ರವಿವಾರ  “ಸ್ನೇಹಸತಿ” ಕವನ ಸಂಕಲನ ಲೋಕಾರ್ಪಣೆ

ಸಮಗ್ರ ಪ್ರಭ ಸುದ್ದಿ
1 Min Read

ಗಜೇಂದ್ರಗಡ: ನಗರದ ಕನ್ನಡ ಸಾಹಿತ್ಯ ಬಳಗ ಗಜೇಂದ್ರಗಡ ಇವರ ಸಹಯೋಗದೊಂದಿಗೆ ಮಾಹಾಂತೇಶ ಬನ್ನಿಗೋಳ ವಿರಚಿತ ಸ್ನೇಹಸತಿ ಕವನ ಸಂಕಲನ ಪುಸ್ತಕ ಬಿಡುಗಡೆ ಸಮಾರಂಭವು ರವಿವಾರ ದಿನಾಂಕ ೧೧ ರಂದು ನಗರದ ಎನ್.ಕೆ.ಎಸ್.ಟಿ.ವ್ಹಿ. ಸ್ಟೂಡಿಯೋದಲ್ಲಿ ಮಧ್ಯಾನ್ಹ ೩ ಗಂಟೆಗೆ ನಡೆಯಲಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಮಾಶಾಸ್ರ್ರಿಜಿ ಜೀರೆ, ಉದ್ಘಾಟಕರಾಗಿ ತಹಶಿಲ್ದಾರರ ರಜನಿಕಾಂತ್ ಕೆಂಗೇರಿ, ಮುಖ್ಯ ಅತಿಥಿಗಳಾಗಿ ನಿಂಗಪ್ಪ ರುದ್ರಗೋಳ, ಪುಸ್ತಕ ಪರಿಚಯವನ್ನು ಗಜೇಂದ್ರಗಡ ಠಾಣೆಯ ಪಿ.ಎಸ್.ಐ. ನಾಗರಾಜ ಗಡಾದ, ಪುಸ್ತಕ ಬಿಡುಗಡೆಯನ್ನು ಸಿದ್ದಣ್ಣ ಬಂಡಿ ಚಂಬಣ್ಣ ಚವಡಿ, ರಾಜಶೇಖರ ಮಸಗಿ, ಶ್ರೀಧರ ಬಿದರಳ್ಳಿ, ಮಹೇಶ ಕವಡ್ಕಿ, ಶರಣಪ್ಪ ಬೇವಿನಕಟ್ಟಿ, ಭಾಗಿಯಾಗುವವರು ಎಂದು ಲೇಖಕ ಮಹಾಂತೇಶ ಬನ್ನಿಗೋಳ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.

Share this Article