ಬೆಂಗಳೂರು: ಕರ್ನಾಟಕದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಪೂರ್ಣ ಪ್ರಮಾಣದ ಸಚಿವ ಸಂಪುಟ ಅಸ್ತಿತ್ವಕ್ಕೆ ಬಂದಿದೆ. ಮೇ 20ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಜೊತೆ 8 ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಅದರ ಬಳಿಕ ಮೇ 27ರಂದು 24 ಮಂದಿ ಸಚಿವರಾಗಿ ಪದಗ್ರಹಣ ಮಾಡಿದ್ದಾರೆ. ಈಗ ನೂತನ ಸಚಿವರಿಗೆ ಖಾತೆ ಹಂಚಿಕೆಯು ಆಗಿದೆ. ಅಧಿಕೃತ ಘೋಷಣೆಯೊಂದೇ ಬಾಕಿ ಉಳಿದಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿಯೇ ಹಣಕಾಸು ಇಲಾಖೆ ಉಳಿದಿದ್ದು, ಬೆಂಗಳೂರು ಅಭಿವೃದ್ಧಿ ಹಾಗೂ ಜಲ ಸಂಪನ್ಮೂಲ ಖಾತೆ ಡಿಸಿಎಂ ಡಿಕೆ ಶಿವಕುಮಾರ್ ಪಾಲಾಗಿದೆ. ಜಿ ಪರಮೇಶ್ವರ್ ಅವರಿಗೆ ಗೃಹ ಖಾತೆ ನೀಡಲಾಗಿದೆ. ಕೆಜೆ ಜಾರ್ಜ್ಗೆ ಇಂಧನ ಖಾತೆ ನೀಡಿದ್ದು, ಎಂಬಿ ಪಾಟೀಲ್ ಕೈಗಾರಿಕಾ ಸಚಿವರಾಗಿದ್ದಾರೆ. ಕೊನೆ ಕ್ಷಣದ ಬದಲಾವಣೆ ಹೊರತಾಗಿ ಬಹುತೇಕ ಇದೇ ಖಾತೆಗಳು ಆಯಾ ಸಚಿವರ ಪಾಲಾಗಲಿವೆ. ಯಾವ್ಯಾವ ಸಚಿವರಿಗೆ ಯಾವ ಖಾತೆ ಎಂಬುದರ ಪಟ್ಟಿ ಇಲ್ಲಿದೆ.
ಯಾರಿಗೆ ಯಾವ ಖಾತೆ? ಇಲ್ಲಿದೆ ಸಂಪೂರ್ಣ ಪಟ್ಟಿ:
1. ಸಿದ್ದರಾಮಯ್ಯ (ಮುಖ್ಯಮಂತ್ರಿ) ಹಣಕಾಸು, ಆಡಳಿತ ಸುಧಾರಣೆ, ಗುಪ್ತಚರ, ವಾರ್ತಾ ಇಲಾಖೆ ಮತ್ತು ಹಂಚಿಕೆಯಾಗದೇ ಉಳಿದ ಖಾತೆಗಳು
2. ಡಿಕೆ ಶಿವಕುಮಾರ್ (ಉಪ ಮುಖ್ಯಮಂತ್ರಿ) ಜಲಸಂಪನ್ಮೂಲ, ಬೆಂಗಳೂರು ನಿಗಮ ಅಭಿವೃದ್ಧಿ
3. ಡಾ ಜಿ ಪರಮೇಶ್ವರ್- ಗೃಹ (ಗುಪ್ತಚರ ಹೊರತುಪಡಿಸಿ)
4. ಎಚ್ಕೆ ಪಾಟೀಲ್- ಕಾನೂನು ಮತ್ತು ಸಂಸದೀಯ ವ್ಯವಹಾರ, ಸಣ್ಣ ನೀರಾವರಿ
5. ಕೆಎಚ್ ಮುನಿಯಪ್ಪ – ಆಹಾರ ಮತ್ತು ನಾಗರಿಕ ಪೂರೈಕೆ, ಗ್ರಾಹಕ ವ್ಯವಹಾರ
6. ಕೆಜೆ ಜಾರ್ಜ್- ಇಂಧನ
7. ಎಂಬಿ ಪಾಟೀಲ್- ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಐಟಿ & ಬಿಟಿ
8. ರಾಮಲಿಂಗಾರೆಡ್ಡಿ- ಸಾರಿಗೆ
9. ಸತೀಶ್ ಜಾರಕಿಹೊಳಿ- ಲೋಕೋಪಯೋಗಿ
10. ಪ್ರಿಯಾಂಕ್ ಖರ್ಗೆ- ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್
