ರೋಣ : ನರಗುಂದ ವಿಧಾನಸಭಾ ಮತಕ್ಷೇತ್ರ ಬಿಜೆಪಿ ಅಭ್ಯರ್ಥಿ ಸಚಿವ ಸಿ.ಸಿ. ಪಾಟೀಲ ಪರವಾಗಿ ಹುನಗುಂಡಿ ಗ್ರಾಮದ ಮಹಿಳರೊಂದಿಗೆ ರೋಡ್ ಶೋ ಪಾದಯಾತ್ರೆ ಮೂಲಕ ಬಿಜೆಪಿಪರ ಬಿರುಸಿನ ಪ್ರಚಾರ ಕೈಗೊಂಡಿರು.
ಕಾರ್ಯಕ್ರಮದಲ್ಲಿ ಬಸವಂತಪ್ಪ ಎಚ್ ತಳವಾರ ಮಾತನಾಡಿ ಹುನಗುಂಡಿ ಗ್ರಾಮದಲ್ಲಿ ಈಗಾಗಲೇ ಅಭಿವೃದ್ದಿ ಕಾಮಗಾರಿಗಳನ್ನು 2.66ಕೋಟಿ. ರೂಪಾಯಿ ವೆಚ್ಚದ ಕಾಮಗಾರಿಗಳನ್ನು ಅಭಿವೃದ್ಧಿಪಡಿಸಿದ್ದು ಹಾಗೂ ಗ್ರಾಮದಲ್ಲಿ ಸಿ ಸಿ ರಸ್ತೆ ಪೂರ್ಣ ಕಾಮಗಾರಿ 67.ಲಕ್ಷ ಬಸ್ ನಿಲ್ದಾಣದ ನಿರ್ಮಾಣ ಊರಿನ ದೇವಸ್ಥಾನಗಳ ನಿರ್ಮಾಣ ಪರಿಶಿಷ್ಟ ಪಂಗಡ ಎಸ್ ಟಿ ಕಾಲೋನಿಯಲ್ಲಿ ಸಿ ಸಿ ರಸ್ತೆ ಗ್ರಾಮದಲ್ಲಿ ಮಹಿಳೆಯರಿಗೆ ಸ್ವ-ಸಹಾಯ ಸಂಘಕ್ಕೆ ನೂತನ ಸಾರಥಿ ಪರಿಶಿಷ್ಟ ಪಂಗಡದ/ಪರಿಶಿಷ್ಟ ಜಾತಿಗಳಿಗೆ 2.50.000ಗಳು ಸೇರಿದಂತೆ ಮತ್ತು ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ 1.00.000/ಗಂಗಾ ಕಲ್ಯಾಣ ಯೋಜನೆಯಲ್ಲಿ ಪರಿಶಿಷ್ಟ ಪಂಗಡ/ಪರಿಶಿಷ್ಟ ಜಾತಿಗಳಿಗೆ ಮುರಾರ್ಜಿ ಮಾಡಿದ್ದಾರೆ. ಮಹಿಳಿಯರಿಗೆ ಟೈಲರಿಂಗ್ ಯಂತ್ರ ವ್ಯವಸ್ಥೆ ಹಿಂದುಳಿದ ವರ್ಗದವರಿಗೆ ಸಾಲ ವೈಯಕ್ತಿಕ ಸಾಲ ಮುಂತಾದ ಯೋಜನೆಗಳನ್ನು ಗ್ರಾಮದಲ್ಲಿ ನಿರ್ಮಿಸಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ಬಿಜೆಪಿ ಅಧಿಕಾರ ಅವಧಿಯಲ್ಲಿ ಆಗಿವೆ ಈ ಬಾರಿ ಮತ್ತೆ ಬಿಜೆಪಿ ಪಕ್ಷಕ್ಕೆ ಮತ ನೀಡಬೇಕು ಎಂದು ಹೇಳಿದರು.
ಈ ಸಂಧರ್ಭದಲ್ಲಿ ಶ್ವೇತಾ ಪಟೇಲ, ಅನಿತಾ ಪಾಟೀಲ,ಎಂ ಎಚ್.ಜಂತ್ಲಿ, ಎಸ್ ಸಿ. ಜಂಗಣ್ಣವರ,ಆರ್.ಬಿ.ಗೋಳಪ್ಪನವರ, ಆರ್. ಎಚ್. ಪೂಜಾರ.ಎ.ಬಿ.ದೊಡ್ಡಗೌಡ್ರ ,ಎ.ಬಿ.ಮಂಡಸೊಪ್ಪಿ ,ಬಸವಪ್ರಭು ವಸ್ತ್ರದ,ಶ್ರೀಧರ್ ವಸ್ತ್ರದ, ವಿನೋದ್ ಸಾಲಿಮನಿ. ಹಾಗೂ ಗ್ರಾಮದ ಗುರು ಹಿರಿಯರು ಯುವಕ ಮಿತ್ರರು ಪಾಲ್ಗೊಂಡಿದ್ದರು.