1.5 ಲಕ್ಷ ಪಡೆಯುವಾಗ ನಗರಸಭೆ ಎಇ ಲೋಕಾಯುಕ್ತ ಬಲೆಗೆ

ಸಮಗ್ರ ಪ್ರಭ ಸುದ್ದಿ
1 Min Read

ಗದಗ: ಗದಗ-ಬೆಟಗೇರಿ ನಗರ ಸಭೆಯಲ್ಲಿ ಲಂಚ ಕೊಡದೆ ಯಾವುದೇ ಕೆಲಸ ಆಗುವುದಿಲ್ಲ ಈ ಹಿಂದಿನ ಪೌರಾಯುಕ್ತ ರಮೇಶ ಜಾಧವ,ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಹುದ್ದಾರ ಸೇರಿದಂತೆ ಅನೇಕರು ಲಕ್ಷ ಲಕ್ಷ ಲಂಚ ತೆಗೆದು ಕೊಳ್ಳುತ್ತಿರುವಾಗ ಎಸಿಬಿ ಬಲೆಗೆ ಬಿದ್ದಿದ್ದು ಮರೆಮಾಚುವ ಮುನ್ನವೇ ಗುರುವಾರ ಗದಗ-ಬೆಟಗೇರಿ ನಗರ ಸಭೆಯಲ್ಲಿ ಗುತ್ತಿಗೆದಾರನಿಂದ ಲಂಚ ಪಡೆಯುತ್ತಿದ್ದಾಗ ನಗರಸಭೆ ಸಹಾಯ ಇಂಜಿನಿಯರ್(ಎಇ) ಲೋಕಾಯುಕ್ತ ಬಲೆಗೆ ಬಿದ್ದಿದಾನೆ.

ಗದಗ ಬೆಟಗೇರಿ ನಗರಸಭೆಯ ಎಇ ವೀರೇಂದ್ರಸಿಂಗ್ ಪಿ ಕಾಟೇವಾಲ ಗುತ್ತಿಗೆದಾರ ಅಬ್ದುಲ್‌ ಮನಿಯಾರ್ ಅವರು ಮಾಡಿದ ಸಿವಿಲ್ ವರ್ಕ್ ಬಿಲ್ ಪಾಸ್ ಮಾಡಲು 1.50 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಗುರುವಾರ ಕಚೇರಿಯಲ್ಲಿ ಲಂಚ ಪಡೆಯುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಅಧಿಕಾರಿಗಳು ಬಲೆಗೆ ಬಿದ್ದಿದ್ದಾರೆ.

ಗುತ್ತಿಗೆದಾರನಿಂದ ಲಂಚ ಪಡೆದು ತಮ್ಮ ದ್ವಿಚಕ್ರ ವಾಹನದಲ್ಲಿ ಇರುಸುತ್ತಿದ್ದ ವೇಳೆ ಲೋಕಾಯುಕ್ತ ದಾಳಿ ನಡೆಸಿದ್ದಾರೆ.
ಲೋಕಾಯುಕ್ತ ಎಸ್ ಪಿ ಸತೀಶ್ ಎಸ್ ಚಿಟಗುಬ್ಬಿ ನೇತೃತ್ವದಲ್ಲಿ ದಾಳಿ ನಡೆದಿದೆ ಈ ಸಂಧರ್ಭದಲ್ಲಿ ಸಿಪಿಐ ರವಿ ಪುರುಷೋತ್ತಮ, ಪಿಎಸ್ ಐ ಅಜಿತ್ ಕಲಾದಗಿ ಸೇರಿದಂತೆ ಸಿಬ್ಬಂದಿ ಹಾಜರಿದ್ದರು.

 

Share this Article