11 ಜಮೀರ್ ಅಹ್ಮದ್ ಖಾನ್- ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತ
12. ಕೃಷ್ಣ ಬೈರೇಗೌಡ- ಕಂದಾಯ (ಮುಜರಾಯಿ ಹೊರತುಪಡಿಸಿ)
13. ದಿನೇಶ್ ಗುಂಡೂರಾವ್- ಆರೋಗ್ಯ ಮತ್ತು ಕುಟುಂಬ ಕಲ್ಯಾಣ
14. ಎನ್ ಚಲುವರಾಯಸ್ವಾಮಿ- ಕೃಷಿ
15. ಕೆ ವೆಂಕಟೇಶ್- ಪಶು ಸಂಗೋಪನೆ ಮತ್ತು ರೇಷ್ಮೆ
16. ಎಚ್ಸಿ ಮಹದೇವಪ್ಪ -ಸಮಾಜ ಕಲ್ಯಾಣ
17. ಈಶ್ವರ್ ಖಂಡ್ರೆ- ಅರಣ್ಯ, ಜೈವಿಕ ಮತ್ತು ಪರಿಸರ
18. ಕೆಎನ್ ರಾಜಣ್ಣ- ಸಹಕಾರ
19. ಶರಣಬಸಪ್ಪ ದರ್ಶನಾಪುರ್ – ಸಣ್ಣ ಕೈಗಾರಿಕೆ, ಸಾರ್ವಜನಿಕ ಸ್ವಾಮ್ಯದ ಕೈಗಾರಿಕೆ
20. ಶಿವಾನಂದ ಪಾಟೀಲ್- ಟೆಕ್ಸ್ಟೈಲ್, ಸಕ್ಕರೆ, ಕೃಷಿ ಮಾರುಕಟ್ಟೆ
21.ಆರ್ಬಿ ತಿಮ್ಮಾಪುರ – ಅಬಕಾರಿ, ಮುಜರಾಯಿ
22. ಎಸ್ಎಸ್ ಮಲ್ಲಿಕಾರ್ಜುನ್- ಗಣಿ, ಭೂವಿಜ್ಞಾನ ಮತ್ತು ತೋಟಗಾರಿಕೆ
23. ಶಿವರಾಜ ಎಸ್ ತಂಗಡಗಿ – ಹಿಂದುಳಿದ ವರ್ಗ ಮತ್ತು ಎಸ್ಸಿ, ಎಸ್ಟಿ ಕಲ್ಯಾಣ
24.ಶರಣ್ ಪ್ರಕಾಶ್ ಪಾಟೀಲ್- ಉನ್ನತ ಶಿಕ್ಷಣ
25.ಮಂಕಾಳ್ ವೈದ್ಯ- ಮೀನುಗಾರಿಕೆ, ಬಂದರು ಮತ್ತು ಒಳ ಸಾರಿಗೆ
26.ಲಕ್ಷ್ಮೀ ಹೆಬ್ಬಾಳ್ಕರ್ – ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನ, ಹಿರಿಯರ ಕಲ್ಯಾಣ
27. ರಹೀಂ ಖಾನ್ ಹಜ್ – ಪೌರಾಡಳಿತ
28.ಡಿ ಸುಧಾಕರ್- ಮೂಲಸೌಕರ್ಯ ಅಭಿವೃದ್ಧಿ, ಸಾಂಖ್ಯಿಕ ಮತ್ತು ಯೋಜನೆ
29. ಸಂತೋಷ್ ಲಾಡ್ – ಕಾರ್ಮಿಕ ಮತ್ತು ಕೌಶಲ್ಯಾಭಿವೃದ್ಧಿ
30 .ಎನ್ಎಸ್ ಬೋಸರಾಜು- ಪ್ರವಾಸೋದ್ಯಮ, ವಿಜ್ಞಾನ ಮತ್ತು ತಂತ್ರಜ್ಞಾನ
31.ಬೈರತಿ ಸುರೇಶ್- ನಗರಾಭಿವೃದ್ಧಿ ಮತ್ತು ನಗರ ಯೋಜನೆ (ಬೆಂಗಳೂರು ಅಭಿವೃದ್ಧಿ, ಬಿಬಿಎಂಪಿ, ಬಿಡಿಎ, ಬಿಡಬ್ಲ್ಯೂಎಸ್ಎಸ್ಬಿ, ಬಿಎಂಆರ್ಡಿಎ, ಬಿಎಂಆರ್ಸಿಎಲ್ ಹೊರತುಪಡಿಸಿ)
32.ಮಧು ಬಂಗಾರಪ್ಪ- ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ
33. ಡಾ ಎಂಸಿ ಸುಧಾಕರ್ – ವೈದ್ಯಕೀಯ ಶಿಕ್ಷಣ
34. ಬಿ ನಾಗೇಂದ್ರ- ಯುವಜನ ಮತ್ತು ಕ್ರೀಡೆ, ಕನ್ನಡ ಮತ್ತು ಸಂಸ್ಕೃತಿ ಖಾತೆ ಹಂಚಿಕೆಯಾಗಿದೆ ಆದರೆ ಈಕುರಿತು ಅಧಿಕೃತ ಘೋಷಣೆ ಬಾಕಿ ಇದೆ.