ಗದಗ: ತಾಲೂಕಿನ ಅಸುಂಡಿ ಗ್ರಾಮದಲ್ಲಿ ತಡ ರಾತ್ರಿ ಚಿರತೆ ದಾಳಿಯ ಶಂಕೆ ವ್ಯಕ್ತವಾಗಿದ್ದು ಎರಡು ಆಕಳು ಕರುಗಳ ಸಾವನ್ನಪ್ಪಿವೆ.
ಸುಭಾಷ ಭೂಮಕ್ಕನವರ ಎನ್ನೋರಿಗೆ ಸೇರಿದ ಆಕಳು ಮತ್ತು ಕರು ಕಳೆದ ಕೆಲ ದಿನಗಳ ಹಿಂದೆ ಅಸುಂಡಿ ಪಕ್ಕದ ಬಿಂಕದಕಟ್ಟಿ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಿರತೆ ಕಾಣಿಸಿಕೊಂಡಿದ್ದು ಆ ಸಮಯದಲ್ಲಿ ಅರಣ್ಯ ಇಲಾಖೆ ಚಿರತೆ ಪತ್ತೆಗೆ ಮುಂದಾಗಿದ್ದು ಈ ವರೆಗೂ ಚಿರತೆ ಪತ್ತೆಯಾಗಿಲ್ಲ ಬಿಂಕದಕಟ್ಟಿ ಗ್ರಾಮದ ಸುತ್ತಮುತ್ತಲೂ ಚಿರತೆ ಓಡಾಡುತ್ತಿದೆ ಅನೋ ಶಂಕೆ ಸಾರ್ವಜನಿಕರಿಂದ ಅಂದಿನಿಂದ ಶಂಕೆ ವ್ಯಕ್ತಪಡಿಸಿದ್ದರು.
ಆದರೆ ಮಂಗಳವಾರ ತಡ ರಾತ್ರಿ ಅಸುಂಡಿ ಗ್ರಾಮದಲ್ಲಿ ಕರುಗಳು ಸಾವನ್ನಪ್ಪಿದ್ದು ಜನರಲ್ಲಿ ಮತ್ತೆ ಚಿರತೆ ಆತಂಕ ಹೆಚ್ಚಾಗಿದೆ.
ಸುದ್ದಿ ತಿಳಿದು ಸ್ಥಳಕ್ಕೆ ಅರಣ್ಯ ಇಲಾಖೆಯ ಸಿಬ್ಬಂದಿಗಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ದಾಳಿ ಮಾಡಿರೋ ಪ್ರಾಣಿ ಯಾವುದೆಂದು ಅರಣ್ಯ ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸಬೇಕಿದೆ.