ಗಜೇಂದ್ರಗಡ: ರಾಜ್ಯದಲ್ಲಿ 40% ಸರ್ಕಾರ ಕಿತ್ತೊಗೆಯಲು ಜನತೆ ತೀರ್ಮಾನಿಸಿದ್ದಾರೆ. ಈ ಬಾರಿ ಬದಲಾವಣೆ ಗಾಳಿ ಬೀಸುತ್ತಿದ್ದು, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೇರುವುದು ಎಷ್ಟು ಸತ್ಯವೋ, ರೋಣ ಮತಕ್ಷೇತ್ರದಲ್ಲಿ ನಾನು ಗೆಲ್ಲುವುದೂ ಕೂಡ ಅಷ್ಟೇ ಸತ್ಯ ಎಂದು ಕಾಂಗ್ರೆಸ್ ಅಭ್ಯರ್ಥಿ ಜಿ.ಎಸ್. ಪಾಟೀಲ ವಿಶ್ವಾಸ ವ್ಯಕ್ತಪಡಿಸಿದರು.
ಶಿವಾಜಿ ಪೇಟೆಯಲ್ಲಿ ನಡೆದ ವಿವಿಧ ಪಕ್ಷ ತೊರೆದ ಮುಖಂಡರ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ರಾಜ್ಯದಲ್ಲಿ ಭ್ರಷ್ಟಾಚಾರದಲ್ಲಿ ಮಿಂದೆದ್ದಿರುವ ಆಡಳಿತ ಪಕ್ಷ ಜನಸಾಮಾನ್ಯರ ನೆಮ್ಮದಿ ಕದ ಡಿದೆ. ಒಂದಿಲ್ಲೊಂದು ರೀತಿಯಲ್ಲಿ ಕಿರುಕುಳ ನೀಡಿ, ದಬ್ಬಾಳಿಕೆಯ ಆಡಳಿತ ನಡೆಸಿದೆ. ಅಂತಹ ಸರ್ಕಾರವನ್ನು ಶಾಶ್ವತವಾಗಿ ಮನೆಗೆ ಕಳುಹಿಸುವ ಕಾಲ ಸನ್ನಿಹಿತವಾಗಿದೆ ಎಂದರು. ಚುನಾವಣಾ ಸಂದರ್ಭದಲ್ಲಿ ಜಾತಿಯ ವೈಷಮ್ಯ ಸೃಷ್ಟಿಸುವ ಬಿಜೆಪಿಗರಿಗೆ ಅಭಿವೃದ್ಧಿ ಬಗ್ಗೆ ಮಾತನಾಡಲು ಯಾವುದೇ ವಿಷಯ ವಿಲ್ಲ. ಹೀಗಾಗಿ, ಜಾತಿ ಆಧಾರದ ಮೇಲೆಯೇ ರಾಜಕಾರಣ ಮಾಡುತ್ತಿದ್ದಾರೆ ಎಂದರು.
ಗಜೇಂದ್ರಗಡ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವರಾಜ ಘೋರ್ಪಡೆ ಮಾತನಾಡಿ, ರಾಜ್ಯದ ಎಲ್ಲ ವರ್ಗಗಳ ಕಲ್ಯಾಣಕ್ಕೆ ಶ್ರಮಿಸಿದ ಕೀರ್ತಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸಲ್ಲುತ್ತದೆ. ಹೀಗಾಗಿ, ಎಲ್ಲ ವರ್ಗ ಸುರಕ್ಷಿತವಾಗಿರಬೇಕಾದರೆ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಬೇಕು. ಮತಕ್ಷೇತ್ರದಲ್ಲಿ ಜಿ.ಎಸ್. ಪಾಟೀಲ ಅವರ ಗೆಲುವು ಅನಿವಾರ್ಯವಾಗಿದೆ. ಪ್ರತಿಯೊಬ್ಬ ಮತದಾರರು ಮೇ 10 ರಂದು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಬೇ ಕೆಂದು ಮನವಿ ಮಾಡಿಕೊಂಡರು.
ಮರಾಠ ಸಮಾಜ ಅಧ್ಯಕ್ಷ ರೇಣಪ್ಪ ಇಂಗಳೆ ಮಾತನಾಡಿ ಬಿಜೆಪಿಯಲ್ಲಿ ನಾನು ಮನನೊಂದು ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗುತ್ತಿದ್ದೇನೆ.ಈ ಬಾರಿ ಸರಳ ಸಜ್ಜನಿಕೆಯ, ಹೃದಯ ವೈಶಾಲಿತೆನು ಹೊಂದಿದ ಸರ್ವರನ್ನು ಗೌರವಯುತ ಕಾಣುವ ಜಿ.ಎಸ್.ಪಾಟೀಲರಿಗೆ ನಾವೆಲ್ಲರೂ ಬೆಂಬಲ ನೀಡಿ ಅವರನ್ನು ಅಧಿಕಾರಕ್ಕೆ ತರೋಣ ಎಂದರು.
ಇದೇ ವೇಳೆ ಭೀಮಣ್ಣ ಇಂಗಳೆ, ಯಲ್ಲಪ್ಪ ರಾಮಜಿ, ಭೀಮಶಿ ರಾಮಜಿ, ಶಿವಾಜಿ ರಾಮಜಿ, ಈರಪ್ಪ ಘೋರ್ಪಡೆ, ಶಂಕರ ಘೋರ್ಪಡೆ, ನಾಗಪ್ಪ ಹಾಳಕೇರೆ, ಲಕ್ಷ್ಮಣ ತಿರಕೋಜಿ, ಪರಸಪ್ಪ ಕಲ್ಲುಡಿ, ಯಲ್ಲಪ್ಪ ಮಾಲಗಿತ್ತಿ, ಸಂತೋಷ ಪವಾರ, ಪರಸಪ್ಪ ಚಿಟಗಿ, ಮಂಜುನಾಥ ದುಮಾಳ, ಕಳಕಪ್ಪ ಹೂಗಾರ, ಮುತ್ತು ಅರೆಗಂಜಿ ಸೇರಿದಂತೆ ನೂರಾರು ಜನ ಸೇರ್ಪಡೆಯಾದರು. ಮುಖಂಡರಾದ ಸಿದ್ದಪ್ಪ ಬಂಡಿ, ಅಶೋಕ ಬಾಗಮಾರ ರಾಜು ಸಾಂಗ್ಲಿಕಾರ, ಎಚ್.ಎಸ್. ಸೋಂಪೂರ, ಪ್ರಭು ಚವಡಿ, ಮುರ್ತುಜಾ ಡಾಲಾಯತ್, ಚಂಬಣ್ಣ ಚವಡಿ, ಅರಿಹಂತ ಬಾಗಮಾರ, ಶಶಿಧರ ಹೂಗಾರ
ಡಾ|ಪ್ರಶಾಂತ್ ಪಾಟೀಲ, ಪ್ರಶಾಂತ್ ರಾಠೋಡ, ಉಮೇಶ ರಾಠೋಡ, ಅಂದಪ್ಪ ರಾಠೋಡ, ಮಂಜುಳಾ ರೇವಡಿ, ಸುಮಂಗಲಾ ಇಟಗಿ, ಶಾರದಾ ರಾಠೋಡ ಸೇರಿದಂತೆ ಇತರರು ಇದ್ದರು