ಸಿದ್ದು ಗೊಂಗಡಶೆಟ್ಟಿಮಠ, ಅಂದಪ್ಪ ರಾಠೋಡ, ಪ್ರಭು ಚವಡಿ, ಎ.ಡಿ.ಕೋಲಕಾರ, ವಿರೇಶ ಸಂಗಮದ, ಕೆ.ಎಸ್.ಕೊಡತಗೇರಿ,ಹನಮಂತ ರಾಮಜಿ, ಶ್ರೀಕಾಂತ ತಾಳಿಕೋಟಿ,ಹಸನಸಾಬ ತಟಗಾರ,ಗುರು ಕಲ್ಲೊಡ್ಡರ,ಪ್ರಕಾಶ ರಾಠೋಡ, ಹನಮಂತ ಗೌಡರ, ಸುಮಂಗಲಾ ಇಟಗಿ, ಶಾರದಾ ರಾಠೋಡ, ಸೇರಿದಂತೆ ಅನೇಕ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಇದ್ದರು.