ವಿಶೇಷ ಜಾಥಾಗಳ ಮೂಲಕ ಮತದಾನ ಜಾಗೃತಿ ಲಕ್ಷಕ್ಕೂ ಅಧಿಕ ಜನ ಭಾಗಿ : ಡಾ ಸುಶೀಲಾ, ಬಿ

ಸಮಗ್ರ ಪ್ರಭ ಸುದ್ದಿ
3 Min Read

  • ಮತದಾನ ಜಾಗೃತಿಗೆ ಅಭೂತಪೂರ್ವ ಜನ ಸ್ಪಂದನೆ
  • 122 ಗ್ರಾಪಂಗಳಲ್ಲಿ ಕಾರ್ಯಕ್ರಮ ಆಯೋಜನೆ / ಶೇ. 100ರಷ್ಟು ಮತದಾನಕ್ಕೆ ಸಹಕರಿಸಲು ಮನವಿ  

ಲಕ್ಷ್ಮೇಶ್ವರ:2023ರ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಶೇ.100ರಷ್ಟು ಮತದಾನವಾಗುವಂತೆ ಮಾಡಿದಾಗ ನಮ್ಮ ಮತ, ನಮ್ಮ ಧ್ವನಿಗೆ ಶಕ್ತಿ ಬರಲು ಸಾಧ್ಯ ಎಂದು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷೆ ಡಾ. ಸುಶೀಲಾ ಬಿ. ಅವರು ಹೇಳಿದರು.

ತಾಲೂಕಿನ ಯಳವತ್ತಿ ಗ್ರಾಮದಲ್ಲಿ ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಬದು ನಿರ್ಮಾಣ ಕಾಮಗಾರಿ ಸ್ಥಳದಲ್ಲಿ ಮತದಾರರ ಜಾಗೃತಿ ಶಿಬಿರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತ ದೇಶದಲ್ಲಿ ಕಡ್ಡಾಯವಾಗಿ ಮತದಾನ ಮಾಡಿದಾಗ ಮಾತ್ರ ನಮ್ಮ ಪ್ರಜಾಪ್ರಭುತ್ವವು ಯಶಸ್ವಿಯಾಗುತ್ತದೆ. ಶೇ. 100ರಷ್ಟು ಮತದಾನಕ್ಕೆ ಎಲ್ಲರೂ ಕೈ ಜೋಡಿಸಿದಾಗ ಮಾತ್ರ ಸಾಧ್ಯವಾಗಲಿದೆ. ಸಂವಿಧಾನಾತ್ಮಕ ಹಕ್ಕಾದ ಮತದಾನ ಕಾರ್ಯದಲ್ಲಿ ತಪ್ಪದೇ ಪಾಲ್ಗೊಳ್ಳುವಂತಾಗಬೇಕು. ಮೇ 10ರಂದು ಮುಂಜಾನೆ 7 ರಿಂದ ಸಂಜೆ 6 ಗಂಟೆವರೆಗೂ ಜರಗುವ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ತಿಳಿಸಿದರು.

ತಾಲೂಕು ಪಂಚಾಯತಿ ಸಹಾಯಕ ನಿರ್ದೇಶಕ ಕೃಷ್ಣಪ್ಪ ಧರ್ಮರ ಮಾತನಾಡಿ, 18 ವರ್ಷ ತುಂಬಿದ ಅರ್ಹ ಮತದಾರರು ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಮತದಾನ ಮಾಡುವ ಮೂಲಕ ದೇಶದ ಋಣ ತೀರಿಸಬೇಕು. ಯುವ ಜನಾಂಗ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಬಲಿಷ್ಠ ಪ್ರಜಾಪ್ರಭುತ್ವ ರಾಷ್ಟ್ರವನ್ನು ನಿರ್ಮಿಸಬೇಕು. ಸುತ್ತ-ಮುತ್ತಲಿನ ಜನರಿಗೂ ಮತದಾನದ ಮಹತ್ವ ತಿಳಿಸಿಕೊಡಬೇಕು ಎಂದು ಸಲಹೆ ನೀಡಿದರು.

ಗ್ರಾಪಂ ಅಭಿವೃದ್ಧಿ ಅಧಿಕಾರಿ ಪ್ರವೀಣ ಗೋಣೆಮ್ಮನವರ,
ತಾಪಂ ಐಇಸಿ ಸಂಯೋಜಕ ವೀರೇಶ ಬಸನಗೌಡ್ರ, ಎಂಐಎಸ್ ಸಂಯೋಜಕ ಚಂದ್ರಶೇಖರ ಹಳ್ಳಿ, ತಾಂತ್ರಿಕ ಸಂಯೋಜಕ ಅರುಣಕುಮಾರ ತಂಬ್ರಳ್ಳಿ, ಶಿರಹಟ್ಟಿಯ ಸಂಜೀವಿನಿ ಯೋಜನೆ ಟಿ.ಪಿ.ಎಂ ಮಾರುತಿ ಕೊಡ್ಲಿ, ಟಿಎಇ ಪ್ರದೀಪ ನರೇಗಲ್ಲ, ಬಿಎಫ್‌ಟಿ ಸತೀಶ ಅರಿಷಿಣದ, ಜಿಕೆಎಂ ಕಾಯಕ ಬಂಧುಗಳು, ಮಹಿಳಾ ಸ್ವಸಹಾಯ ಸಂಘದ ಸದಸ್ಯರು ಇತರ ಸಿಬ್ಬಂದಿ ಇದ್ದರು.

