ಏಕಕಾಲದಲ್ಲಿ ಐದು ಸಾವಿರಕ್ಕೂ ಅಧಿಕ ನರೇಗಾ ಕೂಲಿಕಾರರಿಗೆ  ಮತದಾನ ಜಾಗೃತಿ  ಪ್ರತಿಜ್ಞಾ ವಿಧಿ ಭೋದನೆ

ಸಮಗ್ರ ಪ್ರಭ ಸುದ್ದಿ
2 Min Read

ನರಗುಂದ : ಗದಗ ಜಿಲ್ಲೆಯಾದ್ಯಂತ ಹಮ್ಮಿಕೊಂಡಿದ್ದ ಏಕಕಾಲಕ್ಕೆ ಲಕ್ಷ ಪ್ರಜೆಗಳಿಗೆ ಮತದಾರರ ಪ್ರತಿಜ್ಞಾ ವಿಧಿ ಭೋದನೆ ಕಾರ್ಯಕ್ರಮಕ್ಕೆ ನರಗುಂದ ತಾಲೂಕಿನಾದ್ಯಂತ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.

ಏಕಕಾಲಕ್ಕೆ ಲಕ್ಷ ಪ್ರಜೆಗಳಿಗೆ ಮತದಾರರ ಪ್ರತಿಜ್ಞಾ ವಿಧಿ ಭೋದನೆ ಕಾರ್ಯಕ್ರಮದ ಭಾಗವಾಗಿ ನರಗುಂದ ತಾಲೂಕಿನ 13 ಗ್ರಾಮ ಪಂಚಾಯತಿ ವ್ಯಾಪ್ತಿಗಳಲ್ಲಿ 25 ನರೇಗಾ ಕಾಮಗಾರಿ ಸ್ಥಳಗಳಲ್ಲಿ 5000 ಕ್ಕೂ ಅಧಿಕ ಕೂಲಿಕಾರರು ಏಕಕಾಲದಲ್ಲಿ ತಾಲೂಕಿನಾದ್ಯಂತ ಮತದಾರರ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.

ಗದಗ ಜಿಲ್ಲಾ ಸ್ವೀಪ್ ಸಮಿತಿ ಮತ್ತು ನರಗುಂದ ತಾಲೂಕು ಸ್ವೀಪ್ ಸಮಿತಿ ವತಿಯಿಂದ ಏಕಕಾಲಕ್ಕೆ ಲಕ್ಷ ಪ್ರಜೆಗಳಿಗೆ ಪ್ರತಿಜ್ಞಾ ವಿಧಿ ಭೋದಿಸಲಾಯಿತು. ಇದರ ಭಾಗವಾಗಿ ನರಗುಂದ ತಾಲೂಕಿನಲ್ಲಿ ಐದು ಸಾವಿರಕ್ಕೂ ಅಧಿಕ ಪ್ರಜೆಗಳಿಗೆ ಪ್ರತಿಜ್ಞಾ ವಿಧಿ ಭೋದಿಸಲಾಯಿತು. ತಾಲೂಕಿನ 13 ಗ್ರಾಮ ಪಂಚಾಯತಿಗಳ 57 ಮತಗಟ್ಟೆ ವ್ಯಾಪ್ತಿಗಳಲ್ಲಿ ಒಟ್ಟು 25 ಸ್ಥಳಗಳಲ್ಲಿ ಏಕಕಾಲದಲ್ಲಿ 5000 ಪ್ರಜೆಗಳಿಗೆ ಮತದಾರರ ಪ್ರತಿಜ್ಞಾ ವಿಧಿ ಭೋದಿಸಲಾಯಿತು.

ತಾಲೂಕಿನ ಪ್ರತಿಯೊಂದು ಗ್ರಾಮ ಪಂಚಾಯತ ವ್ಯಾಪ್ತಿಯ ನರೇಗಾ ಕಾಮಗಾರಿ ಸ್ಥಳದಲ್ಲಿ ಕಡ್ಡಾಯ ಮತದಾನದ ಜಾಗೃತಿ ಬರಹ ಹಾಗೂ ಮೇ-10 ಓಟು ಒತ್ತು ಘೋಷವಾಕ್ಯವನ್ನು ಬರೆಸಲಾಗಿತ್ತು. ಮತದಾನದ ಜಾಗೃತಿ ಘೋಷವಾಕ್ಯಗಳನ್ನು ಕೂಲಿಕಾರರಿಗೆ ಹೇಳಿಸುವ ಮೂಲಕ ಮೇ-10 ರಂದು ತಪ್ಪದೇ ಮತದಾನ ಮಾಡುವಂತೆ ತಿಳುವಳಿಕೆ ಮೂಡಿಸಲಾಯಿತು.

ಜಿಲ್ಲಾ ಪಂಚಾಯತ ವತಿಯಿಂದ ತಾಲೂಕಿನ ಕಾರ್ಯಕ್ರಮದ ಮೇಲುಸ್ತುವಾರಿಯಾಗಿ ಜಿಲ್ಲಾ ಪಂಚಾಯತ ಮುಖ್ಯ ಲೆಕ್ಕಾಧಿಕಾರಿಗಳಾದ ಪ್ರಶಾಂತ ಜೆ.ಸಿ. ಅವರನ್ನು ನಿಯೋಜಿಸಲಾಗಿತ್ತು. ಪ್ರಶಾಂತ ಜೆ.ಸಿ. ಅವರು ಸುರಕೋಡ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಪ್ರಶಾಂತ ಜೆ.ಸಿ. ಅವರು ಕೂಲಿಕಾರರನ್ನು ಉದ್ದೇಶಿಸಿ ಮಾತನಾಡಿ, ಕಡ್ಡಾಯವಾಗಿ ಮೇ-10 ರಂದು ಮತದಾನ ಮಾಡಬೇಕು. ಮತದಾನ ಮಾಡುವುದು ಪ್ರತಿಯೊಬ್ಬ ಮತದಾರರ ಕರ್ತವ್ಯವಾಗಿದೆ. ಸಂವಿಧಾನ ನೀಡಿರುವ ಮತದಾನದ ಹಕ್ಕನ್ನು ಯಾರು ಉಲ್ಲಂಘಿಸಬಾರದು. ಕಡ್ಡಾಯವಾಗಿ ಮತದಾನ ಮಾಡಿ ನಮ್ಮ ಜವಾಬ್ದಾರಿ ಮೆರೆಯಬೇಕೆಂದು ತಿಳಿಸಿದರು.

ಏಕಕಾಲದಲ್ಲಿ ಲಕ್ಷ ಪ್ರಜೆಗಳಿಗೆ ಮತದಾರರ ಪ್ರತಿಜ್ಞಾ ವಿಧಿ ಭೋದನೆ ಕಾರ್ಯಕ್ರಮದಲ್ಲಿ ನರಗುಂದ ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳು, ಸಹಾಯಕ ನಿರ್ದೇಶಕರು(ಗ್ರಾಮೀಣ ಉದ್ಯೋಗ), ತಾಲೂಕಿನ 13 ಗ್ರಾಮ ಪಂಚಾಯತಿ ಪಿಡಿಓ ಗಳು, ತಾಲೂಕಿನ ನರೇಗಾ ತಾಂತ್ರಿಕ ಸಿಬ್ಬಂದಿ, ಗ್ರಾಮ ಪಂಚಾಯತಿ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.

Share this Article