ಗಜೇಂದ್ರಗಡ:ಇಂದಿನ ಆಧುನಿಕ ಯುಗದಲ್ಲಿ ಮಕ್ಕಳಿಗೆ ಸಂಸ್ಕಾರದ ಜೊತೆಗೆ ಅಕ್ಷರಾಭ್ಯಾಸವೂ ಅತ್ಯವಶ್ಯಕವಾಗಿ ಬೇಕಾಗಿದೆ ಎಂದು ಗಣ್ಯ ವ್ಯಾಪಾರಸ್ಥ ಅಂದಪ್ಪ ಸಂಕನೂರ ಹೇಳಿದರು.
ನಗರದ ಹಿರೇಮನಿ ಬಡಾವಣೆಯ ಹತ್ತಿರದ ಬ್ರೈಟ್ ಬಿಗಿನಿಂಗ್ ಪ್ರಿ ಸ್ಕೂಲ್ ದಲ್ಲಿ ನಡೆದ ಅಕ್ಷರಾಭ್ಯಾಸ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದರು.
ಶೈಕ್ಷಣಿಕವಾಗಿ ಮಕ್ಕಳು ಪ್ರಗತಿ ಸಾಗಿಸಬೇಕಾದರೆ ತಳಹಂತದಿಂದಲೇ ಶಿಕ್ಷಣಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಬೇಕು ಈ ನಿಟ್ಟಿನಲ್ಲಿ ಬ್ರೈಟ್ ಬಿಗಿನಿಂಗ್ ಶಾಲೆಯು ನಡೆಯುತ್ತಿದ್ದು ನಗರದಲ್ಲಿ ಬಹುಶಃ ಇದೇ ಪ್ರಥಮ ಬಾರಿ ಬೆಳೆಯುವ ಮಕ್ಕಳಿಗೆ ಇಂತಹ ಕಾರ್ಯಕ್ರಮ ಮಾಡಿದ್ದು ಅನಿಸುತ್ತದೆ.ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಪಾಲಕರು ಶ್ರಮ ಪಡಬೇಕಾಗಿದೆ ಎಂದರು.
ಬಳಿಕ ನಿವೃತ್ತ ಸೈನಿಕ ಕಲ್ಲಪ್ಪ ರಾಮಜಿ ಮಾತನಾಡಿ ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಶೈಕ್ಷಣಿಕವಾಗಿ ತೊದಲು ನುಡಿಯ ಮಕ್ಕಳಿಗೆ ಸಾಂಪ್ರದಾಯಿಕವಾಗಿ ಸುಸಂಸ್ಕೃತ ಶಿಕ್ಷಣಕ್ಕಾಗಿ ಅಕ್ಷರಾಭ್ಯಾಸ ಮಾಡಿದ್ದು ಒಳ್ಳೆಯ ಸಂಗತಿಯಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಶಾಲೆಯ ಮಕ್ಕಳಿಗೆ ಪುರೋಹಿತ ಶ್ರೀನಿವಾಸ ತೈಲಂಗ್ ಅಕ್ಷರಾಭ್ಯಾಸ ನೆರವೇರಿಸಿದರು. ಇದೇ ಸಂದರ್ಭದಲ್ಲಿ ಸಂಸ್ಥೆ ಚೆರಮನ್ನ ಸೀತಲ ಓಲೇಕಾರ, ಮುಖ್ಯ ಶಿಕ್ಷಕಿ ನಾಜೀಯಾ ಮುದಗಲ್, ಹೀನಾ ಅರಳಿಕಟ್ಟಿ, ಉದಯ ಸಂಗಮದ, ಗೌರಮ್ಮ ಓಲೇಕಾರ ಸೇರಿದಂತೆ ಪಾಲಕರು ಮುದ್ದು ಮಕ್ಕಳು ಇದ್ದರು.