ಜಾತಾ ವಿಶೇಷ: 

ಯಳವತ್ತಿ ಗ್ರಾಮದ ಚಿಂಚಲಿ ರಸ್ತೆಯಿಂದ ಕಾಲ್ನಡಿಗೆ ಆರಂಭವಾದ ಎತ್ತಿನ ಬಂಡಿ ಜಾಥಾ ಆರಂಭವಾಯಿತು. ನಂತರ ಗ್ರಾಮದ ಐತಿಹಾಸಿಕ ಕೋಟೆ ಆವರಣ ತಲುಪಿತು. ಅಲ್ಲಿ ಕೆಲ ಸಮಯ ಮತದಾನ ಜಾಗೃತ ಸಂದೇಶಗಳನ್ನು ಸಾರಲಾಯಿತು. ನಂತರ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಸುಶೀಲಾ ಬಿ. ಅವರು ಎತ್ತಿನ ಬಂಡಿ ಎರುವ ಮೂಲಕ ಊರಿನ ಮೈಲಾರ ಲಿಂಗೇಶ್ವರ ದೇವಸ್ಥಾನ, ಗ್ರಾಮ ಬಸ್ ನಿಲ್ದಾಣದ ವರೆಗೂ ಸಾಗಿತು. ಜಾಥಾದಲ್ಲಿ ನಿಮ್ಮ ಮತ ನಿಮ್ಮ ಹಕ್ಕು, ಜಾಗತ ಮತದಾರ, ಸದಢ ಪ್ರಜಾಪಮನವಿ್ರಭುತ್ವ, ನಿಮ್ಮ ಮತ ಗೌಪ್ಯವಾಗಿರಲಿ, ಮತದಾನ ಪ್ರತಿಯೊಬ್ಬರ ಹಕ್ಕು ಮತ್ತು ಕರ್ತವ್ಯ ಎಂಬ ಘೋಷ ವಾಕ್ಯಗಳು ಅಭಿಯಾನದಲ್ಲಿ ಮೊಳಗಿದವು. ಅಲ್ಲಿಂದ ಧರ್ಮಣ್ಣ ಜವಳಿ ಅವರ ಜಮೀನಿನಲ್ಲಿ ಏರ್ಪಡಿಸಿದ್ದ ಮುಖ್ಯ ವೇದಿಕೆ ತಲುಪಿತು.

122 ಗ್ರಾಪಂ ಏಕಕಾಲಕ್ಕೆ ಪ್ರತಿಜ್ಞಾ ವಿಧಿ ಸ್ವೀಕಾರ:

ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರ ನೇತೃತ್ವದಲ್ಲಿ ಜಿಲ್ಲೆಯ 122 ಗ್ರಾಮ ಪಂಚಾಯತಿಗಳಲ್ಲಿ ಏಕಕಾಲಕ್ಕೆ ಪ್ರತಿಜ್ಞಾ ವಿಧಿ ಸ್ವೀಕಾರ ಮಾಡುವಂತೆ ಮೊದಲೇ ಜೂಮ್ ಮಿಟಿಂಗ್ ಲಿಂಕ್ ಶೆರ್ ಮಾಡಲಾಗಿತ್ತು. ಲಕ್ಷ್ಮೇಶ್ವರ ತಾಲೂಕು ಪಂಚಾಯತಿ ಸಹಾಯಕ ನಿರ್ದೇಶಕ ಕೃಷ್ಣಪ್ಪ ಧರ್ಮರ ಪ್ರತಿಜ್ಞಾ ವಿಧಿ ಬೋಧಿಸಿದರು.

1ಲಕ್ಷಕ್ಕೂ ಹೆಚ್ಚು ಜನ ಭಾಗಿ…

ಜಿಲ್ಲೆಯ ಎಲ್ಲ ತಾಲೂಕುಗಳ ಗ್ರಾಮಗಳಲ್ಲಿಯ ಉದ್ಯೋಗ ಖಾತ್ರಿ ಕಾಮಗಾರಿ ಸ್ಥಳದಲ್ಲಿ 1,04,000 ಜನರು ಏಕಕಾಲಕ್ಕೆ ಮತದಾನ ಜಾಗೃತಿ, ಕಾಲ್ನಡಿಗೆ ಜಾಥಾ ಸೇರಿ ವಿವಿಧ ರೀತಿಯ ಜಾಥಾಗಳ ಮೂಲಕ ವಿಶೇಷ ಮತದಾನ ಜಾಗೃತಿ ಮೂಡಿಸಿದರು. ರೋಣ- 25000, ಗದಗ-23000, ಲಕ್ಷ್ಮೇಶ್ವರ- 12000, ನರಗುಂದ- 8000, ಶಿರಹಟ್ಟಿ- 11000, ಮುಂಡರಗಿ- 13000, ಗಜೇಂದ್ರಗಡ- 12000 ಜನ ಕೂಲಿಕಾರರು ಭಾಗಿಯಾಗಿದ್ದರು.

Share this Article